ಬೈಕಿಗೆ ಡಿಕ್ಕಿ ಹೊಡೆದ ಲಾರಿ: ಸ್ಥಳದಲ್ಲೇ ಲಾರಿಬಿಟ್ಟು ಪರಾರಿಯಾದ ಚಾಲಕ
ಹೆದ್ದಾರಿ ಸಂಚಾರ ಸುರಕ್ಷತೆಗೆ ಸರ್ಕಲ್ ನಿರ್ಮಾಣ ಎಂದು ?
ಅಂಕೋಲಾ:ಲಾರಿಯೊಂದು ಡಿಯೋ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಆಸ್ಪತ್ರೆಗೆ ದಾಖಲಾದ ಘಟನೆ ಪಟ್ಟಣದ ನೀಲಂಪುರ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದೆ. ವಂದಿಗೆ ಹನುಮಟ್ಟ ನಿವಾಸಿ ಖಾಸಗಿ ಕಂಪನಿ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾದ ನಾಗೇಂದ್ರ ಮಂಜುನಾಥ ನಾಯ್ಕ (20) ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಬೈಕ್ ಸವಾರ ನಾಗಿದ್ದಾನೆ.
ಮೋಜು-ಮಸ್ತಿ: ಸಮುದ್ರಕ್ಕಿಳಿದಿದ್ದ ಇಬ್ಬರು ಪ್ರವಾಸಿಗರ ಪ್ರಾಣ ರಕ್ಷಣೆ
ಈತ ತನ್ನ ಡಿಯೋ ಬೈಕ್ ಮೇಲೆ ಕಾರವಾರ ಕಡೆಯಿಂದ ಅಂಕೋಲಾ ಕಡೆ ಬರುತ್ತಿದ್ದ ಸಂದರ್ಭದಲ್ಲಿ ಈ ರಸ್ತೆ ಅಪಘಾತ ಸಂಭವಿಸಿದೆ. ಬೈಕ್ ಗೆ ಎದುರಿನಿಂದ ಬಂದ (ಕೆ.ಎ19 ಡಿ 4279 ನೋಂದಣಿ ಸಂಖ್ಯೆಯ ) ಲಾರಿ, ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ತನ್ನ ಬದಿಯನ್ನು ಬಿಟ್ಟು ಬಲಕ್ಕೆ ಬಂದು ಡಿಕ್ಕಿ ಹೊಡೆದ ಪರಿಣಾಮವಾಗಿ, ಬೈಕ್ ನಿಂದ ಸಿಡಿದು ಬಿದ್ದ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಬೈಕ್ ಜಖಂ ಗೊಂಡಿದೆ.
ಅಪಘಾತದಲ್ಲಿ ಬೈಕ್ ಸವಾರ ನಾಗೇಂದ್ರ ಮಂಜುನಾಥ ನಾಯ್ಕ ಅವರ ಎರಡೂ ಕೈ ಮತ್ತು ಕಾಲುಗಳಿಗೆ ಮತ್ತು ಅಂಗಾಂಗಳಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದ್ದು ಆಪಾದಿತ ಲಾರಿ ಚಾಲಕ, ಅಪಘಾತವಾದ ಬಳಿಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿದ್ದಾನೆ.
ಈ ಕುರಿತು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದ್ದು ಪಿ.ಎಸ್. ಐ ಪ್ರವಿಣಕುಮಾರ್ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಚತುಷ್ಪಥ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದಿರುವ ಐಆರ್ ಬಿ ಕಂಪನಿಯ ಅಪೂರ್ಣ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದಲೂ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿದೆ ಎನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಲೇ ಇದೆ, ಈ ಹಿಂದಿನಿಂದಲೂ ಅಂಬೇಡ್ಕರ ವೃತ್ತ ಎಂದು ಕರೆಯಲ್ಪಡುವ ನೀಲಂಪುರ ಕ್ರಾಸ್ ಬಳಿ ಹೆದ್ದಾರಿ ಹಾಗೂ ಕೂಡು ರಸ್ತೆಯ ವಿಪರೀತ ಏರಿಳಿತದಿಂದ ವಾಹನಗಳು ನಿಯಂತ್ರಣ ತಪ್ಪುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
ಈ ಭಾಗದಲ್ಲಿ ಈ ವರೆಗೂ ವ್ಯವಸ್ಥಿತ ಸರ್ಕಲ್ ನಿರ್ಮಾಣವಾಗದಿರುವುದು, ಅಥವಾ ಕಾರವಾರ ಕಡೆಯಿಂದ ಅಂಕೋಲಾ ಪ್ರವೇಶಿಸುವ ಮುಖ್ಯ ರಸ್ತೆ ಗೆ ಅಂಡರ್ ಪಾಸ್ ರೋಡ ಇಲ್ಲದಿರುವುದರಿಂದ ಸುಗಮ ಸಂಚಾರ ವ್ಯವಸ್ಥೆಗೆ ತೊಡಕಾಗುತ್ತಿದೆ.ಈ ಭಾಗದಲ್ಲಿ ಸರ್ಕಲ್ ನಿರ್ಮಾಣ ಮಾಡಿ ಸಾರ್ವಜನಿಕರ ಪ್ರಾಣರಕ್ಷಣೆಗೆ ಒತ್ತು ನೀಡಬೇಕೆನ್ನುವುದು ಸ್ಥಳೀಯರ ಆಗ್ರಹವಾಗಿದ್ದು, ಸಂಭದಿತ ಇಲಾಖೆ ಹಾಗೂ ಜನಪ್ರತಿನಿಧಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ