Important
Trending

ಸರ್ಕಾರಿ ಜಾಗದಲ್ಲಿ ಅಸ್ತಿಪಂಜರದ ರೂಪದಲ್ಲಿ ಅಪರಿಚಿತ ಶವ ಪತ್ತೆ: ತಿಂಗಳ‌ ಹಿಂದೆ ಮೃತಪಟ್ಟಿರುವ ಶಂಕೆ

40 ರಿಂದ 50 ವರ್ಷದ ಆಸುಪಾಸಿನ ವ್ಯಕ್ತಿಯಾಗಿರುವುದಾಗಿ ಅಂದಾಜು

ಭಟ್ಕಳ : ತಾಲೂಕಿನ ಜಾಲಿ ಪಟ್ಟಣ ಪಂಚಾಯತ ವ್ಯಾಪ್ತಿಯ ಕಾರಗದ್ದೆ ಹುರುಳಿಯ ಗೊಂಡರ ಕೇರಿಯ ನಿರ್ಜನ ಪ್ರದೇಶದಲ್ಲಿ ಅಪರಿಚಿತ ಶವವೊಂದು, ಅಸ್ಥಿ ಪಂಜರದ ರೂಪದಲ್ಲಿ ಪತ್ತೆಯಾಗಿದೆ.

ಸುಮಾರು 40 ರಿಂದ 50 ವರ್ಷದ ಆಸುಪಾಸಿನ ವ್ಯಕ್ತಿಯಾಗಿರುವುದಾಗಿ ಅಂದಾಜಿಸಲಾಗಿದೆ. ಕಳೆದ ಒಂದು ತಿಂಗಳ ಹಿಂದೆ ಸಾವನ್ನಪ್ಪಿರಬಹುದಾಗಿ ಅಂದಾಜಿಸಲಾಗಿದೆ. ಅಸ್ತಿಪಂಜರ ಪತ್ತೆಯಾದ ಸ್ಥಳ ಸರ್ಕಾರಿ ಹಾಡಿ ಜಾಗವಾಗಿದೆ.

ಸ್ಥಳಕ್ಕೆ ಗ್ರಾಮೀಣ ಠಾಣೆಯ ಸಿಪಿಐ ಮಹಾಬಲೇಶ್ವರ ನಾಯ್ಕ, ಪಿ.ಎಸ್.ಐ ಭರತ್, ಹಾಗೂ ಸಿಬ್ಬಂದಿಗಳಾದ ದೀಪಕ್,ಚಂದ್ರಕಾಂತ ಕುಂಬಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಮಾಜ ಸೇವಕರಾದ ಮಂಜು ನಾಯ್ಕ ಮುಟ್ಟಳ್ಳಿ ಸ್ಥಳದಲ್ಲಿ ಮೃತ ದೇಹದ ಶೇಷವನ್ನು ಒಟ್ಟುಗೂಡಿಸಿ ಅಂತ್ಯಕ್ರಿಯೆ ಮಾಡಲು ಪೊಲೀಸರಿಗೆ ಸಹಕರಿಸಿದ್ದಾರೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

Back to top button