ಕುಮಟಾ: ತಾಲೂಕಿನ ಮಾಸ್ತಿಕಟ್ಟೆ ಸರ್ಕಲ್ ಬಳಿ ವ್ಯಕ್ತಿಯೋರ್ವರು ಬ್ಯಾಗ್ ಕಳೆದುಕೊಂಡಿದ್ದು, ಕಳೆದುಕೊಂಡ ಬ್ಯಾಗ್ ಅನ್ನು ಕುಮಟಾ ಪೊಲೀಸರು ಪತ್ತೆ ಹಚ್ಚಿ ವಾರಸುದಾರರಿಗೆ ಮುಟ್ಟಿಸಿದ್ದಾರೆ. ಆಗಸ್ಟ್ 10 ರಂದು ಮಾಸ್ತಿಕಟ್ಟೆ ಸರ್ಕಲ್ ಬಳಿ ಬೆಟ್ಕುಳಿಯ ಹಲೀಮ್ ಶೌಕತ್ ಶೇಖ್ ಎಂಬುವವರ ಬ್ಯಾಗ್ ಕಳೆದುಹೊಗಿತ್ತು.
ಆ ಒಂದು ಬ್ಯಾಗ್‌ನಲ್ಲಿ ನಗದು ಸೇರಿದಂತೆ ಪ್ರಮುಖವಾದ ದಾಖಲಾತಿಗಳಿದ್ದವು. ಕುಮಟಾ ಪೊಲೀಸ್ ಠಾಣೆಯ ಎ.ಎಸ್.ಐ ನಾಗಾನಂದ ನೆಗಳೂರು ಹಾಗೂ ಪ್ರದೀಪ ನಾಯಕ ಅವರು ವಾರಸುದಾರರಿಗೆ ಬ್ಯಾಗ್ ಹಸ್ತಾಂತರಿಸಿದ್ದು, ಈ ಕಾರ್ಯಕ್ಕೆ ವಾರಸುದಾರರು ಸೇರಿದಂತೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.
ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ, ಕುಮಟಾ