ಅಂಕೋಲಾ: ಕನ್ನಡ ಸಾಹಿತ್ಯ ಪರಿಷತ್ತಿನ ಅಂಕೋಲಾ ಘಟಕ ಹಮ್ಮಿಕೊಳ್ಳುತ್ತಾ ಬಂದಿರುವ ತಾಲೂಕು ಸಾಹಿತ್ಯ ಸಮ್ಮೇಳನ ದಶಮಾನೋತ್ಸವದ ಸಂಭ್ರಮದಲ್ಲಿದ್ದು, ಪಟ್ಟಣದ ನಾಡವರ ಸಮುದಾಯ ಭವನದಲ್ಲಿ, 10 ನೇ ಸಾಹಿತ್ಯ ಸಮ್ಮೇಳನ ಪ್ರೊ . ಎನ್ ಡಿ ಅಂಕೋಲೆಕರ ಸರ್ವಾಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ನಡೆಯಿತು. ಅಂಕೋಲಾದ ನೂತನ ತಹಶೀಲ್ಧಾರ ಅವರು ರಾಷ್ಟ್ರ ಧ್ವಜಾರೋಹಣ, ಕಸಾಪ ತಾಲೂಕು ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಕನ್ನಡ ಧ್ವಜ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.
ಮೊದಲಿಗೆ ನಾಡವರ ಸಭಾಭವನದ ಆವರಣದಲ್ಲಿ ಕನ್ನಡ ಭುವನೇಶ್ವರಿಯ ಭಾವಚಿತ್ರಕ್ಕೆ ನಮಿಸಲಾಯಿತು. ಕನ್ನಡ ಧ್ವಜ ಎತ್ತಿ ತೋರಿಸುವ ಮೂಲಕ ಮೆರವಣಿಗೆ ಚಾಲನೆ ನೀಡಿದರು. ನಾಡವರ ಸಮುದಾಯ ಭವನದಿಂದ ಹೊರಟು ಕೆಎಲ್ ಇ ರಸ್ತೆ ಮೂಲಕ ಬಸ್ ನಿಲ್ದಾಣದ ಎದುರಿಂದ ಜೈಹಿಂದ್ ಸರ್ಕಲ್ ಮಾರ್ಗವಾಗಿ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸಾಗಿ ಬಂದ ಮೆರವಣಿಗೆ ನಾಡವರ ಸಮುದಾಯ ಭವನದತ್ತ ಮರಳಿ ಸಂಪನ್ನಗೊoಡಿತು ವಾದ್ಯ ಮೇಳದೊಂದಿಗೆ ಸಂಘಟಕರು ಅತಿಥಿ ಗಣ್ಯರು,ವಿದ್ಯಾರ್ಥಿಗಳು ,ಇತರರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ನಾಡಿನ ಹಿರಿಯ ಪರ್ತಕರ್ತರಾದ ಗಂಗಾಧರ ಹಿರೇಗುತ್ತಿ ರಿಬ್ಸನ್ ಕತ್ತರಿಸುವ ಮೂಲಕ ಪುಸ್ತಕ ಮಳಿಗೆಗಳನ್ನು ಉದ್ಘಾಟಿಸಿದರು, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ ಸಮ್ಮೇಳನದ ದ್ವಾರಗಳ ಉದ್ಘಾಟನೆ ನೆರವೇರಿಸಿದರು.
ಅಂಕೋಲಾ ಮೂಲದ ಹಿರಿಯ ಸಾಹಿತಿ ಶಾ.ಮಂ. ಕೃಷ್ಣರಾಯ ಕಾರ್ಯಕ್ರಮ ದೀಪಬೆಳಗಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು .ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಶಸ್ತಿಗಳಿಗಾಗಿ ಬರೆಯದೇ, ಸತ್ತರೂ ನೆನಪಿರುವಂತ ಬದುಕು ಕಟ್ಟುವ ಸಾಹಿತ್ಯ ಚಿರಕಾಲ ಉಳಿಯುತ್ತದೆ ಎಂದು ಯುವ ಬರಹಗಾರರಿಗೆ ಕಿವಿ ಮಾತು ಹೇಳಿದರು. ಕಸಾಪ ಅಂಕೋಲಾ ತಾಲೂಕಾ ಘಟಕದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಪ್ರಾಸ್ತಾವಿಕ ಮಾತನಾಡಿದರು., ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ ಎನ್ ವಾಸರೆ ಆಶಯ ನುಡಿ ಆಡಿದರು. ಸುಭಾಸ ಕಾರೇಬೈಲ್ ಕಾರ್ಯಕ್ರಮ ನಿರ್ವಹಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ