Job News
Trending

Konkan Railway Recruitment: ಕೊಂಕಣ ರೈಲ್ವೆ ನೇಮಕಾತಿ: ಡಿಪ್ಲೋಮಾ, ಐಟಿಐ ಆದವರು ಅರ್ಜಿ ಸಲ್ಲಿಸಿ: 45 ಸಾವಿರ ವೇತನ

ಅರ್ಜಿ ಸಲ್ಲಿಕೆ ಸೆಪ್ಟೆಂಬರ್ 16, 2024 ರಿಂದ ಆರಂಭವಾಗಲಿದ್ದು, ಅಕ್ಟೋಬರ್ 6, 2024 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.

Konkan Railway Recruitment: ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ 190 ಖಾಲಿ ಹುದ್ದೆಗಳು ಖಾಲಿಯಿದ್ದು, ನೇಮಕಾತಿ ನಡೆಯಲಿದೆ. ಡಿಪ್ಲೋಮಾ, ಐಟಿಐ ಮತ್ತು ಇಂಜಿನಿಯರಿಂಗ್ ಪೂರೈಸಿದ ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಆರಂಭಿಕ ಮಾಸಿಕ ವೇತನ ಶ್ರೇಣಿ 45 ಸಾವಿರ ತನಕ ಇದ್ದು, ಈ ಕುರಿತು ಅಧಿಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ಇಲ್ಲಿದೆ ಉದ್ಯೋಗಾವಕಾಶ: 1476 ಹುದ್ದೆಗಳಿಗೆ ನೇಮಕಾತಿ: SSLC ಆದವರು ಅರ್ಜಿ ಸಲ್ಲಿಸಿ

ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ಭಾಗದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಸೆಪ್ಟೆಂಬರ್ 16, 2024 ರಿಂದ ಆರಂಭವಾಗಲಿದ್ದು, ಅಕ್ಟೋಬರ್ 6, 2024 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ( Konkan Railway Recruitment ) ಅಧಿಕೃತ ವೆಬ್‌ಸೈಟ್ ಮೂಲಕ ಸಲ್ಲಿಸಬಹುದು. ನೇಮಕಾತಿ ಡ್ರೈವ್ ಒಟ್ಟು 190 ಹುದ್ದೆಗಳನ್ನು ಭರ್ತಿ ಮಾಡುವ ಗುರಿಯನ್ನು ಹೊಂದಿದೆ. ಕೆಆರ್‌ಸಿಎಲ್ ಯೋಜನೆಗಾಗಿ ಭೂಮಿಯನ್ನು ನೀಡಿರುವ ಕುಟುಂಬಗಳ ಅಭ್ಯರ್ಥಿಗಳಿಗೆ ಆದ್ಯತೆ ಕೂಡಾ ಇದೆ.

ಒಟ್ಟು ಹುದ್ದೆಗಳು190
ಸಂಸ್ಥೆಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್
ವಿದ್ಯಾರ್ಹತೆಡಿಪ್ಲೋಮಾ, ಐಟಿಐ
ಮಾಸಿಕ ವೇತನ45 ಸಾವಿರ

ಅರ್ಜಿದಾರರು ಆಗಸ್ಟ್ 1, 2024 ರಂತೆ 18 ರಿಂದ 36 ವರ್ಷ ವಯಸ್ಸು ಪೂರ್ಣಗೊಳಿಸರಬೇಕು. ಕೋವಿಡ್-19 ರೋಗದಿಂದಾಗಿ ಹಿಂದಿನ ಮಿತಿಯನ್ನು ಕಳೆದುಕೊಂಡಿರುವವರಿಗೆ ಅವಕಾಶ ಕಲ್ಪಿಸಲು ಗರಿಷ್ಠ ವಯಸ್ಸಿನ ಮಿತಿಯನ್ನು 33 ರಿಂದ 36 ಕ್ಕೆ ವಿಸ್ತರಿಸಲಾಗಿದೆ. ಲೆವೆಲ್ 1 ರಿಂದ ಲೆವೆಲ್ 7 ರ ತನಕದ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ತಿಂಗಳಿಗೆ 18 ಸಾವಿರದಿಂದ 45 ಸಾವಿರ ತನಕ ವೇತನ ಶ್ರೇಣಿ ನಿಗದಿಯಾಗಿದೆ.

ಅರ್ಜಿ ಸಲ್ಲಿಕೆ ಆರಂಭಸೆಪ್ಟೆಂಬರ್ 16 , 2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕಅಕ್ಟೋಬರ್ 6 , 20024
ಅಧಿಸೂಚನೆ ಓದಲುಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್ಇಲ್ಲಿ ಕ್ಲಿಕ್ ಮಾಡಿ

ಎಲೆಕ್ಟ್ರಿಕಲ್ ಡಿಪಾರ್ಟ್ಮೆಂಟ್, ಟೆಕ್ನಿಷಿಯನ್, ಮೆಕಾನಿಕಲ್ ಡಿಪಾರ್ಟ್ಮೆಂಟ್, ಸ್ಟೇಷನ್ ಮಾಸ್ಟರ್, ಸೂಪರ್‌ವೈಸರ್ ಹುದ್ದೆ ಹೀಗೆ ವಿವಿಧ ಹುದ್ದೆಗಳು ಖಾಲಿಯಿದ್ದು, ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕೊಂಕಣ ರೈಲ್ವೆ ಯೋಜನೆಗಾಗಿ ಭೂಮಿಯನ್ನು ನೀಡಿರುವ ಕುಟುಂಬಗಳ ವ್ಯಕ್ತಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಭೂಮಿ ಕಳೆದುಕೊಂಡ ಕುಟುಂಬದವರ ಸಂಗಾತಿ, ಮಕ್ಕಳು ಮತ್ತು ಮೊಮ್ಮಕ್ಕಳು ಸಹ ಅರ್ಹರಾಗಿದ್ದು, ನೇಮಕಾತಿ ಪ್ರಕ್ರಿಯೆಯಲ್ಲಿ ಮೊದಲ ಆದ್ಯತೆಯನ್ನು ಪಡೆಯುತ್ತಾರೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಹೆಚ್ಚಿನ ಉದ್ಯೋಗಾವಕಾಶದ ಕುರಿತು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button