ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1,274 ಕ್ಕೆ ಏರಿಕೆ
ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸೋಂಕಿತರು ಪತ್ತೆ
ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು 18 ಕರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ತಾಲೂಕಿನ ಮೊಸಳೆಸಾಲದಲ್ಲಿ 2, ಕಲ್ಕೇರಿ 2, ದಿವಗಿ 2, ಬಳ್ಳಾಲಮಕ್ಕಿ 2 ಸೇರಿದಂತೆ, ಅಳ್ವೇಕೊಡಿ, ಮಣ್ಕಿ, ದೇವರಬಾವಿ, ಗಂಜಿಗದ್ದೆ, ಜೇಷ್ಠಪುರ, ಮಾಸೂರ್, ಹೊಲನಗದ್ದೆ, ಕೊಡ್ಕಣಿ ಮುಂತಾದ ಭಾಗದಲ್ಲಿ ಸೋಂಕಿತ ಪ್ರಕರಣ ಪತ್ತೆಯಾಗಿದೆ.
ಮೊಸಳೆಸಾಲದ 65 ವರ್ಷದ ಪುರುಷ, 61 ವರ್ಷದ ಪುರುಷ, ಅಳ್ವೇಕೊಡಿಯ 49 ವರ್ಷದ ಪುರುಷ, ಮಣ್ಕಿ ಸಮೀಪದ 25 ವರ್ಷದ ಯುವಕ, ದೇವರಬಾವಿಯ 67 ವರ್ಷದ ವೃದ್ಧೆ, ಗಂಜಿಗದ್ದೆಯ 72 ವರ್ಷದ ವೃದ್ಧನಿಗೆ ಪಾಸಿಟಿವ್ ಬಂದಿದೆ.
ದಿವಗಿಯ 54 ವರ್ಷದ ಮಹಿಳೆ, 19 ವರ್ಷದ ಯುವತಿ, ಜೇಷ್ಠಪುರದ 46 ವರ್ಷದ ಪುರುಷ, ಹೊಲನಗದ್ದೆಯ 71 ವರ್ಷದ ವೃದ್ಧ, ಕೊಡ್ಕಣಿಯ 54 ವರ್ಷದ ಪುರುಷ, ಕುಮಟಾದ 23 ವರ್ಷದ ಯುವಕ, ಮಾಸೂರಿನ 16 ವರ್ಷದ ಬಾಲಕ, ಕಲ್ಕೇರಿಯ 37 ವರ್ಷದ ಪುರುಷ, 60 ವರ್ಷದ ಮಹಿಳೆ, ಬಳ್ಳಾಲಮಕ್ಕಿಯ 67 ವರ್ಷದ ವೃದ್ಧ, 19 ವರ್ಷದ ಯುವಕ, ಹೆಗಡೆಯ 68 ವರ್ಷದ ವೃದ್ಧೆಯಲ್ಲಿ ಸೋಂಕು ದೃಢಪಟ್ಟಿದೆ. ಇಂದು 18 ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1,274 ಕ್ಕೆ ಏರಿಕೆಯಾಗಿದೆ.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ ಕುಮಟಾ