ಎಲೆಕ್ಟ್ರಿಕಲ್ ವಸ್ತುಗಳ ದುರಸ್ತಿ ಹಾಗೂ ಕೃಷಿ ಉದ್ಯಮಿ ಉಚಿತ ತರಬೇತಿ: ಊಟ-ವಸತಿ ಸೌಲಭ್ಯ: ಮೊದಲು ಬಂದವರಿಗೆ ಆದ್ಯತೆ
ಭಟ್ಕಳ: 30 ದಿನಗಳ ಗೃಹೋಪಯೋಗಿ ಎಲೆಕ್ಟ್ರಿಕಲ್ ವಸ್ತುಗಳ ದುರಸ್ತಿ ಹಾಗೂ 13 ದಿನಗಳ ಕೃಷಿ ಉದ್ಯಮಿ ಉಚಿತ ತರಬೇತಿಯನ್ನು ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ತರಬೇತಿ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದೆ. 18 ರಿಂದ 45 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ-ಯುವತಿಯರು ತಮ್ಮ ಹೆಸರು, ವಿಳಾಸಗಳನ್ನು ನೋಂದಾಯಿಸಿಕೊಳ್ಳುವoತೆ ಕೋರಲಾಗಿದೆ.
ನವಿಲನ್ನೇ ನುಂಗಿದ ಬೃಹತ್ ಹೆಬ್ಬಾವು : ಜೀರ್ಣಿಸಿಕೊಳ್ಳಲಾಗದೆ ಹಾವಿನ ಪರದಾಟ : ಅಪರೂಪದ ದೃಶ್ಯ ಕಂಡು ಬೆರಗಾದ ಜನರು
ತರಬೇತಿ ಜೊತೆ ಊಟ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತವೆ. ಗೃಹಪಯೋಗಿ ವಸ್ತುಗಳ ದುರಸ್ತಿ ಸೆಪ್ಟೆಂಬರ್ 19 ರಿಂದ ಹಾಗೂ ಕೃಷಿ ಉದ್ಯಮಿ ತರಬೇತಿ ಅಕ್ಟೋಬರ್ ತಿಂಗಳಲ್ಲಿ ಪ್ರಾರಂಭವಾಗಲಿದೆ. ಮೊದಲು ಬಂದವರಿಗೆ ಹಾಗೂ ಗ್ರಾಮೀಣ ಭಾಗದವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. ತರಬೇತಿ ವೇಳೆ ಕೌಶಲ್ಯ, ಸಾಫ್ಟ್ ಸ್ಟೀಲ್ಸ್, ಯೋಗ ತರಬೇತಿ ಹಾಗೂ ಬ್ಯಾಂಕಿoಗ್, ಸರಕಾರಿ ಯೋಜನೆಗಳು ಮತ್ತು ಯೋಜನಾ ವರದಿ ತಯಾರಿಕೆ ಕುರಿತು ಉಚಿತವಾಗಿ ಮಾಹಿತಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆ, ವಿಳಾಸಕ್ಕೆ ಅಥವಾ ಸಂಸ್ಥೆಯ ದೂರವಾಣಿ ಸಂಖ್ಯೆ 9483485489, 9482188780, 08284-295307, 220807, 9742438790, 8197022501, ಗೆ ಸಂಪರ್ಕಿಸುವoತೆ ಕೋರಲಾಗಿದೆ.
ವಿಸ್ಮಯ ನ್ಯೂಸ್, ಕಾರವಾರ