Important
Trending

ನೂತನ ಜಿಲ್ಲಾಧಿಕಾರಿಗಳಿಂದ ನೆರೆಪೀಡಿತ ಪ್ರದೇಶಗಳಿಗೆ ಭೇಟಿ: ಗ್ರಾಮಸ್ಥರೊಂದಿಗೆ ಚರ್ಚೆ

ಹೊನ್ನಾವರ: ಜಿಲ್ಲಾಧಿಕಾರಿ ಗಂಗೂಬಾಯಿ ಮಾನ್ಕರ್ ಅವರು ತಹಸೀಲ್ದಾರ್ ರವಿರಾಜ್ ದೀಕ್ಷಿತ್ ರವರೊಂದಿಗೆ ತಾಲೂಕಿನ ನೆರೆಪೀಡಿತ ಬಾಸ್ಕೇರಿ ,ಹಾಡಿನಬಾಳ ಕಡಗೇರಿ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿ ಮಳೆ ಹಾನಿಯ ಬಗ್ಗೆ ಪರಿಶೀಲಿಸಿದರು. ಅಲ್ಲಿನ ನೆರೆ ಸಂತ್ರಸ್ತರನ್ನು ಮತ್ತು ಸ್ಥಳೀಯ ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಅವರೊಂದಿಗೆ ಚರ್ಚಿಸಿದರು. ಈ ವೇಳೆ ಗ್ರಾಮಸ್ಥರು, ಈ ಹಿಂದೆ ಗುಂಡವಾಳ ನದಿಯು ಬಹಳ ವಿಸ್ತಾರವಾಗಿಯೂ, ಆಳವಾಗಿಯೂ ಇದ್ದಿತ್ತು. ಈ ಹಿಂದೆ ಇಂತಹ ಸಮಸ್ಯೆ ಇರಲಿಲ್ಲ. ಈಗ ಕೆಲವು ವರ್ಷಗಳಿಂದಲೂ ನದಿ ಒತ್ತುವರಿಯಾಗಿ ಬಹಳ ಕಿರಿದಾಗಿರುವುದರಿಂದ ಹಾಗೂ ನದಿಯಲ್ಲಿ ಉಳು ತುಂಬಿರುವುದರಿAದ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಂದಾಗ ನದಿ ಉಕ್ಕಿ ಜನನ ಜನವಸತಿ ಪ್ರದೇಶ ಮತ್ತು ತೋಟದ ಜಮೀನುಗಳಿಗೆ ನೀರು ನುಗ್ಗಿ ಪ್ರತಿ ವರ್ಷ ಪ್ರವಾಹ ಸಂಭವಿಸುತ್ತದೆ. ಹೀಗಾಗಿ ನದಿಯಲ್ಲಿನ ಊಳನ್ನು ತೆಗೆದು, ಒತ್ತುವತೆರವು ಮಾಡಿದಲ್ಲಿ ಪ್ರವಾಹದ ಸಮಸ್ಯೆ ದೂರವಾಗುತ್ತದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಇದಕ್ಕೆ ಜಿಲ್ಲಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸಮಸ್ಯೆ ಪರಿಹಾರದ ಕುರಿತಾಗಿ ಪ್ರಯತ್ನಿಸುವುದಾಗಿ ಹೇಳಿದರು,

ಅಪ್ಸರಕೊಂಡ ಗುಡ್ಡ ಕುಸಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಲ್ಲಿನ ಜನಪ್ರತಿನಿಧಿಗಳು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಚರ್ಚಿಸಿ ಈತನಕ ಕೈಕೊಂಡ ಕ್ರಮಗಳ ಬಗ್ಗೆ ತಿಳಿದುಕೊಂಡು ಸಹಾಯಕ ಆಯುಕ್ತರಿಗೆ ಸ್ಥಳೀಯ ಜನಪ್ರತಿನಿಧಿಗಳ ಹಾಗೂ ಸಂಬoಧಪಟ್ಟ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ಜರುಗಿಸಿ, ಸಮಸ್ಯೆ ಪರಿಹಾರದ ಕುರಿತು ಸಾರ್ವಜನಿಕರ ಅಹವಾಲು ಸ್ವೀಕರಿಸಿ ವರದಿ ಮಾಡಲು ಸೂಚಿಸಿದರು,

ವಿಸ್ಮಯ ನ್ಯೂಸ್, ಹೊನ್ನಾವರ

Back to top button