Focus News
Trending

ಅಂಕೋಲಾದ ಆರೋಗ್ಯ ಸಿಬ್ಬಂದಿಗಳಿಬ್ಬರಿಗೆ ಪಾಸಿಟಿವ್?

ಅಂಕೋಲಾ ಸರಕಾರಿ ಆಸ್ಪತ್ರೆಯಲಿಯ್ಲೇ ಆರಂಭಗೊಂಡ ಕೋವಿಡ್ ಕೇರ್ ಸೆಂಟರ್
32 ಲಘು ಸೋಂಕಿತರಿಗೆ ತಾಲೂಕಿನಲ್ಲಿಯೇ ನಡೆಯುತ್ತಿದೆ ಚಿಕಿತ್ಸೆ.
ಕರೊನಾ ವಾರಿಯರ್ಸ್‍ಗಳಾಗಿ ಸೇವೆ ಸಲ್ಲಿಸುತ್ತಿದ್ದ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ತಗುಲಿದ ಸೋಂಕು?

[sliders_pack id=”1487″]

ಅಂಕೋಲಾ: ಶ್ರಾವಣ ಮಾಸದ ಮೊದಲ ದಿನ ಮಂಗಳವಾರ ತಾಲೂಕಿನಲ್ಲಿ ಯಾವುದೇ ಕರೊನಾ ಸೋಂಕಿನ ಹೊಸ ಪ್ರಕರಣಗಳು ಕಾಣಿಸಿಕೊಳ್ಳದೇ ಜನತೆ ಕೊಂಚ ನಿರಾಳವಾಗುವಂತೆ ಮಾಡಿತ್ತು. ಆದರೆ ಬುಧವಾರ ಆರೋಗ್ಯ ಇಲಾಖೆಯ ಇಬ್ಬರು ಮಹಿಳಾ ಸಿಬ್ಬಂದಿಗಳಲ್ಲಿ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ. ಕರೊನಾ ವಾರಿಯರ್ಸ್ ಆಗಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅಂಕೋಲಾ ಸರಕಾರಿ ಆಸ್ಪತ್ರೆಯ ಈರ್ವರು ಸಿಬ್ಬಂದಿಗಳಲ್ಲಿ ಓರ್ವರು ನರ್ಸ್ ಮತ್ತು ಇನ್ನೊರ್ವಳು ಡಿ ದರ್ಜೆ ಸಿಬ್ಬಂದಿಯಾಗಿದ್ದು, ಇವರು ಕರ್ತವ್ಯ ನಿಮಿತ್ತ ಕುಮಟಾಕ್ಕೆ ನಿಯೋಜನೆಗೊಂಡಿದ್ದರು ಎನ್ನಲಾಗಿದೆ.(©Copyright reserved by Vismaya tv)

ತಾಲೂಕಾಸ್ಪತ್ರೆಯಲ್ಲಿಯೇ ಆರಂಭವಾಗಿದೆ 50 ಹಾಸಿಗೆಗಳ ಸಾಮಥ್ರ್ಯದ ಕೋವಿಡ್ ಕೇರ್ ಸೆಂಟರ್: ಕಳೆದ 1ವಾರದ ಅವಧಿಯಲ್ಲಿ ಪ್ರತಿದಿನ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಸಾಗಿದ್ದು ತಾಲೂಕಿನ ಒಟ್ಟು ಸೋಂಕಿತರ ಸಂಖ್ಯೆ 65ಕ್ಕೆ ತಲುಪಿತ್ತು. ಇಂದಿನ 2ಹೊಸ ಸೋಂಕಿತರೊಂದಿಗೆ ತಾಲೂಕಿನ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 67ಕ್ಕೆ ಏರಿಕೆಯಾದಂತಾಗಿದೆ. ಜುಲೈ 21ರ ಆರೋಗ್ಯ ಇಲಾಖೆಯ ಹೆಲ್ತ್‍ಬುಲೆಟಿನ್ ಪ್ರಕಾರ ಈವರೆಗೆ ತಾಲೂಕಿನ 19 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುತ್ತಾರೆ. ಮಣಿಪಾಲದಲ್ಲಿ ಮೃತನಾದ ವ್ಯಕ್ತಿಯೊರ್ವರಲ್ಲಿಯೂ ಸೋಂಕು ದೃಢಪಟ್ಟಿತ್ತು. ಒಟ್ಟೂ 45 ಸಕ್ರೀಯ ಪ್ರಕರಣಗಳಿದ್ದು, ಲಘು ಸೋಂಕು ಲಕ್ಷಣಗಳುಳ್ಳ ತಾಲೂಕಿನ 32ಜನರಿಗೆ ಅಂಕೋಲಾದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಇವರೆಲ್ಲರೂ ಲಘು ಸೋಂಕಿನ ಲಕ್ಷಣಗಳುಳ್ಳವರು ಎಂದು ಹೇಳಲಾಗಿದ್ದು ತಾಲೂಕಿನ ಸರ್ಕಾರಿ ಆಸ್ಪತ್ರೆಯ ಮೇಲ್ಮಹಡಿಯಲ್ಲಿ ಆರಂಭಿಸಲಾದ 50 ಹಾಸಿಗೆ ಸಾಮಥ್ಯದ ಕೋವಿಡ್ ಕೇರ್ ಸೆಂಟರನಲ್ಲಿ ದಾಖಲಾಗಿದ್ದಾರೆ. ಎಸ್.ಡಿ.ಆರ್.ಎಫ್ ನಿಧಿಯಿಂದ ತಾಲೂಕಾಸ್ಪತ್ರೆಗೆ ಪಿಪಿ ಕಿಟ್, ಮಾಸ್ಕ್, ಸೆನಿಟೈಸರ್ ಮತ್ತಿತ್ತರ ಸುರಕ್ಷಾ ಸಾಮಾಗ್ರಿ ಖರೀದಿಗೆ 3ಲಕ್ಷ 61ಸಾವಿರ ರೂಪಾಯಿಗಳ ಅನುದಾನ ಒದಗಿಸಲಾಗಿದೆ ಎಂದು ತಿಳಿದುಬಂದಿದೆ. ಮುಂಜಾಗ್ರತ ಕ್ರಮವಾಗಿ ನಾಡವರ ಸಮುದಾಯ ಭವನದಲ್ಲಿಯೂ ಹೆಚ್ಚುವರಿ 60ಹಾಸಿಗೆಗಳ ನಿಗಾ ಕೇಂದ್ರ ಸ್ಥಾಪನೆ ಸಿದ್ಧತೆಗಳು ನಡೆದಿವೆ ಎನ್ನಲಾಗಿದೆ.

ತಾಲೂಕಿನಲ್ಲಿಯೂ ನಡೆಯಲಿದೆ ಗಂಟಲು ದ್ರವ ಪರೀಕ್ಷೆ:ಮಂಗಳವಾರ ತಾಲೂಕಿನಿಂದ ಹೊಸದಾಗಿ 67ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು ಈವರೆಗೆ ಒಟ್ಟು 1341ಜನರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದಂತಾಗಿದೆ. 133 ವರದಿಗಳು ಬರಬೇಕಿದೆ.ಸೋಂಕಿತರ ಸಂಖ್ಯೆ ಹೆಚ್ಚಿದಂತೆ ಅವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಕ್ಕೆ ಬಂದವರ ಗಂಟಲು ದ್ರವ ಪರೀಕ್ಷೆ ಮಾಡಬೇಕಿರುವುದರಿಂದ ಆ ಸಂಖ್ಯೆಯಲ್ಲಿಯೂ ಹೆಚ್ಚಳವಾಗಲಿದೆ ಈ ಹಿಂದೆ ಪರೀಕ್ಷಾ ವರದಿಗಳು ಮಂಗಳೂರು ಮತ್ತಿತ್ತರೆಡೆಯಿಂದ ಬರಬೇಕಿತ್ತು ಈಗ ಕಾರವಾರದ ಕ್ರಿಮ್ಸ್ ಪ್ರಯೋಗಾಲಯದಲ್ಲಿಯೇ ಗಂಟಲು ದ್ರವ ಮಾದರಿ ಪರೀಕ್ಷಿಸುತ್ತಿರುವುದರಿಂದ ಪರೀಕ್ಷಾ ವರದಿಗಳು ಸ್ವಲ್ಪ ಬೇಗನೆ ಸಿಗುವಂತಾಗಿದೆ. ಜೊತೆಯಲ್ಲಿಯೇ ಮತ್ತು ಹೊಸ ಮಾದರಿಯ ರ್ಯಾಪಿಡ್ ಎಂಟಿಜನ್ ಕಿಟ್ ಮೂಲಕ 15ನಿಮಿಷಗಳಲ್ಲಿಯೇ ಪರೀಕ್ಷಾ ವರದಿ ನೀಡಬಹುದಾಗಿದ್ದು, ಅಂಕೋಲಾ ತಾಲೂಕಿಗೂ 100 ಕಿಟ್ ಪೂರೈಕೆಯಾಗಿದೆ ಎನ್ನಲಾಗುತ್ತಿದೆ. ಬುಧವಾರ ಅಂಕೋಲಾದಲ್ಲಿ ಆ ಕಿಟ್‍ಗಳನ್ನು ಬಳಸಿಯೇ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸುವ ಸಾಧ್ಯತೆ ಇದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

[sliders_pack id=”2570″]

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Back to top button