Join Our

WhatsApp Group
Info
Trending

ಉತ್ತರಕನ್ನಡದಲ್ಲಿ ಇಂದು 104 ಕೇಸ್ ದೃಢ: ಅಂಕೋಲಾದಲ್ಲಿ 7 ಪಾಸಿಟಿವ್

  • ಗುಣಮುಖ 17 : ಸಕ್ರಿಯ 76
  • ಬೊಳೆ, ಮಂಜಗುಣಿ, ಹಿಲ್ಲೂರು ವ್ಯಾಪ್ತಿಯಲ್ಲಿ 96 ಜನರ ಗಂಟಲು ದ್ರವ ಪರೀಕ್ಷೆ

ಅಂಕೋಲಾ : ಉತ್ತರಕನ್ನಡದಲ್ಲಿ ಇಂದು 104 ಕರೊನಾ ಕೇಸ್ ದೃಢಪಟ್ಟಿದೆ. ಇದೇ ವೇಳೆ ತಾಲೂಕಿನಲ್ಲಿ ಶನಿವಾರ ಒಟ್ಟು 7 ಹೊಸ ಕೊವಿಡ್ ಪ್ರಕರಣಗಳು ದಾಖಲಾಗಿದೆ. ಅವು ಗಳಲ್ಲಿ 6 ಪ್ರಕರಣಗಳು ಸೋಂಕಿತರ ಸಂಪರ್ಕದಿಂದ ಬಂದಿರುವ ಸಾಧ್ಯತೆಯಿದ್ದು, ಒಂದು ಪ್ರಕರಣ ಜ್ವರ ಲಕ್ಷಣಗಳಿಂದ ಕೂಡಿದ ಐ.ಎಲ್.ಐ ಮಾದರಿ ಪಾಸಿಟಿವ್ ಎನ್ನಲಾಗಿದೆ.

ಅವರ್ಸಾದಲ್ಲಿ 2 ಪ್ರಕರಣಗಳು ಪತ್ತೆಯಾಗಿದ್ದರೆ, ಉಳಿದ 5 ಪ್ರಕರಣಗಳು ಅಗಸೂರು ವ್ಯಾಪ್ತಿಯ ನವಗದ್ದೆಯಲ್ಲಿ ಕಾಣಿಸಿಕೊಂಡಿದೆ. ಸೋಂಕು ಮುಕ್ತರಾದ 17 ಜನರನ್ನು ಬಿಡುಗಡೆಗೊಳಿಸಲಾಗಿದ್ದು, ಹೋಂ ಐಸೋಲೇಶನ್‍ನಲ್ಲಿರುವ 45 ಮಂದಿ ಸಹಿತ ತಾಲೂಕಿನಲ್ಲಿ 76 ಪ್ರಕರಣಗಳು ಸಕ್ರಿಯವಾಗಿದೆ.

ಮಾಸ್ಕ್ ಧರಿಸದ 26 ಮಂದಿಗೆ ದಂಡ

ಗ್ರಾಮೀಣ ವ್ಯಾಪ್ತಿ ಸೇರಿದಂತೆ ನಾನಾ ಭಾಗಗಳಿಂದ 96 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಜಿಲ್ಲಾಧಿಕಾರಿ ಗಳು ಹಾಗೂ ಎಸಿ ಅವರ ಸೂಚನೆಯಂತೆ ಮಾಸ್ಕ ಧರಸದೇ ಸಂಚರಿಸುವವರ ಮೇಲೆ ದಂಡ ಪ್ರಯೋಗ ಮುಂದುವರಿಸಿರುವ ಪುರಸಭೆಯವರು 26 ಜನರಿಂದ ತಲಾ 200 ರೂ. ರಂತೆ ಒಟ್ಟೂ 5200 ರೂ.ದಂಡ ವಸೂಲಿ ಮಾಡಿದ್ದಾರೆ.

ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ ಧರಿಸಿ ಕೊವಿಡ್ ವಿರುದ್ಧದ ಹೋರಾಟಕ್ಕೆ ಕೈಜೋಡಿಸುವಂತೆ ಅಧಿಕಾರಿಗಳು ಕೋರಿಕೊಂಡಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಇದನ್ನೂ ಓದಿ : ಪ್ರಮುಖ‌ ಸುದ್ದಿಗಳು

Check Also
Close
Back to top button