ಕಾರವಾರ: ಮೂಲತ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಮೋಹಿತ್ ಹುಳ್ಸೆ, ನಾರ್ವೆಯಲ್ಲಿ ಜುಲೈ 9 ರಿಂದ ಜುಲೈ 1ರ ವರೆಗೆ ನಡೆದ ವಿಶ್ವ ಅಂತರಾಷ್ಟ್ರೀಯ ಮೆಥಮೆಟಿಕಲ್ ಓಲಂಪಿಯಾಡ್ ಫೈನಲ್ ನಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ವಿಶ್ವದ ಖ್ಯಾತ ಗಣಿತಶಾಸ್ತ್ರಜ್ಞರು ತೀರ್ಪುಗಾರರಾಗಿರುವ, 100ಕ್ಕೂ ಅಧಿಕ ದೇಶದ ವಿದ್ಯಾರ್ಥಿಗಳು ಭಾಗವಹಿಸಿದ್ದ ವಿಶ್ವಮಟ್ಟದ ಈ ಓಲಂಪಿಯಾಡ್ನಲ್ಲಿ ಮೋಹಿತ್ ಹುಳ್ಸೆ ಸಾಧನೆ ಮಾಡಿದ್ದು, ಕನ್ನಡಿಗನ ಸಾಧನೆ ಇಡೀ ಕರ್ನಾಟಕಕ್ಕೆ ಹೆಮ್ಮೆ ತಂದಿದೆ. ಕಳೆದ ವರ್ಷ ರಷ್ಯಾದಲ್ಲಿ ನಡೆದ ಓಲಂಪಿಯಾಡ್ ನಲ್ಲಿ ಮೋಹಿತ್ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದರು.
ಮೋಹಿತ್ ಸಾಧನೆ: ಆಶಿಯಾ ಪೆಸಿಫಿಕ್ ಇನ್ ಫರ್ಮ್ಯಾಟಿಕ್ ಒಲಿಂಪಿಯಾಡ್ ನಲ್ಲಿ ಭಾಗವಹಿಸಿ ಕಂಚಿನ ಪದಕ, ಎಚ್ ಪಿ ಕೋಡ್ ವಾರ್ ಇಂಡಿಯಾದ ಆಡಿಷನ್ ನಲ್ಲಿ ಮೊದಲ ಸ್ಥಾನ , ಎನ್ ಎಮ್ ಟಿ ಸಿ ರಾಷ್ಟ್ರೀಯ ಗಣಿತ ಪ್ರತಿಭಾನ್ವೇಷಣೆಯ ಸ್ಪರ್ಧೆಯಲ್ಲಿ ಮೊದಲ ಬಹುಮಾನ ( ಸತತವಾಗಿ ಎರಡು ಸಲ) , ಭಾರತೀಯ ಕಿಶೋರ್ ವೈಜ್ನಾನಿಕ ಪ್ರೋತ್ಸಾಹ ಯೋಜನಾ ಪರೀಕ್ಷೆಯಲ್ಲಿ ಕರ್ನಾಟಕಕ್ಕೆ ಮೊದಲ Rank.. ಹೀಗೆ ಪದಕಗಳ ಪಟ್ಟಿ ಬೆಲೆಯುತ್ತಲೇ ಹೋಗುತ್ತದೆ. ಬೆಂಗಳೂರಿನಲ್ಲಿ ಶಾಲೆಯಲ್ಲಿ ದ್ವಿತೀಯ ಪಿಯುಸಿ ಮುಗಿಸಿ ಇದೀಗ ಅಮೆರಿಕದಲ್ಲಿರುವ ಜಗತ್ತಿನ ಅತ್ಯಂತ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾಲಯ ಮ್ಯಾಸಚ್ಯೂಟ್ಸ್ ನಲ್ಲಿ ಪ್ರವೇಶ ಪಡೆದುಕೊಂಡಿದ್ದಾನೆ ಮೋಹಿತ್.
ಮೋಹಿತ್ ಹುಳ್ಸೆ ಅವರು ಖ್ಯಾತ ವೈದ್ಯರಾದ ನಾರಾಯಣ ಹುಳ್ಸೆ ಮತ್ತು ಖ್ಯಾತ ಪೀಡಿಯಾಟ್ರಿಷಿಯನ್ಅಂಜನಾ ಹುಳ್ಸೆ ಅವರ ಪುತ್ರ. ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಪ್ರತಿಷ್ಠಿತ ಫೋರ್ಟಿಸ್ ಆಸ್ಪತ್ರೆಯಲ್ಲಿ ಆರ್ಥೋಪೆಡಿಕ್ಸ್ ನಿರ್ದೇಶಕಾರಾದ ಡಾ. ನಾರಾಯಣ ಹುಳ್ಸೆ ಅವರು ಮೂಲತ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನವರು. ನಾರಾಯಣ ಹುಳ್ಸೆ ಅವರು ಕೂಡಾ ಅತ್ಯಂತ ಪ್ರತಿಭಾನ್ವಿತರಾಗಿದ್ದು, ಈಗಾಗಲೇ ಸಾವಿರಕ್ಕೂ ಅಧಿಕ ಜಾಯಿಂಟ್ ರಿಪ್ಲೇಸ್ ಮೆಂಟ್ ಮಾಡಿ, ಸಾಧನೆ ಮಾಡಿದ್ದು, ಹಲವರ ಬಾಳಿನ ಆಶಾಕಿರರಾಗಿದ್ದಾರೆ.
ತಂದೆಯoತೆಯೇ ಮಗ ಕೂಡಾ, ಚಿಕ್ಕ ವಯಸ್ಸಿನಲ್ಲೇ ಸಾಧನೆಯಹಾದಿಯಲ್ಲಿ ಮುನ್ನುಗ್ಗಿದ್ದು, ನಿಜಕ್ಕೂ ಹೆಮ್ಮೆಯ ವಿಷಯವೇ ಸರಿ..
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್