ಈ ಬಾರಿ ನೈಋತ್ಯ ಮಾನ್ಸೂನ್ ವಾಡಿಕೆಯಂತೆ ಅಥವಾ ಅದಕ್ಕೂ ಮುನ್ನವೇ ಕರ್ನಾಟಕಕ್ಕೆ ಆಗಮಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಮೇ ೧೯ ರಂದು ಬಂಗಾಳಕೊಲ್ಲಿಯ ಆಗ್ನೆಯ ಭಾಗಕ್ಕೆ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಕ್ಕೆ ಮಾರುತಗಳು ಆಗಮಿಸಲಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಕ್ಕೆ ಬರುವ ಈ ಮಾರುತಗಳು ಏಳೆಂಟು ದಿನಗಳ ಬಳಿಕ ವಾಡಿಕೆಗಿಂತ ಮುನ್ನವೇ ಕೇರಳಕ್ಕೆ ಪ್ರವೇಶಿಸಲಿವೆ.
ನಂತರ, ಕೇರಳಕ್ಕೆ ಆಗಮಿಸಿರುವ ಮಾರುತಗಳು ಪ್ರಬಲವಾಗೊಂಡರೆ ಅದೇ ದಿನ ಕರ್ನಾಟಕದ ಕರಾವಳಿ ಭಾಗಕ್ಕೆ ಪ್ರವೇಶಿಸಲಿದ್ದು, ಈ ಸಂದರ್ಭದಲ್ಲಿ ಏನಾದರೂ ಚಂಡಮಾರುತ ಉಂಟಾದರೆ ಮಾರುತಗಳ ಮೇಲೆ ಪರಿಣಾಮ ಬೀರಿ ವಿಳಂಬವಾಗುತ್ತದೆ. ಮಾರುತಗಳು ಪ್ರಬಲಗೊಂಡರೆ ವಾಡಿಕೆಗಿಂತ ಮುನ್ನ ಅಥವಾ ವಾಡಿಕೆಯಂತೆ ರಾಜ್ಯಕ್ಕೆ ಮಾರುತಗಳು ಆಗಮಿಸಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್