Join Our

WhatsApp Group
Big News
Trending

ಭಿಕ್ಷುಕನ ಅಂತ್ಯಕ್ರಿಯೆ ನೆರವೇರಿಸಿದ ಸಮಾಜ ಸೇವಕ

ಭಟ್ಕಳ: ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ಭಿಕ್ಷುನೋರ್ವನ ಮೃತದೇಹದ ಅಂತ್ಯಕ್ರಿಯೆಯನ್ನು ಸಮಾಜ ಸೇವಕ ಮುಟ್ಟಳ್ಳಿ ಮಂಜು ಮೂಢ ಭಟ್ಕಳ ರುಧ್ರಭೂಮಿಯಲ್ಲಿ ನೆರವೇರಿಸಿದರು. ಮೃತ ಭಿಕ್ಷುಕ ರಘು ಶಂಕರನಾಗ ಎಂದು ಗುರುತಿಸಲಾಗಿದ್ದು, ಹಾವೇರಿಯª ಎಂದು ತಿಳಿದು ಬಂದಿದೆ. ಈತ ತನ್ನ ತಾಯಿಯೊಂದಿಗೆ ಭಟ್ಕಳ ಹಾಗೂ ಮುರುಡೇಶ್ವರ ಭಾಗದಲ್ಲಿ ಪ್ರತಿ ನಿತ್ಯ ಭಿಕ್ಷಾಟನೆ ಮಾಡುತ್ತಿದ್ದನು. ಸಂಜೆ ವೇಳೆ ಮುರುಡೇಶ್ವರ ರೈಲ್ವೆ ನಿಲ್ದಾಣ ಸಮೀಪ ಮದ್ಯ ಸೇವಿಸಿ ಬಿದ್ದವನನ್ನು 108 ಅಂಬ್ಯುಲೆನ್ಸ್ ನಲ್ಲಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಈ ಬಗ್ಗೆ ಮೃತನ ತಾಯಿಯಿಂದ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನ ತಾಯಿ ಹಾಗೂ ಆಕೆಯ ಸಂಬoಧಿಕರೋರ್ವ ಇರುವುದರಿಂದ ಮುರುಡೇಶ್ವರ ಪೊಲೀಸರು ಸಮಾಜ ಸೇವಕ ಮಂಜು ಮುಟ್ಟಳ್ಳಿಯವರನ್ನು ಸಂಪರ್ಕಿಸಿ ಅಂತ್ಯಕ್ರಿಯೆ ನಡೆಸಲು ಕೋರಿದ್ದರು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button