Uttara Kannada
Trending

ಜಿಲ್ಲೆಯಲ್ಲಿ ಇಂದು 111ಮಂದಿಗೆ ಕರೊನಾ: ಸಾವಿನ ಸಂಖ್ಯೆ 40ಕ್ಕೆ ಏರಿಕೆ

63 ಮಂದಿ ಗುಣಮುಖರಾಗಿ ಬಿಡುಗಡೆ
ಕುಮಟಾ, ಅಂಕೋಲಾದಲ್ಲಿ 3 ಕೇಸ್

ಕಾರವಾರ: ಉತ್ತರಕನ್ನಡದಲ್ಲಿ ಇಂದು 111 ಕರೊನಾ ಕೇಸ್ ದಾಖಲಾಗಿದೆ. ಇಂದಿನ ಹೆಲ್ತ್ ಬೆಲೆಟಿನ್ ಲ್ಲಿ ಪ್ರಕಟವಾದಂತೆ ಕಾರವಾರ ,3, ಅಂಕೋಲಾ 3, ಕುಮಟಾ 3, ಭಟ್ಕಳ 15, ಹೊನ್ನಾವರ 30, ಸಿದ್ದಾಪುರ‌ 25, ಮುಂಡಗೋಡ 11,ಹಳಿಯಾಳದಲ್ಲಿ 18 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಇದೇ ವೇಳೆ ಇಂದು ವಿವಿಧ ಆಸ್ಪತ್ರೆಯಿಂದ 63 ಮಂದಿ ಬಿಡುಗಡೆಯಾಗಿದ್ದಾರೆ. ಮುಂಡಗೋಡ 30, ಹಳಿಯಾಳ 18, ಜೋಯ್ಡಾ 2, ಹೊನ್ನಾವರ 4,ಕಾರವಾರ 9 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇಂದು ಮಂಡಗೋಡಿನಲ್ಲಿ ಒಂದು ಸಾವು ಸಂಭವಿಸಿದ್ದು, ಜಿಲ್ಲೆಯಲ್ಲಿ ಸಾವಿನ‌ ಸಂಖ್ಯೆ 40ಕ್ಕೆ ಏರಿಕೆಯಾಗಿದೆ. 290ಮಂದಿ ಜಿಲ್ಲೆಯ‌ ವಿವಿಧೆಡೆ ಹೋಮ್‌ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಂಕೋಲಾದಲ್ಲಿಂದು 2 ಕೇಸ್

ಅಂಕೋಲಾ : ಹೊರ ಜಿಲ್ಲೆಗಳಿಂದ ಬಂದಿದ್ದರು ಎನ್ನಲಾದ ತಾಲೂಕು ಮೂಲದ, ಕೊಡ್ಸಣಿ ವ್ಯಾಪ್ತಿಯ ಈರ್ವರಲ್ಲಿ ರವಿವಾರ ಕೊವಿಡ್-19 ಸೋಂಕಿನ ಲಕ್ಷಣಗಳು ದೃಢಪಟ್ಟಿವೆ. ಈ ಮೂಲಕ ತಾಲೂಕಿನ ಒಟ್ಟೂ ಸಕ್ರೀಯ ಸೋಂಕಿನ ಪ್ರಕರಣಗಳ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಇಂದು ತಾಲೂಕಿನ ಕೆಲವೆಡೆ ‘ರ್ಯಾಪಿಡ್ ಟೆಸ್ಟ್’ ಮಾದರಿಯಲ್ಲಿ ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗುತ್ತಿದ್ದು, ರಾತ್ರಿ ವೇಳೆ ಅಥವಾ ನಾಳೆಯ ವೇಳೆಗೆ ಮತ್ತೆ 2-3 ಪ್ರಕರಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಕೇಳಿ ಬಂದಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

Related Articles

Back to top button