ಪ್ರದೀಪ್ ನಾಯ್ಕ ಅಕಾಲಿಕ ವಿದಿವಶ : ಶೃದ್ಧಾಂಜಲಿ ಸಭೆ. ಇಲೆಕ್ಟ್ರಿಶನ್ ವೃತ್ತಿಯ ಸ್ನೇಹ ಜೀವಿ ಇನ್ನಿಲ್ಲ
ಅಂಕೋಲಾ: ವಿದ್ಯುತ್ತ್ ಪರಿಕರಗಳ ರಿಪೇರಿಯ ತನ್ನ ವೃತ್ತಿ ಬದುಕಿನೊಂದಿಗೆ, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದ ಪಟ್ಟಣದ ಜೋಗಳಸೆಯ ಪ್ರದೀಪ ನಾಯ್ಕ ಇತ್ತೀಚೆಗೆ ಅಕಾಲಿಕ ನಿಧನರಾಗಿದ್ದರು.
ಸಾರ್ವಜನಿಕ ಗಣೇಶೋತ್ಸವ ಮಂಡಳಿ ಬಂಡಿಬಜಾರ ಅಂಕೋಲಾ, ಶ್ರೀ ಶಾಂತಾದುರ್ಗಾ ಗೆಳೆಯರ ಬಳಗ ಅಂಕೋಲಾ, ಶ್ರೀಮಹಾಸತಿ ಯುಗಾದಿ ಉತ್ಸವ ಸಮಿತಿ ಗೆಳೆಯರ ಬಳಗ ಅಂಕೋಲಾ ಹಾಗೂ ಸ್ಥಳೀಯರ ವತಿಯಿಂದ ಪ್ರದೀಪ್ ಆತ್ಮಕ್ಕೆ ಶಾಂತಿ ಕೋರಿ ಶೃದ್ಧಾಂಜಲಿ ಸಲ್ಲಿಸಲಾಯಿತು.
ಶ್ರೀಶಾಂತಾದುರ್ಗಾ ದೇವಾಲಯದ ಸಭಾಭವನದಲ್ಲಿ ನಡೆದ ಶೃದ್ಧಾಂಜಲಿ ಸಭೆಯಲ್ಲಿ, ಪ್ರಮುಖರಾದ ಸಂಜೀವ ಪ್ರಭು ಮಾತನಾಡಿ ಪ್ರತಿಯೊಂದು ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಿಗಿಸಿಕೊಳ್ಳುತ್ತಿದ್ದ ಪ್ರದೀಪ ನಾಯ್ಕ ನಮ್ಮ ನಡುವೆ ಇಲ್ಲದಿರುವುದು ಅತ್ಯಂತ ದುಃಖದ ವಿಚಾರ ಎಂದರು.
ಸ್ಥಳೀಯ ಪ್ರಮುಖ ಭಾಸ್ಕರ ನಾರ್ವೇಕರ್ ಮಾತನಾಡಿ ಪ್ರದೀಪ ನಾಯ್ಕ ಅವರು ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವದ ಸ್ನೇಹ ಜೀವಿಯಾಗಿದ್ದರು ಅವರ ನಿಧನ ನಮಗೆಲ್ಲಾ ಆಘಾತ ತಂದಿದೆ ಎಂದರು.
ಸಾರ್ವಜನಿಕ ಗಣೇಶೋತ್ಸವ ಮಂಡಳಿ ಬಂಡಿಬಜಾರದ ಪದಾಧಿಕಾರಿಗಳಾದ ನಾಗೇಶ ನಾಯ್ಕ ಆಚಾ, ಪ್ರಕಾಶ ಕುಂಜಿ ಪ್ರದೀಪ ನಾಯ್ಕ ವ್ಯಕ್ತಿತ್ವದ ನೆನಪಿಸಿದರು. ಪ್ರಮುಖರುಗಳಾದ ವಾಸುದೇವ ಗುನಗಾ, ಬಂಟು ಶೆಟ್ಟಿ, ಉಮೇಶ ನಾಯ್ಕ, ನಾಗೇಂದ್ರ ನಾಯ್ಕ, ವಸಂತ ವೈದ್ಯ, ನವೀನ್ ನಾರ್ವೇಕರ್, ವಿನಾಯಕ ಗುಡಿಗಾರ, ಪ್ರಶಾಂತ ನಾರ್ವೇಕರ್, ಉದಯ ನಾಯ್ಕ, ಸಂಜಯ ಮೋದಿ, ನಾಗರಾಜ ನಾಯ್ಕ, ಶ್ರೀಧರ ನಾಯ್ಕ, ರಾಜು ನಾಯಕ, ರಾಜು ನಾಯ್ಕ, ಕೇವಲಚಂದ ಶರ್ಮಾ, ನಾಗೇಶ, ವಿಷ್ಣು, ಸೇರಿದಂತೆ ನೂರಾರು ಜನರು ಪಾಲ್ಗೊಂಡು ಪ್ರದೀಪ ನಾಯ್ಕ ಭಾವಚಿತ್ರಕ್ಕೆ ಪುಷ್ಪದಳ ಸಮರ್ಪಿಸಿ, ನಮನ ಸಲ್ಲಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ