Important
Trending

ಚಾಕಲೇಟ್ ಎಂದು ಪ್ಯಾಂಟ್ ಬಟನ್ ನುಂಗಿದ ಎರಡು ತಿಂಗಳ ಮಗು: ಏನಾಯ್ತು ನೋಡಿ?

ಭಟ್ಕಳ: ಅಕ್ಕ ತನಗೆ ಅರಿವಿಲ್ಲದೆ ಚಾಕಲೇಟ್ ಎಂದು ತಂಗಿಗೆ ಪ್ಯಾಂಟ್ ಬಟನ್ ಕೊಟ್ಟಿದ್ದು, ಇದನ್ನು ಎರಡು ತಿಂಗಳ ಹಸುಳೆ (two month old baby) ನುಂಗಿದ ಘಟನೆ ಭಟ್ಕಳದಲ್ಲಿ ನಡೆದಿದೆ. ಹೌದು, ಎರಡು ತಿಂಗಳ ಮಗುವಿಗೆ ಅಲ್ಲೆ ಇದ್ದ 2 ವರ್ಷದ ಅಕ್ಕ, ಚಾಕಲೇಟ್ ಎಂದು ಹೇಳಿಕೊಂಡು ಜೀನ್ಸ್ ಪ್ಯಾಂಟ್ ಬಟನ್ ಕೊಟ್ಟಿದ್ದು, ಇದನ್ನು ಹಸುಗೂಸು ನುಂಗಿದೆ. ಇದರಿಂದಾಗಿ ಎರಡು ತಿಂಗಳ ಮಗು ಉಸಿರಾಟ ನಡೆಸಲಾಗದೇ ಹೊರಳಾಡಿದೆ. ಇದನ್ನು ಗಮನಿಸಿದ ಪೋಷಕರು, ಭಟ್ಕಳ ಸರಕಾರಿ ಆಸ್ಪತ್ರೆಯ ಕರೆಯೊಯ್ದಿದ್ದಾರೆ.

ವೈದ್ಯರ ಯಶಸ್ವಿ ಚಿಕಿತ್ಸೆಯಿಂದಾಗಿ ಹಸುಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಬಿಹಾರ ಮೂಲದ, ಕಳೆದ 12-13 ವರ್ಷಗಳಿಂದ ಭಟ್ಕಳ ರಂಗೀಕಟ್ಟೆಯಲ್ಲಿ ವಾಸಿಸುತ್ತಿರುವ ಕಾರ್ಮಿಕ ಕಮಲ ಕಿಶೋರ ಅವರ ಪುತ್ರಿ ಅಮೃತ (two month old baby) ಸಂಕಷ್ಟದಿoದ ಪಾರಾದ ಹಸುಳೆ. ಭಟ್ಕಳ ಸರಕಾರಿ ಆಸ್ಪತ್ರೆಯ ಇಎನ್‌ಟಿ ತಜ್ಞ ಡಾ.ಸತೀಶ ನೇತೃತ್ವದ ವೈದ್ಯರ ತಂಡ ಕೊಳವೆಯ ಮೂಲಕ ಬಟನ್ ಅನ್ನು ಹೊರ ತೆಗೆದಿದ್ದು, ಹಸುಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಮೂತ್ರಕ್ಕೆ ತೆರಳಿದ ವೇಳೆ ವ್ಯಕ್ತಿಯ ಕೈನಲ್ಲಿದ್ದ ಹಣದಬ್ಯಾಗ ಕಿತ್ತು ಎಸ್ಕೇಪ್

ಹಸುಳೆಯ ಪ್ರಾಣ ಉಳಿಸಿದ ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯರ ಕಾರ್ಯ ದಕ್ಷತೆಯ ಬಗ್ಗೆ ಸಾರ್ವಜನಿಕರು ವಲಯದಲ್ಲಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.ಈ ಸಂದರ್ಭದಲ್ಲಿ ಶುಶ್ರೂಷಕಿಯರಾಧ ಪವಿತ್ರ,ಸುಮಿತ್ರಾ,ಶ್ರೇಯ ಮುಂತಾದವರು ಸೇರಿದಂತೆ ವೈದ್ಯರಿಗೆ ಸಾತ್ ನೀಡಿದರು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button