Follow Us On

WhatsApp Group
Big News
Trending

ಶಿರೂರು ದುರಂತ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಆಗ್ರಹ: NHAI ಕಚೇರಿಗೆ ಮುತ್ತಿಗೆ ಹಾಕಲು ಯತ್ನ

ಹೊನ್ನಾವರ: ಶಿರೂರು ಸಂತ್ರಸ್ತರಿಗೆ ನ್ಯಾಯಕ್ಕಾಗಿ ಆಗ್ರಹಿಸಿ, ಹೊನ್ನಾವರ ಪಟ್ಟಣದಲ್ಲಿ ನಾಮಧಾರಿ, ಈಡಿಗ, ಹಾಲಕ್ಕಿ ಸಮಾಜ ಹಾಗು ವಿವಿಧ ಜನಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಬ್ರಹತ್ ಪ್ರತಿಭಟನೆ ನಡೆಯಿತು. ಪಟ್ಟಣದ ಶರಾವತಿ ವೃತ್ತದಿಂದ ಶ್ರೀ ಪ್ರಣವಾನಂದ ಸ್ವಾಮೀಜಿ ನೇತ್ರತ್ವದಲ್ಲಿ ಬ್ರಹತ್ ಪ್ರತಿಭಟನೆ ಪ್ರತಿಭಟನೆ ಆರಂಭವಾಗಿ ರಾಷ್ಟ್ರೀಯ ಹೆದ್ದಾರಿ 66 ರ ಮೂಲಕ ಪಟ್ಟಣದ ಮಾಸ್ತಿಕಟ್ಟೆ ರಸ್ತೆ ಮೂಲಕ ಪ್ರತಿಭಟನಾ ಮೆರವಣಿಗೆ ಸಾಗಿತು.

ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಲಕ್ಷಾಂತರ ರೂಪಾಯಿ ನಗದು ಕಳ್ಳತನ : ಕ್ಯಾಮೆರಾ ಬದಿಗೆ ಸರಿಸಿ, ಡಿವಿಆರ್ ನಾಶಪಡಿಸಿದ ಚಾಲಾಕಿ ಕಳ್ಳರು

ಈ ವೇಳೆ ಪ್ರತಿಭಟನಾ ನಿರತರನ್ನು ಪೊಲೀಸರು ಬ್ಯಾರಿಕೆಟ್ ಹಾಕುವ ಮೂಲಕ ತಡೆದರು. ಈ ಸಂದರ್ಭದಲ್ಲಿ ಪ್ರತಿಭಟನಾ ನಿರತರು ಪೊಲೀಸರ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಎನ್ ಎಚ್ ಎ ಐ ಕಚೇರಿಗೆ ಮುತ್ತಿಗೆ ಹಾಕಲು ಬ್ಯಾರಿಕೇಡ್ ತೆರವು ಗೊಳಿಸುವಂತೆ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನಾ ನಿರತರ ಮನವಿ ಆಲಿಸಲು ಈ ವೇಳೆ ಸ್ಥಳಕ್ಕೆ ತಹಶಿಲ್ದಾರ ರವಿರಾಜ ದೀಕ್ಷಿತ್ ಭೇಟಿ ನೀಡಿ,ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶ್ರೀ ಪ್ರಣವಾನಂದ ಸ್ವಾಮೀಜಿ ಮಾತನಾಡಿ,ಇಲ್ಲಿನ ರಾಜಕಾರಣಿಗಳು ಜನರನ್ನು ಮಂಗಮಾಡಲು ಹೋರಟಿದ್ದಾರೆ.

ಎನ್ ಎಚ್ ಎಐ ಎನ್ನುವುದು ಲೂಠಿಕೋರ ಕಂಪನಿ. ಅದರ ಹಿಂದೆ ಸಾಕಷ್ಟು ರಾಜಕಾರಣಿಗಳಿದ್ದಾರೆ. ಅವೈಜ್ಞಾನಿಕ ಕಾಮಗಾರಿ ಎನ್ನುತ್ತಾರೆ. ಎನ್ ಎಚ್ ಎಐ,ಐಆರ್ ಬಿ ವಿರುದ್ದ ಕ್ರಮಕೈಗೊಂಡಿಲ್ಲ. ನಮ್ಮ ಜೊತೆ ನಿಲ್ಲದ ರಾಜಕಾರಣಿಗಳ ಮುಂದಿನ ಚುನಾವಣೆಯಲ್ಲಿ ಮನೆಗೆ ಕಳುಹಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ ಹೋರಾಟ ಸಂಸದರ ಮನೆ ಮುಂದೆ ನಡೆಸುತ್ತೇವೆ ಎಂದರು.

ರಾಷ್ಟ್ರೀಯ ಈಡಿಗ ನಾಮಧಾರಿ ಮಹಾಮಂಡಳಿಯ ರಾಜ್ಯ ಯುವ ಘಟಕದ ಅಧ್ಯಕ್ಷ ಸಚೀನ್ ನಾಯ್ಕ ಮಾತನಾಡಿ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದರು.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Back to top button