ಅಂಕೋಲಾ ಜುಲೈ 31: ತಾಲೂಕಿನಲ್ಲಿ ಶನಿವಾರ 14 ಹೊಸ ಕೊವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗುವುದರೊಂದಿಗೆ, ಒಟ್ಟೂ ಸಕ್ರಿಯ ಪ್ರಕರಣಗಳ ಸಂಖ್ಯೆ 65 ಕ್ಕೆ ಏರಿಕೆಯಾಗಿದೆ. ಸೋಂಕು ಮುಕ್ತರಾದ 8 ಜನರನ್ನು ಬಿಡುಗಡೆಗೊಳಿಸಲಾಗಿದೆ . ವಿವಿಧ ಆಸ್ಪತ್ರೆಗಳಲ್ಲಿ 5 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕು ಲಕ್ಷಣವುಳ್ಳ 60 ಜನರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಈ ವರೆಗೆ ತಾಲೂಕಿನಲ್ಲಿ ಒಟ್ಟೂ 64 ಜನರು ಕರೊನಾದಿಂದ ಮೃತರಾಗಿದ್ದಾರೆ. ಆರಂಭದಿಂದ ಇಲ್ಲಿಯವರೆಗೆ 3383 ಜನರಲ್ಲಿ ಸೋಂಕು ಧ್ವಡಪಟ್ಟಿದೆ.
ಆಗಸ್ಟ್ 1ರಿಂದ ಮೀನುಗಾರಿಕೆ ನಿಷೇಧ ತೆರವುಗೊಳ್ಳಲಿದ್ದು, ಯಾಂತ್ರಿಕೃತ ಮೀನುಗಾರಿಕೆ ಪುನರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಜುಲೈ 31ರಂದು ಮೀನುಗಾರರಿಗಾಗಿಯೇ ವಿಶೇಷ ಕೋಟಾದಡಿ ವ್ಯಾಕ್ಸಿನೇಷನ್ ಕ್ಯಾಂಪ್ ಆರಂಭಿಸಲಾಗಿತ್ತು.
ಬೆಲೇಕೇರಿ (434), ಕೇಣಿ (275), ಮಂಜಗುಣಿ (325),ಬೆಳಂಬಾರ ( 391), ಅಗ್ರಗೋಣ (142),ಹಾರವಾಡಾ (203), ಸೇರಿ ಒಟ್ಟೂ 1770 ಡೋಸ್ ಲಸಿಕೆ ನೀಡಲಾಗಿದೆ. ಆಗಸ್ಟ್ 1ರಂದು ತಾಲೂಕಿನ ಯಾವುದೇ ಪ್ರದೇಶಗಳಲ್ಲಿ ಲಸಿಕಾಕರಣ ನಡೆಸಲಾಗುತ್ತಿಲ್ಲ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ