Join Our

WhatsApp Group
Info
Trending

ಸೇವೆ ಮತ್ತು ಸಮರ್ಪಣೆ ಅಭಿಯಾನದ ಅಡಿಯಲ್ಲಿ “ರಕ್ತದಾನ “ಶಿಬಿರ

ಭಾರತೀಯ ಜನತಾ ಪಾರ್ಟಿ ಶಿರಸಿ ಗ್ರಾಮೀಣ ಮಂಡಲದಿಂದ  ಶ್ರೀ ನರೇಂದ್ರ ಮೋದಿಜಿಯವರ 71ನೇ ಹುಟ್ಟು ಹಬ್ಬದ ನಿಮಿತ್ತ, “ಸೇವೆ ಮತ್ತು ಸಮರ್ಪಣೆ “ಅಭಿಯಾನದ ಅಡಿಯಲ್ಲಿ ಬದನಗೋಡ ಮಹಾಶಕ್ತಿ ಕೇಂದ್ರದ ಅಂಡಗಿಯಲ್ಲಿ 2ನೇ “ರಕ್ತದಾನ “ಶಿಬಿರವು ಜರುಗಿತು. ರಕ್ತದಾನ ಶಿಬಿರದ ಉದ್ಘಾಟನೆಯನ್ನು ಯಲ್ಲಾಪುರ -ಮುಂಡಗೋಡ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಎಸ್ ಪಾಟೀಲ್ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮೀಣ ಮಂಡಲದ ಅಧ್ಯಕ್ಷರಾದ ಶ್ರೀ ನರಸಿಂಹ ಹೆಗಡೆ ವಹಿಸಿದ್ದರು.

ಡಾಕ್ಟರ್ ಸುಮನ್ ಹೆಗಡೆ ರಕ್ತದಾನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ರಕ್ತದಾನಿಗಳಿಗೆ ನೀಡಿದರು. ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ  ಕಾರ್ಯದರ್ಶಿಗಳಾದ ಶ್ರೀ ಚಂದ್ರು ಎಸಳೆ, ಶ್ರೀಮತಿ ಉಷಾ ಹೆಬ್ಬಾರ್, ಜಿಲ್ಲಾ ಅರೋಗ್ಯ ಸಂಚಾಲಕರಾದ ಶ್ರೀ ಗುರುಪ್ರಸಾದ ಹೆಗಡೆ,ತಾಲೂಕ್ ಪ್ರಧಾನ್ ಕಾರ್ಯದರ್ಶಿಗಳಾದ ಶ್ರೀ ರಘುಪತಿ ಭಟ್, ಶ್ರೀ ರಮೇಶ ನಾಯ್ಕ್, ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಸಚಿನ್ ಭಟ್, ಒಬಿಸಿ ಮೋರ್ಚಾ ಅಧ್ಯಕ್ಷರಾದ ಶ್ರೀ ಸತೀಶ ನಾಯ್ಕ್, ಬದನಗೋಡ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಶ್ರೀ ಪ್ರಶಾಂತ ಗೌಡ ಮತ್ತು ಪಕ್ಷದ ಮುಖಂಡರು, ಮೋರ್ಚಾ ಮತ್ತು ಕಾರ್ಯಕರ್ತರು ಉಪಸ್ಥಿರಿದ್ದರು.

Check Also
Close
Back to top button