Important
Trending

ಲಾರಿ ಚಾಲಕರ ಸಂಕಷ್ಟಕ್ಕೆ ಸ್ಪಂದಿಸಿದ ಶಾಸಕರು: ಒಂದು ಕ್ವಿಂಟಲ್ ಅಕ್ಕಿ ಸೇರಿ ದಿನಸಿ ಸಾಮಗ್ರಿ ವಿತರಣೆ

ಗುಡ್ಡ ಕುಸಿತದಿಂದ ದಾರಿಯಲ್ಲೇ ಸಿಲುಕಿಕೊಂಡ ಲಾರಿ ಡ್ರೆöÊವರ್‌ಗಳಿಗೆ ಸಹಾಯ

ಕುಮಟಾ: ಅಂಕೋಲಾದ ಶಿರೂರು ಗುಡ್ಡ ಕುಸಿತದಿಂದ ಮುಂದೆ ಸಾಗಲಾಗದೇ ಹೆದ್ದಾರಿಯ ತೆರವಿಗಾಗಿ ಕಾಯುತ್ತಿರುವ ಲಾರಿ, ಟ್ಯಾಂಕರ್ ವಾಹನಗಳು ರಸ್ತೆಯಲ್ಲಿ ಸಾಲಾಗಿ ನಿಂತಿದ್ದವು. ಕುಡಿಯಲು ನೀರು, ಊಟ ತಿಂಡಿಗಳಿಗೂ ಕಷ್ಟವಾದ ಸ್ಥಿತಿಯಲ್ಲಿದ್ದುದನ್ನು ಕಂಡ ಟೋಲ್‌ನ ಅಧಿಕಾರಿಗಳು ಇಂದು ಎಲ್ಲಾ ಲಾರಿ, ಟ್ಯಾಂಕರ್ ಚಾಲಕರಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಈ ವೇಳೆ ಜಮಖಂಡಿಯ ಚಾಲಕರೊಬ್ಬರು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿಯವರನ್ನು ಸಂಪರ್ಕಿಸಿ ತಮ್ಮ ಕಷ್ಟವನ್ನು ತೋಡಿಕೊಂಡಿದ್ದರು. ಇದನ್ನರಿತ ಶಾಸಕರು ಕೆಲವೇ ನಿಮಿಷಗಳಲ್ಲಿ ಟೋಲ್‌ಗೆ ಬಂದು ೧೦೦ಕೆಜಿ ಅಕ್ಕಿ ಸೇರಿದಂತೆ ದಿನಸಿ ಸಾಮಾಗ್ರಿಗಳನ್ನು ನೀಡಿದರು.

ನಂತರ ಮಾತನಾಡಿ, ಬಹಳ ದೂರದೂರುಗಳಿಂದ ಬಂದAತಹ ನೀವು ಸಮಸ್ಯೆಗಳನ್ನ ಅನುಭವಿಸಬಾರದು. ನಿಮಗೆ ಸಹಾಯ ಮಾಡುವುದು ನಮ್ಮ ಕೆಲಸವಾಗಿದೆ. ನಮ್ಮ ಊರಿಗೆ ಬಂದು ಉಪವಾಸದಿಂದಿರಬಾರದು. ನೀವು ಕರೆ ಮಾಡಿ ತಿಳಿಸಿದ ೪೫ ನಿಮಿಷದೊಳಗೆ ನಿಮಗೆ ಬೇಕಾಗುವ ದಿನಸಿ ಸಾಮಾಗ್ರಿಗಳನ್ನು ನೀಡಿದ್ದೇನೆ. ಇನ್ನು ಏನಾದರೂ ಬೇಕೆಂದರೆ ನನ್ನನ್ನು ಅಥವಾ ಟೋಲ್‌ನ ಅಧಿಕಾರಿಯನ್ನು ಸಂಪರ್ಕಿಸಿ ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷರಾದ ಜಿ.ಐ ಹೆಗಡೆ, ಬಿಜೆಪಿ ಪ್ರಮುಖರಾದ ವಿಶ್ವನಾಥ ನಾಯ್ಕ, ಹರಿಹರ ನಾಯ್ಕ, ಟೋಲ್‌ನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಲಾರಿ ಚಾಲಕರು ಇದ್ದರು.

ವಿಸ್ಮಯ ನ್ಯೂಸ್, ನಾಗೇಶ ದೀವಗಿ, ಕುಮಟಾ

Back to top button