ಉಗ್ರರ ದಾಳಿ ಬಳಿಕ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸುತ್ತಿರುವ ವ್ಯಾಪಾರಿಗಳು, ರೈತರು: ವೀಳ್ಯದೆಲೆ ರಪ್ತು ಮಾಡುವುದಿಲ್ಲ ಎಂದ ಬೆಳೆಗಾರರು

ಹೊನ್ನಾವರ: ಪಾಕಿಸ್ಥಾನಕ್ಕೆ ವೀಳ್ಯದೆಲೆ ಕಳುಹಿಸುವುದಾದರೆ ನಾವು ಮುಂಬಯಿ ಮತ್ತು ಉತ್ತರದ ರಾಜ್ಯಗಳ ವ್ಯಾಪಾರಿಗಳಿಗೆ ವೀಳ್ಯದೆಲೆ ಕೊಡುವುದಿಲ್ಲ ಎಂದು ಹೊನ್ನಾವರ ತಾಲೂಕಿನ ಗ್ರಾಮೀಣ ಭಾಗದ ವೀಳ್ಯದೆಲೆ ವ್ಯಾಪಾರಿಗಳು ತಿಳಿಸಿದ್ದಾರೆ.
ಸ್ವಾತಂತ್ರ್ಯ ಪೂರ್ವದಿಂದಲೂ ಉತ್ತರ ಭಾರತ ಮತ್ತು ಈಗಿನ ಪಾಕಿಸ್ಥಾನ ಪ್ರದೇಶದ ಜನರಿಗೆ ಹೊನ್ನಾವರ ತಾಲೂಕಿನ ಗ್ರಾಮೀಣ ಭಾಗದ ವೀಳ್ಯದೆಲೆ ಮೇಲೆ ತುಂಬಾ ವ್ಯಾಮೋಹ. ಖಾರವಾಗಿರುವ, ಕಪ್ಪಗಿರುವ ಅಂಗೈಗಿಂತ ಅಗಲವಾಗಿರುವ ಈ ವೀಳ್ಯದೆಲೆಗೆ ವಿಶೇಷ ರುಚಿಯಿದೆ. ಇದೇ ಎಲೆಯನ್ನು ಬೇರೆಡೆ ಬೆಳೆದರೆ ಈ ರುಚಿ ಬರುವುದಿಲ್ಲ. ಈ ಎಲೆಯೊಂದಿಗೆ ಅಡಿಕೆ, ಸುಣ್ಣ ಸೇರಿಸಿ ವೀಳ್ಯದೆಲೆಯನ್ನು ಮೆಲ್ಲುವ ಅನುಭವ ವಿಶೇಷವಾಗಿದ್ದು, ಔಷಧಿ ಗುಣಗಳನ್ನು ಹೊಂದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಗ್ವಾದ ಗೋವಿಂದ ಭಟ್ ಮಾತನಾಡಿ ನಾವು ಪ್ರತಿದಿನ ವಿಳ್ಯದೆಲೇಯನ್ನು ಹೊನ್ನಾವರದಿಂದ ಹುಬ್ಬಳ್ಳಿಗೆ ವಾಹನದ ಮೂಲಕ ತದನಂತರ ಹುಬ್ಬಳ್ಳಿಯಿಂದ ರೈಲ್ವೆಯ ಮೂಲಕ ಬೋಪಾಲ್,ಇನ್ನಿತರ ಬೇರೆ ದೇಶಗಳಿಗೆ ಕಳುಹಿಸುತ್ಥಿದ್ದೇವೆ. ಈಗ ಪಾಕಿಸ್ಥಾನಕ್ಕೂ ಅಲ್ಲಿನ ಎಜೆಂಟರು ಕಳುಹಿಸುತ್ತಿದಲ್ಲಿ ಅಂತಹ ಎಜೆಂಟರಿಗೆ ವಿಳ್ಯದೆಲೆ ಕಳುಹಿಸುವುದನ್ನು ಬಂದ್ ಮಾಡುತ್ತೇವೆ ಎಂದರು.
ಇನ್ನೋರ್ವ ವ್ಯಾಪಾರಸ್ಥರಾದ ರಾಮ ಸುಬ್ರಾಯ ಹೆಗಡೆ ಮಾತನಾಡಿ ನಾವು ಬಹಳ ವರ್ಷಗಳಿಂದ ವಿಳ್ಯದೆಲೆ ವ್ಯಾಪಾರವನ್ನು ನಡೆಸಿಕೊಂಡು ಬರುತ್ತಿದ್ದು, ಪಾಕಿಸ್ತಾನಕ್ಕೆ ಎಲ್ಲಾ ಕಳುಹಿಸುತ್ತಿಲ್ಲ. ರಾಜ್ಯದಲ್ಲಿ ಮಾತ್ರ ಕಳುಹಿಸುತ್ತಿದ್ದೇವೆ ಎಂದರು. ಇನ್ನೂ ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನವನ್ನು ಮಟ್ಟಹಾಕಲು ಭಾರತ ಹಲವು ರೀತಿಯ ಕ್ರಮಕ್ಕೆ ಮುಂದಾಗಿದ್ದು, ಹೊನ್ನಾವರದಿಂದ ಪಾಕಿಸ್ಥಾನದ ಮಾರುಕಟ್ಟೆ ತಲುಪುತ್ತಿದ್ದ ವೀಳ್ಯದೆಲೆಯನ್ನೂ ಇನ್ನು ಮುಂದೆ ಕಳುಹಿಸದಿರಲು ಬೆಳೆಗಾರರು ನಿರ್ಧರಿಸಿದ್ದಾರೆ.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ