Focus News
Trending

ಶ್ರೀ ಕ್ಷೇತ್ರ ಕೊಗ್ರೆ ಬೊಮ್ಮಯ್ಯ ದೇವರ ಅಷ್ಟಬಂಧ ಮಹೋತ್ಸವ: ಇಂದು ಮಹಾಪೂಜೆ, ಅನ್ನ ಸಂತರ್ಪಣೆ

ಅoಕೋಲಾ: ಅಸಂಖ್ಯ ಭಕ್ತರ ಸೇವೆ ಮತ್ತು ಸಹಕಾರದಲ್ಲಿ ಭವ್ಯವಾಗಿ ತಲೆಯೆತ್ತಿ ನಿಂತಿರುವ ಪುರಾತನ ಪ್ರಸಿದ್ಧ ಶ್ರೀ ಕ್ಷೇತ್ರ ಕೊಗ್ರೆ ಬೊಮ್ಮಯ್ಯ ದೇವರ ಹಾಗೂ ಪರಿವಾರ ದೇವರ ಅಷ್ಟ ಬಂಧ ಮಹೋತ್ಸವ ಫೆ ೧೨ ರಿಂದ ಶುಭಾರಂಭಗೊoಡಿದ್ದು, ಶ್ರೀ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ವಿಜೃಂಭಣೆಯಿoದ ನಡೆಯುತ್ತಿವೆ.

ಪ್ರಕೃತಿ ರಮಣೀಯ ಈ ತಾಣ ,ಧಾರ್ಮಿಕ ಪ್ರಸಿದ್ಷಿ ಪಡೆದ ಶ್ರದ್ಧಾ ಭಕ್ತಿಯ ಕೇಂದ್ರವಾಗಿದ್ದು, ಈಗಾಗಲೆ ಇಲ್ಲಿ ಅಸಂಖ್ಯ ಭಕ್ತರ ತನು ಮನ ಧನ ಸಹಾಯ ಸಹಕಾರದಿಂದ ಬಹು ಕೋಟಿ ಹಣ ಸದ್ವಿನಿಯೋಗವಾಗಿದ್ದು, ಸುಂದರ ಶಿಲಾದೇಗುಲ, ದ್ವಾರ ಬಾಗಿಲು, ನೂತನ ಕಟ್ಟಡ, ತುಳಸಿಕಟ್ಟೆ, ಅಶ್ವತ ಕಟ್ಟೆ,ಹೊಸ ಮೆಟ್ಟಿಲುಗಳ ಲೋಕಾರ್ಪಣೆ ಮತ್ತಿತರ ಕಾರ್ಯಗಳು ನೆರವೇರಿ,ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಗಳು ಶ್ರದ್ಧಾ ಭಕ್ತಿಯಿಂದ ಜರುಗುತ್ತಿವೆ.

ಫೆಬ್ರುವರಿ ೧೬ ರ ಶುಕ್ರವಾರ ರಥಸಪ್ತಮಿಯ ದಿನದಂದು ಮಧ್ಯಾಹ್ನ ಮಹಾಪೂಜೆ,ಮಹಾ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.ರಾತ್ರಿ ೮.೩೦ ಕ್ಕೆ ಗೌರವ ಸಮರ್ಪಣೆ ಕಾರ್ಯಕ್ರಮ ಮತ್ತು ಕೊಗ್ರೆ ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶನವಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ದರ್ಶನ ಭಾಗ್ಯ ಪಡೆದು,ಪ್ರಸಾದ ಸ್ವೀಕರಿಸಿ,ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಹಕರಿಸುವಂತೆ ಕೊಗ್ರೆ ಬೊಮ್ಮಯ್ಯ ದೇವರ ದೇಗುಲ ನವೀಕರಣ ಸಮಿತಿಯವರು ಕೋರಿಕೊಂಡಿದ್ದಾರೆ.

ಭವ್ಯವಾದ ಶಿಲಾದೇಗುಲ,ಆಕರ್ಷಕ ಕಮಾನುಗಳು,ನೂರಾರು ಮೆಟ್ಟಿಲನ್ನೇರಿ ಶ್ರೀ ದೇವರ ದರ್ಶನ ಪಡೆಯುವ ಭಾಗ್ಯ ,ಸುತ್ತಮುತ್ತಲ ಸುಂದರ ನೋಟ ಮತ್ತಿತರ ಕಾರಣಗಳಿಂದ ಪ್ರತಿದಿನ ಸಾವಿರಾರು ಭಕ್ತರು ದೇವಸ್ಥಾನದತ್ತ ಬರಲಾರಂಬಿಸಿದ್ದು,ಮಹಾಪೂಜೆ ದಿನ ಕೆ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು ಪಾರ್ಕಿಂಗ್ ಮತ್ತಿತರ ಪೂರ್ವಸಿದ್ಧತೆಗಳು ಬರದಿಂದ ಸಾಗಿದ್ದು,ಶ್ರೀ ಕ್ಷೇತ್ರ ಕೊಗ್ರೆ ಭಕ್ತರನ್ನು ಕೈಬೀಸಿ ಕರೆಯುತ್ತಿದೆ .

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button