Big NewsImportant
Trending

ಶಿವ – ಗಣಪತಿ ದೇವಸ್ಥಾನಗಳ ಸರಣಿಗಳ್ಳತನ :  ದೇವರ ಮುಖಗವಚ, ಪ್ರಭಾವಳಿ, ದೊಡ್ದ ಗಂಟೆ, ಹುಂಡಿ ಹಣ ಕಳ್ಳತನ

ನೀಲಿ ಕಾರಿನಲ್ಲಿ ಬಂದಿದ್ದ ಕಳ್ಳರಾರು ?

ಅಂಕೋಲಾ : ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತ ವ್ಯಾಪ್ತಿಯ ಹೆಗ್ಗಾರದಲ್ಲಿ ಇಲ್ಲಿಯ ಪ್ರಸಿದ್ಧ ಶ್ರೀ ಮಹಾಗಣಪತಿ ದೇವಾಲಯ, ಮತ್ತು ಶೇವಕಾರದಲ್ಲಿ ಈಶ್ವರ ದೇವಸ್ಥಾನ ಸರಣಿ ಕಳ್ಳತನವಾದ ಘಟನೆ ವರದಿಯಾಗಿದೆ. ನೀಲಿ ಕಾರಿನಲ್ಲಿ ಬಂದಿದ್ದರೆನ್ನಲಾದ ಕಳ್ಳರಾರೋ , ಹೆಗ್ಗಾರದ ಶ್ರೀ ಮಹಾಗಣಪತಿ ದೇವಸ್ಥಾನದ ಒಳಗೆ ಹೊಕ್ಕಿ , ಶ್ರೀದೇವರ ಪ್ರಭಾವಳಿ, ಮುಖಗವಚ, ಅಂದಾಜು 15 ಕೆ.ಜಿ ಯ ದೊಡ್ಡ ಗಂಟೆ ಮತ್ತಿತರ ಬೆಲೆಬಾಳುವ ವಸ್ತುಗಳನ್ನು , ಮತ್ತು  ಕಾಣಿಕೆ ಡಬ್ಬಿ ಒಡೆದು ಅದರಲ್ಲಿದ್ದ ಸಾವಿರಾರು ರೂಪಾಯಿ ಹುಂಡಿ ಹಣವನ್ನು ಕದ್ದೊಯ್ದಿದ್ದಾರೆ ಎನ್ನಲಾಗಿದ್ದು ಶುಕ್ರವಾರ ಮಧ್ಯಾಹ್ನದ ಅವಧಿಯಲ್ಲಿ ಈ ಕಳ್ಳತನ ನಡೆದಿರುವ ಸಾಧ್ಯತೆ ಕೇಳಿ ಬಂದಿದೆ.

ಈ ರೀತಿಯ ಸುಳ್ಳುಸಂದೇಶ ನಂಬಬೇಡಿ: ಅಸಲಿಯತ್ತು ಪರೀಕ್ಷಿಸಿ!

ಶೇವಕಾರ ಗ್ರಾಮದ ಈಶ್ವರ ದೇವಸ್ಥಾನದಲ್ಲಿಯೂ ಕಳ್ಳರು ತಮ್ಮ ಕರಾಮತ್ತು ತೋರಿಸಿದ್ದಾರೆ ಎನ್ನಲಾಗಿದ್ದು, ಪೋಲೀಸ್ ತನಿಖೆಯಿಂದ ನಿಖರ ಮಾಹಿತಿ ಮತ್ತು ಕಳುವಾದ ವಸ್ತು ಮತ್ತು ಇತರೆ  ಆಭರಣಗಳು ಹಾಗೂ ಕಾಣಿಕೆ ಹುಂಡಿ  ನಗದಿನ ಅಂದಾಜು  ತಿಳಿದು ಬರಬೇಕಿದೆ. ಕಳ್ಳರಾರೋ ನೀಲಿ ಕಾರಿನಲ್ಲಿ ಬಂದು ಹೋದರು ಎನ್ನಲಾಗಿರುವ  ದೃಶ್ಯ ಸ್ಥಳೀಯ ಕೆಲ ಸಿ.ಸಿ ಟಿವಿಯಲ್ಲಿ ದಾಖಲಾಗಿದೆ ಎನ್ನಲಾಗಿದ್ದು, ಕಳ್ಳತನಕ್ಕೆ ಸಂಭಂದಿಸಿದಂತೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button