Info
Trending

ಹಿರೇಗುತ್ತಿ ಹೈಸ್ಕೂಲಿನಲಿ ವಿದ್ಯಾರ್ಥಿಗಳ ಪಾಲಕರ ಸಭೆ ಆಯೋಜನೆ

ಕುಮಟಾ: “ವಿದ್ಯಾರ್ಥಿಗಳ ಕಲಿಕೆಯಲ್ಲಿ ಶಿಕ್ಷಕರ ಜೊತೆಗೆ ಪಾಲಕರ ಜವಬ್ದಾರಿಯೂ ಅತೀ ಮುಖ್ಯ ಪ್ರಯತ್ನ ಮತ್ತು ಶೃದ್ಧೆಯಿಂದ ಎಂತಹ ವಿದ್ಯೆಯನ್ನಾದರೂ ಕರಗತ ಮಾಡಿಕೊಳ್ಳಬಹುದು” ಎಂದು ಹಿರೇಗುತ್ತಿ ಹೈಸ್ಕೂಲ್ ಆಡಳಿತ ಮಂಡಳಿ ಮಹಾತ್ಮಗಾಂಧೀ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಹೊನ್ನಪ್ಪ ಎನ್ ನಾಯಕ ನುಡಿದರು.

ಅವರು ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನಲ್ಲಿ ನಡೆದ ಪಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ “ಈ ಕಾರ್ಯಕ್ರಮದಲ್ಲಿ ತಮ್ಮ ಮಕ್ಕಳ ಶಿಕ್ಷಣದ ಗುಣಮಟ್ಟ ಹಾಗೂ ಕಲಿಕೆಯಲ್ಲಿ ಮಕ್ಕಳ ಫಲಿತಾಂಶದ ಗುಣಮಟ್ಟ ಮತ್ತು ಭವಿಷ್ಯ ಹಾಗೂ ಪರೀಕ್ಷಾ ದೃಷ್ಟಿಯಿಂದಲೂ ತಮ್ಮ ಮಕ್ಕಳನ್ನು ಯಾವ ರೀತಿಯ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬುವುದರ ಉದ್ದೇಶದಿಂದ ಪಾಲಕರ ಸಭೆಯನ್ನು ಆಯೋಜಿಸಿದ್ದೇವೆ” ಎಂದರು.

ಹೈಸ್ಕೂಲ್ ಮುಖ್ಯಾಧ್ಯಾಪಕ ರೋಹಿದಾಸ ಎಸ್ ಗಾಂವಕರ ಮಾತನಾಡಿ “ಸುಖಾರ್ಥಿಯಾದವನು ವಿದ್ಯೆಯನ್ನು ಬಿಡಬೇಕು, ವಿದ್ಯಾರ್ಥಿಯಾದವನು ಸುಖವನ್ನು ಬಿಡಬೆಕು, ಸುಖಾರ್ಥಿಯಾದವನಿಗೆ ವಿದ್ಯೆ ಎಲ್ಲಿಂದ? ಮತ್ತು ವಿದ್ಯಾರ್ಥಿಯಾದವನಿಗೆ ಸುಖ ಎಲ್ಲಿಂದ? ಸಮಯ ಮತ್ತು ಗುರಿ ಇವೆರಡೂ ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಮುಖವಾದದ್ದು” ಎಂದರು.

ಆನಂದು ಬಿ ಗಾಂವಕರ ಜಿಲ್ಲಾಧ್ಯಕ್ಷರು ಪ್ರಾ.ಶಾ.ಶಿಕ್ಷಕ ಸಂಘ ಉ.ಕ ಮಾತನಾಡಿ “ವಿದ್ಯೆ ಯಾರೋಬ್ಬನ ಆಸ್ತಿಯಲ್ಲ ಅದು ಸಾರ್ವತ್ರಿಕ ಮತ್ತು ಸಮದರ್ಶಿ ಅದು ಪ್ರಯತ್ನ ಮತ್ತು ಶೃದ್ಧೆಯಿಂದ ಫಲಿಸುವಂತಹದು” ಹಿಂದೆ ಗುರುಕುಲ ಶಿಕ್ಷಣ ಪದ್ಧತಿ ಇತ್ತು. ಗುರುವಿನ ಹತ್ತಿರ ಹೋಗಿ ಅವರ ಸೇವೆಯಲ್ಲಿ ತೊಡಗಿ ಶಿಕ್ಷಣ ಹೊಂದಬೇಕಾಗಿತ್ತು ಸ್ವಲ್ಪ ಕಾಲದ ನಂತರ ‘ಛಡಿಯಾಮ ಛಂ,,….ಛ ವಿದ್ಯಾಯ ಘಂ ಘಂ ಬಂತು. ಈಗ ಶಿಕ್ಷಣ ಮಕ್ಕಳ ಹಕ್ಕಾಗಿದೆ” ಎಂದರು.

ಶಿಕ್ಷಕ ವಿದ್ಯಾರ್ಥಿ ಪಾಲಕ ಪ್ರತಿನಿಧಿ ಗಣಪತಿ ಗುನಗಾ ಮೊಗಟಾ ಮಾತನಾಡಿ ಶಿಕ್ಷಣ ಕಾರ್ಯದಲ್ಲಿ ಬಾಲಕ-ಪಾಲಕ-ಶಿಕ್ಷಕ ಕಾಯ,ವಾಚಾ,ಮನಸ್ಸಾ ತೊಡಗಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳು ಯಶಸ್ಸು ಪಡೆಯಲು ಸಾಧ್ಯ. ನಾನು ಕಲಿತ ಹೈಸ್ಕೂಲ್ ಆಧುನಿಕತೆಗೆ ತಕ್ಕಂತೆ ಶಿಕ್ಷಣ ನೀಡುತ್ತಿರುವುದು ನನಗೆ ತುಂಬಾ ಹೆಮ್ಮೆ ಅನಿಸಿದೆ” ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಮೋಹನ ಬಿ ಕೆರೆಮನೆ, ಪಾಲಕ ಪ್ರತಿನಿಧಿ ನಂದಿತಾ ನಾಗರಾಜ ಪೈ ಹಾಗೂ ಶಿಕ್ಷಕರಾದ ಬಾಲಚಂದ್ರ ಹೆಗಡೆಕರ, ವಿಶ್ವನಾಥ ಬೇವಿನಕಟ್ಟಿ, ನಾಗರಾಜ ನಾಯಕ, ಇಂದಿರಾ ನಾಯಕ, ಶಿಲ್ಪಾ ನಾಯಕ, ಜಾನಕಿ ಗೊಂಡ, ಕವಿತಾ ಅಂಬಿಗ, ದೇವಾಂಗಿನಿ ನಾಯಕ, ಗೋಪಾಲಕೃಷ್ಣ ಗುನಗಾ ಉಪಸ್ಥಿತರಿದ್ದರು. ರಕ್ಷಿತಾ ಅಂಬಿಗ ಸಂಗಡಿಗರು ಪ್ರಾರ್ಥನೆ/ಸ್ವಾಗತಗೀತೆ ಹಾಡಿದರು. ಎನ್ ರಾಮು ಹಿರೇಗುತ್ತಿ ಕಾರ್ಯಕ್ರಮ ನಿರ್ವಹಿಸಿದರು. ಮಹಾದೇವ ಗೌಡ ವಂದಿಸಿದರು. ಎಲ್ಲಾ ವಿದ್ಯಾರ್ಥಿಗಳ ಪಾಲಕ ಪೋಷಕರು ಹಾಜರಿದ್ದರು.

ವರದಿ:ಎನ್ ರಾಮು ಹಿರೇಗುತ್ತಿ

Back to top button