Big News
Trending

ಜಿಲ್ಲೆಯಾದ್ಯಂತ ಸರಳವಾಗಿ ಗಣೇಶೋತ್ಸವ ಆಚರಣೆ

  • ಹಳೆಬಸ್ ಸ್ಟ್ಯಾಂಡ್, ಪುರಸಭಾ ವ್ಯಾಯಾಮಾಶಾಲೆ, ಮೂರುಕಟ್ಟೆ, ಗುಡಾರಗಲ್ಲಿ ಗಣೇಶೋತ್ಸವ ಹೇಗಿತ್ತು?
  • ಭಟ್ಕಳದ ಪೊಲೀಸ್ ಗಣಪನಿಗೆ ಬೆಳ್ಳಿಕಿರೀಟ ಸಮರ್ಪಣೆ

ಕುಮಟಾ: ಸರಕಾರದ ಮಾರ್ಗಸೂಚಿಯಂತೆ ಕುಮಟಾ ಪಟ್ಟಣ ವ್ಯಾಪ್ತಿಯಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಈ ಬಾರಿ ಸರಳವಾಗಿ ಆಚರಿಸಲಾಯಿತು. ಪ್ರತಿ ವರ್ಷವೂ ಸಾರ್ವಜನಿಕ ಗಣೇಶೋತ್ಸವವನ್ನು ಅತ್ಯಂತ ಅದ್ದೂರಿಯಾಗಿ ಸಡಗರ ಸಂಭ್ರಮದಿಂದ ಆಚಿಸಲಾಗುತ್ತಿತ್ತು. ಆದರೆ ಈ ವರ್ಷದ ಕರೋನಾ ವೈರಸ್ ಹರಡುವಿಕೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸರಕಾರ ಕೆಲವೊಂದು ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದ್ದು, ಕುಮಟಾ ತಾಲೂಕಿನ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಕೂಡ ಅದರಂತೆಯೇ ಅತಿ ಸರಳವಾಗಿ ಗಣೇಶ ಚತುರ್ಥಿ ಆಚರಣೆ ಮಾಡಿದರು.

ಒಮ್ಮೆಲೆ ಅತಿ ಹೆಚ್ಚು ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ನೀಡದೆ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಜವಾಬ್ದಾರಿ ವಹಿಸಲಾಗಿತ್ತು. ಕುಮಟಾ ತಾಲೂಕಿನ ನೆಲ್ಲಿಕೇರಿ ಹಳೆಬಸ್ ಸ್ಟ್ಯಾಂಡ್, ಪುರಸಭಾ ವ್ಯಾಯಾಮಾಶಾಲೆ, ಮೂರುಕಟ್ಟೆ, ಗುಡಾರಗಲ್ಲಿ ಮುಂತಾದ ಭಾಗಗಳಲ್ಲಿ ವಿವಿಧ ಶೈಲಿಯ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಸರಕಾರದ ಆದೇಶದಂತೆಯೆ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಟ್ಟು, ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಸಮಿತಿಯ ವತಿಯಿಂದ ನಡೆಸಲಾಗಿದೆ.

ಕುಮಟಾ ನೆಲ್ಲಿಕೇರಿ ಹಳೆಬಸ್ ಸ್ಟ್ಯಾಂಡ್ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸದಸ್ಯರಾದ ಮಂಜುನಾಥ ಸಾಳೋಂಕೆಯವರು ನಮ್ಮ ವಿಸ್ಮಯ ಟಿ.ವಿ ಯೊಂದಿಗೆ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಸಹ ಶ್ರೀ ಮಂಗಲ ಮೂರ್ತಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಪ್ರತಿ ವರ್ಷವೂ ಸಹ ಬಹಳ ವಿಜ್ರಂಭಣೆಯಿಂದ ಗಣೇಶೋತ್ಸವವನ್ನು ಆಚರಿಸುತ್ತಿದ್ದೇವು, ಆದರೆ ಈ ಕರೋನಾ ವೈರಸ್ ಹರಡುವಿಕೆಯು ಅತಿಯಾಗಿರುವ ಕಾರಣ ಸರಕಾರ ಹೊರಡಿಸಿರುವ ಮಾರ್ಗಸೂಚಿಯಂತೆಯೆ ಆಚರಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು. ಗುಡಗಾರಗಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಮಂಜುನಾಥ ನಾಯ್ಕ ರವರು ಮಾತನಾಡಿ, ಕರೊನಾ ವೈರಸ್ ಜಗತ್ತಿನಾದ್ಯಂತ ಆವರಿಸಿರುವ ಕಾರಣದಿಂದಾಗಿ ಸರ್ಕಾರದ ಆದೇಶದಂತೆ ಈ ವರ್ಷ ನಾವು ಸಹ ಗಣೇಶೋತ್ಸವವನ್ನು ಅತ್ಯಂತ ಸರಳವಾಗಿ ಆಚರಿಸಿದ್ದೇವೆ. ಪ್ರತಿ ವರ್ಷ 10 ದಿನಗಳ ಕಾಲ ಗಣೇಶ ಮೂರ್ತಿಯನ್ನು ಕುರಿಸುತ್ತಿದ್ದೇವು, ಆದರೆ ಈ ಬಾರಿ 2 ದಿನಗಳ ಕಾಲ ಪೂಜೆ ಮಾಡಿ ವಿಸರ್ಜನೆ ಮಾಡಲಿದ್ದೇವೆ ಎಂದರು.

ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ವಿಡಿಯೋ ನೋಡಿ

ಭಟ್ಕಳ ತಾಲೂಕಿನಾದ್ಯಂತ 103 ಕಡೆ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ

ಭಟ್ಕಳ: ತಾಲೂಕಿನ ವಿವಿಧೆಡೆ ಕೊರೊನಾ ಹಿನ್ನೆಲೆ ಒಂದೇ ದಿನ ಅತ್ಯಂತ ಸರಳವಾಗಿ ಗಣೇಶ ಹಬ್ಬ ಆಚರಿಸಿದ್ದು, ವಿಸರ್ಜನೆ ಕಾರ್ಯಕ್ರಮವೂ ಕೂಡ ಶಾಂತಿಯುತವಾಗಿ ನಡೆದಿದೆ. ಕೋವಿಡ್-19ನ್ನು ನಿಯಂತ್ರಿಸುವ ಸಲುವಾಗಿ ಹಾಗೂ ಧಾರ್ಮಿಕ ಆಚರಣೆಗೂ ಧಕ್ಕೆ ಬಾರದಂತೆ ಸರಳವಾಗಿ ಹಬ್ಬ ಆಚರಣೆ ಮಾಡಲು ಸರ್ಕಾರದಿಂದ ಅವಕಾಶವನ್ನು ಕಲ್ಪಿಸಿಕೊಡಲಾಗಿತ್ತು.. ಆದರೆ ಈ ವರ್ಷ ಸಕಾಲಕ್ಕೆ ಮಳೆಯಾಗಿದ್ದರೂ ಸಹ ಕೊರೊನಾ ಭಯದಲ್ಲಿ ರೈತರು ಹಾಗೂ ಪಟ್ಟಣದ ಜನತೆ ಸಂಪ್ರದಾಯದಂತೆ ಇತ್ತ ಹಬ್ಬ ಆಚರಿಸಲೂ ಆಗದೆ, ಬಿಡಲೂ ಆಗದಂತ ಪರಿಸ್ಥಿತಿಯಲ್ಲಿದ್ದರು. ಶನಿವಾರ ಬೆಳಗ್ಗೆ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಭಕ್ತಿಯಿಂದ ಪೂಜಿಸಿದರು. ತಾಲೂಕಿನ ನಲ್ಲಿ ಒಟ್ಟು 103 ಕಡೆ ಗಣೇಶ ಮೂರ್ತಿಗಳನ್ನುಪ್ರತಿಷ್ಠಾಪಿಸಿದ್ದು, ಅದರಲ್ಲಿ ಭಟ್ಕಳ ನಗರದಲ್ಲಿ 12, ಗ್ರಾಮೀಣ ಭಾಗದಲ್ಲಿ 38, ಮುರುಡೇಶ್ವರ 30, ಸೇರಿದಂತೆ 80 ಕಡೆ ಸಂಜೆ ವಿಸರ್ಜನೆ ಮಾಡಲಾಗಿದೆ.

ಗಣೇಶ ಮೂರ್ತಿಯ ವಿಸರ್ಜನೆ ಪೂಜೆ ಮುಗಿಸಿ ಶಾಂತಿಯುತವಾಗಿ ಮೆರವಣಿಗೆ ಮೂಲಕ ಭಟ್ಕಳ ಹಳೆ ಬಸ್ ನಿಲ್ದಾಣದಿಂದ ಮಾರಿಕಾಂಬಾ ದೇವಸ್ಥಾನದ ಮಾರ್ಗವಾಗಿ ಚೌಥನಿಯ ಕುದುರೆ ಬೀರಪ್ಪ ಹೊಳೆಯಲ್ಲಿ ಹಾಗೂ ಇನ್ನುಳಿದ ಭಾಗದಲ್ಲಿ ವಿಸರ್ಜನೆ ನೆರವೇರಿಸಲಾಯಿತು. ಭಟ್ಕಳ ತಾಲೂಕಿನಾದ್ಯಂತ ವಿವಿಧೆಡೆ ಸ್ಥಾಪಿಸಲ್ಪಟ್ಟ ತಾಲೂಕಿನಾದ್ಯಂತ ಗಣಪತಿ ವಿಗ್ರಹವನ್ನು ಮೆರವಣಿಗೆಯ ಮುಖಾಂತರ ಹಾಗೂ ತಮ್ಮ ಸ್ವಂತ ವಾಹನದಲ್ಲಿ ತಂದು ಗಣೇಶನ ವಿಗ್ರಹಗಳನ್ನು ಭಕ್ತರು ಭಕ್ತಿಪರವಶರಾಗಿ ಪೂಜಿಸುವುದರ ಮೂಲಕ ತಾಲೂಕಿನಾದ್ಯಂತ ಹಬ್ಬವನ್ನು ಆಚರಿಸಿದರು.

ಮೂಡುಭಟ್ಕಳದ ಗಣಪ, ಕೆ.ಎಸ್ ಆರ್ ಟಿ ಸಿ ನೌಕರರ ಸಂಘದ ವತಿಯಿಂದ ಪೂಜಿತ ಗಣಪ, ಭಟ್ಕಳ ನ್ಯೂ ಇಂಗ್ಲೀಷ ಸ್ಕೂಲ್ ಗಣಪ, ತಲಗೋಡು ಕೋಟಿ ಮನೆ ಗಣಪ, ತಲಾಂದ ಸಾರ್ವಜನಿಕರ ಗಣಪತಿ,ಹೆಬ್ಬಳೆ ಗಾಂದಿನಗರದ ಸಾರ್ವಜನೀಕ ಗಣಪ, ಕೌವುರ್ ಸಾರ್ವಜನಿಕ ಗಣಪತಿ ಸೇರಿದಂತೆ ಎಲ್ಲ ಸಮಿತಿಗಳು ಸರ್ಕಾರದ ಮಾರ್ಗಸೂಚಿಯಂತೆ ಗಣೇಶ ಹಬ್ಬವನ್ನು ಆಚರಿಸಿದರು. ಅದೇ ರೀತಿ ಭಟ್ಕಳ ಪೊಲೀಸ್ ಠಾಣೆ ಗಣಪತಿಗೆ ಈ ವರ್ಷ ಎಲ್ಲಾ ಪೊಲೀಸರು ಸೇರಿ, ಗಣೇಶನಿಗೆ ಬೆಳ್ಳಿ ಕಿರೀಟ ನೀಡಿದ್ದಾರೆ.

ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ವಿಡಿಯೋ ನೋಡಿ

ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ

ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ
ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬoಧ ತೋರಿಸಲಾಗುವುದು
ಎರಡನೇಯ ಸಂಬoಧವನ್ನು ತೋರಿಸಲಾಗುವುದು
ಮೊಬೈಲ್: 7848833568

Back to top button