ವರ್ಷ ಪೂರ್ಣಗೊಳ್ಳುವ ಮೊದಲೇ ವರ್ಗಾವಣೆಗೊಂಡ ಶೃತಿ ಗಾಯಕವಾಡ| ಅಂಕೋಲಾ ಪುರಸಭೆ ನೂತನ ಮುಖ್ಯಾಧಿಕಾರಿಯಾಗಿ ಎನ್ ಎಂ ಮೇಸ್ತ ?
ಅಂಕೋಲಾ: ಪುರಸಭೆ ಮುಖ್ಯಾಧಿಕಾರಿ (ಗ್ರೇಡ್ 1 ) ಆಗಿ ಸೇವೆ ಸಲ್ಲಿಸುತ್ತಿದ್ದ ಶೃತಿ ಗಾಯಕವಾಡ್, ತಮ್ಮ ಸೇವಾವಧಿಯ ಒಂದು ವರ್ಷ ಪೂರ್ಣಗೊಳಿಸುವ ಮೊದಲೇ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದು, ತೆರವಾಗಲಿರುವ ಅವರ ಸ್ಥಾನದಲ್ಲಿ ಅಂಕೋಲಾ ಪುರಸಭೆಯ ನೂತನ ಮುಖ್ಯಾಧಿಕಾರಿಯಾಗಿ ಎನ್. ಎಂ.ಮೇಸ್ತ ಅವರು ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಶಿರಸಿ ನಗರಸಭೆ ಕಛೇರಿ ವ್ಯವಸ್ಥಾಪಕರಾಗಿ ಸೇವೆಸಲ್ಲಿಸುತ್ತಿರುವ ಮೇಸ್ತ ಅವರನ್ನು ಅಂಕೋಲಾ ಪುರಸಭೆ ಮುಖ್ಯಾಧಿಕಾರಿಯಾಗಿ ಸರ್ಕಾರ ಅಧಿಸೂಚನೆ ಹೊರಡಿಸಿದೆ ಎನ್ನಲಾಗಿದೆ. ಜಿಲ್ಲೆಯ ಹೊನ್ನಾವರ ಮೂಲದ ಮೇಸ್ತ ಇವರು,2004 ರಲ್ಲಿ ಭಟ್ಕಳ ಪುರಸಭೆಯಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿ ಸೇವೆ ಆರಂಭಿಸಿ,2011 ರಿಂದ 2013 ರ ವರೆಗೆ ಕಾರವಾರ ಜಿಲ್ಲಾಧಿಕಾರಿ ಕಚೇರಿ,
2014 ರಿಂದ 2015ರ ವರೆಗೆ ಯಲ್ಲಾಪುರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿ, 2016 ರಿಂದ 2017 ಕುಮಟಾ ಪುರಸಭೆ ಕಚೇರಿ ವ್ಯವಸ್ಥಾಪಕರಾಗಿ ಮತ್ತು ಯಲ್ಲಾಪುರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ನಂತರ2018 ರಿಂದ 2019 ರ ಅವಧಿಯಲ್ಲಿ ಅಂಕೋಲಾ ಪುರಸಭೆ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, 2019 ರಿಂದ 2021 ರ ವರೆಗೆ ಹೊನ್ನಾವರದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿ, ತದನಂತರ ಪ್ರಸಕ್ತ ಅವಧಿಯವರೆಗೆ ಶಿರಸಿ ನಗರಸಭೆ ಕಛೇರಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಜಿಲ್ಲೆಯ ವಿವಿಧೆಡೆ ನಾನಾ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ,ಹಾಗೂ ಈ ಹಿಂದೆ ಅಂಕೋಲಾದಲ್ಲಿ ಸೇವೆ ಸಲ್ಲಿಸಿ ಒಟ್ಟಾರೆಯಾಗಿ ಸುಮಾರು 17 ವರ್ಷ ಆಡಳಿತಾತ್ಮಕ ಅನುಭವ ಹೊಂದಿರುವ ಎನ್ ಎಂ ಮೇಸ್ತ ಇದೀಗ ಮತ್ತೊಮ್ಮೆ ಅಂಕೋಲಾ ಪುರಸಭೆ ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನಲಾಗಿದ್ದು ಈ ಕುರಿತಂತೆ ಸೋಮವಾರ ಸ್ಪಷ್ಟ ಚಿತ್ರ ದೊರೆಯುವ ಸಾಧ್ಯತೆ ಇದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ