Info
Trending

ಉತ್ತರಕನ್ನಡದಲ್ಲಿ ನಾಳೆ‌ ಲಭ್ಯವಿರುವ ಲಸಿಕೆಯ ವಿವರ: ಎಲ್ಲೆಲ್ಲಿ ಎಷ್ಟು ವಾಕ್ಸಿನ್ ಇದೆ‌ ನೋಡಿ?

ಕಾರವಾರ: ನಾಳೆ ಉತ್ತರಕನ್ನಡದಲ್ಲಿ ಒಟ್ಟು 1,850 ವ್ಯಾಕ್ಸಿನ್ ಲಭ್ಯವಿದೆ. ಇವುಗಳಲ್ಲಿ 770 ಕೋವಿಶೀಲ್ಡ್, 1080 ಕೋವ್ಯಾಕ್ಸಿನ್ ಲಸಿಕೆ ಎಂದು ಮಾಹಿತಿ ನೀಡಲಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಕೋರಲಾಗಿದೆ..@ವಿಸ್ಮಯ ನ್ಯೂಸ್

ಕುಮಟಾದಲ್ಲಿ 140, ಶಿರಸಿ 40, ಯಲ್ಲಾಪುರದಲ್ಲಿ 100, ಹೊನ್ನಾವರದಲ್ಲಿ 170, ಜೋಯ್ಡಾದಲ್ಲಿ 130, ಮುಂಡಗೋಡದಲ್ಲಿ 160, ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ 30 ವ್ಯಾಕ್ಸಿನ್ ಲಭ್ಯವಿದೆ.

ಕೋವಾಕ್ಸಿನ್ ಎಲ್ಲೆಲ್ಲಿ ವ್ಯಾಕ್ಸಿನ್ ಲಭ್ಯ?:

ಕಾರವಾರದಲ್ಲಿ 160, ಹೊನ್ನಾವರದಲ್ಲಿ 10, ಶಿರಸಿಯಲ್ಲಿ 490, ಜಿಲ್ಲಾಸ್ಪತ್ರೆಯಲ್ಲಿ 420 ಡೋಸ್ ವಾಕ್ಸಿನ್ ಲಭ್ಯವಿದೆ.

ಹೊನ್ನಾವರದಲ್ಲಿ ನಾಳೆ ವಾಕ್ಸಿನೇಷನ್ ಎಲ್ಲೆಲ್ಲಿ?

ಹೊನ್ನಾವರ: ನಾಳೆ ಇಡಗುಂಜಿ ದೇವಸ್ಥಾನದ ಹತ್ತಿರ 170 ಕೊವೀಸಿಲ್ಡ್ ನೀಡಲಾಗುತ್ತದೆ, 50-50 ಮಾದರಿಯಲ್ಲಿ ಪಸ್ಟ್ ಡೋಸ್-ಸೆಕೆಂಡ್ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.@ವಿಸ್ಮಯ ನ್ಯೂಸ್

ಜಿಲ್ಲೆಯಲ್ಲಿ ಇಂದು ದಾಖಲಾದ ಕೋವಿಡ್ ವಿವರ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಒಟ್ಟು 47 ಕೋವಿಡ್ ಕೇಸ್ ದಾಖಲಾಗಿದೆ. ಕಾರವಾರ 7, ಅಂಕೋಲಾ 5, ಕುಮಟಾ 9, ಹೊನ್ನಾವರ 9, ಭಟ್ಕಳ: 2, ಶಿರಸಿ 9, ಸಿದ್ದಾಪುರ 3 , ಯಲ್ಲಾಪುರ 2, ಮತ್ತು ಹಳಿಯಾಳದಲ್ಲಿ 1 ಕೇಸ್ ದೃಢಪಟ್ಟಿದೆ.

ಇದೇ ವೇಳೆ ಇಂದು ಜಿಲ್ಲೆಯ ವಿವಿಧ ಆಸ್ಪತ್ರೆಯಿಂದ 62 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಕಾರವಾರ 10, ಅಂಕೋಲಾ 3, ಕುಮಟಾ 14, ಹೊನ್ನಾವರ 16, ಭಟ್ಕಳ 9, ಶಿರಸಿ 3, ಸಿದ್ದಾಪುರ 1, ಯಲ್ಲಾಪುರ 6 ಮಂದಿ ಮನೆಗೆ ಮರಳಿದ್ದಾರೆ. ಜಿಲ್ಲೆಯಲ್ಲಿ ಇಂದು ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ.

ಅಂಕೋಲಾದ ಮಾಹಿತಿ

ಅಂಕೋಲಾ : ತಾಲೂಕಿನಲ್ಲಿ ಶನಿವಾರ 5 ಹೊಸ ಕೊವಿಡ್ ಕೇಸುಗಳು ದಾಖಲಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 91 ಕ್ಕೆ ಏರಿಕೆ ಆಗಿದೆ. ತಾಲೂಕಾಸ್ಪತ್ರೆಯಲ್ಲಿ (15), ಕಾರವಾರ (ಕ್ರಿಮ್ಸ್ ನಲ್ಲಿ 5) ಸೇರಿ ಒಟ್ಟೂ 20 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ಮುಕ್ತರಾದ 3 ಜನರನ್ನು ಬಿಡುಗಡೆಗೊಳಿಸಲಾಗಿದೆ.ಸೋಂಕು ಲಕ್ಷಣಗಳುಳ್ಳ ಇತರೆ 71 ಜನರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಇಂದು ತಾಲೂಕಿನ ಗಾಬಿತಕೇಣಿ (176), ಉಳುವರೆ ( 163), ಬೆಳಸೆ (155), ಅಗಸೂರು (167), ಸ್ವಾತಂತ್ರ‍್ಯ ಸಂಗ್ರಾಮ ಭವನ (211) ಸೇರಿ 872 ಕೊವಿಡ್ ಲಸಿಕೆ ನೀಡಲಾಗಿದೆ.

ವಿಸ್ಮಯ ನ್ಯೂಸ್, ಕಾರವಾರ, ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

Back to top button