113 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ
881 ಸಕ್ರೀಯ ಸೋಂಕಿತರಿಗೆ ಮುಂದುವರಿದ ಚಿಕಿತ್ಸೆ
ಕುಮಟಾದಲ್ಲಿಂದು 16 ಪಾಸಿಟಿವ್
ಒಂದೇ ಭಾಗದಲ್ಲೇ 11 ಸೋಂಕಿತರು ಪತ್ತೆ
ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಮಂಗಳವಾರ 80 ಕರೊನಾ ಪ್ರಕರಣ ದಾಖಲಾಗಿದೆ. ಕುಮಟಾದಲ್ಲಿ 16, ಹಳಿಯಾಳದಲ್ಲಿ 21, ಕಾರವಾರದಲ್ಲಿ 5, ಸಿದ್ದಾಪುರದಲ್ಲಿ 15, ಅಂಕೋಲಾ 1, ಭಟ್ಕಳದಲ್ಲಿ 5, ಶಿರಸಿಯಲ್ಲಿ 9, ಮುಂಡಗೋಡದಲ್ಲಿ 7, ಜೊಯಿಡಾದಲ್ಲಿ 1 ಪ್ರಕರಣ ದೃಢಪಟ್ಟಿದೆ. ಇದೇ ವೇಳೆ, ಇಂದು 113 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಹಳಿಯಾಳದಲ್ಲಿ 43, ಕಾರವಾರದಲ್ಲಿ 17, ಹೊನ್ನಾವರ 14, ಭಟ್ಕಳ 15, ಅಂಕೋಲಾದಲ್ಲಿ 5, ಕುಮಟಾದಲ್ಲಿ 4, ಶಿರಸಿ 4, ಸಿದ್ದಾಪುರ 1, ಯಲ್ಲಾಪುರ 8, ಮುಂಡಗೋಡ 3, ಜೊಯಿಡಾದಲ್ಲಿ ಒಬ್ಬರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ಕುಮಟಾದಲ್ಲಿಂದು 16 ಪಾಸಿಟಿವ್:
ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು 16 ಕರೊನಾ ಪಾಸಿಟಿವ್ ಪ್ರಕರಣವು ಪತ್ತೆಯಾಗಿದೆ. ತಾಲೂಕಿನ ಕಡ್ಲೆಓಣಿಯಲ್ಲಿಯೇ 11 ಸೋಂಕಿತ ಪ್ರಕರಣ ದೃಢಪಟ್ಟಿದೆ. ಧಾರೇಶ್ವರದ 68 ವರ್ಷದ ಪುರುಷ, ಧಾರೇಶ್ವರದ 54 ವರ್ಷದ ಪುರುಷ, ಕುಮಟಾದ ಕಡ್ಲೆಓಣಿಯ 68 ವರ್ಷದ ಮಹಿಳೆ, 64 ವರ್ಷದ ಪುರುಷ, 44 ವರ್ಷದ ಪುರುಷ, 12 ವರ್ಷದ ಬಾಲಕಿ, 72 ವರ್ಷದ ವೃದ್ಧ, 38 ವರ್ಷದ ಮಹಿಳೆ, 10 ವರ್ಷದ ಬಾಲಕ, 36 ವರ್ಷದ ಮಹಿಳೆ, 39 ವರ್ಷದ ಪುರುಷ, 8 ವರ್ಷದ ಬಾಲಕಿ, 26 ವರ್ಷದ ಯುವತಿ, ಭಸ್ತಿಪೇಟೆಯ 39 ವರ್ಷದ ಪುರುಷ, ಭಸ್ತಿಪೇಟೆಯ 8 ವರ್ಷದ ಬಾಲಕಿ, ಭಸ್ತಿಪೇಟೆಯ 26 ವರ್ಷದ ಯುವತಿ ಸೋಂಕು ಪತ್ತೆಯಾಗಿದೆ.
ಈ 16 ಜನರು ಕೂಡ ಈ ಹಿಂದೆ ಸೋಂಕು ಕಾಣಿಸಿಕೊಮಡವರ ಪ್ರಾಥಮಿಕ ಸಂಪರ್ಕಕ್ಕೆ ಬಂವರು ಎನ್ನಲಾಗಿದೆ.
ಬ್ಯೂರೋ ರಿಪೋರ್ಟ್, ವಿಸ್ಮಯ ನ್ಯೂಸ್
ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ
ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬoಧ ತೋರಿಸಲಾಗುವುದು
ಎರಡನೇಯ ಸಂಬoಧವನ್ನು ತೋರಿಸಲಾಗುವುದು
ಮೊಬೈಲ್: 7848833568