ಮಾಹಿತಿ
Trending

ಅಳಕೋಡ್ ಶಕ್ತಿಕೇಂದ್ರ ದ ಬೂತ್ ಕಮಿಟಿ ಸಭೆ

ಅಳಕೋಡ್ ಗ್ರಾಮ ಪಂಚಾಯತ್ ಶಕ್ತಿಕೇಂದ್ರ ದ ಬೂತ್ ಕಮಿಟಿ ಸಭೆ ಇಂದು ಜಿ ಪಂ ಸದಸ್ಯರಾದ ಗಜಾನನ ಪೈ ಅವರ ಮನೆಯಲ್ಲಿ ನಡೆಯಿತು.

ಮಂಡಲಾಧ್ಯಕ್ಷರಾದ ಹೇಮಂತ್ ಕುಮಾರ್ ಮಾತನಾಡಿ ಸವಿಸ್ತಾರ ವಾಗಿ ಸರ್ಕಾರದ ಯೋಜನೆಗಳನ್ನ ಸಾಮಾನ್ಯ ಪ್ರಜೆಯನ್ನ ತಲುಪಿಸಲು ನಮ್ಮ ಕಾರ್ಯಕರ್ತರು ಕಟಿಬದ್ಧರಾಗಬೇಕು ,ಈ ದೆಶೆಯಲ್ಲಿ ಬೂತ್ ಕಾರ್ಯಕರ್ತರು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಅಭಿಪ್ರಾಯ ಪಟ್ಟರು ..

ಜಿಲ್ಲಾ ಪ್ರಮುಖರಾದ ಎಂ ಜಿ ಭಟ್ ಮಾತನಾಡಿ ಸಮೃದ್ಧ ರಾಷ್ಟ್ರ ನಿರ್ಮಾಣ ನಮ್ಮ ಗುರಿಯಾಗಬೇಕು ,ಪ್ರತಿ ಕಾರ್ಯಕರ್ತ ಕೂಡ ಸೈನಿಕನ ಹಾಗೆ ಕಾರ್ಯ ನಿರ್ವಹಿಸಬೇಕು ಎಂದರು ,,

ಜಿಲ್ಲಾ ಪ್ರಮುಖರಾದ ನಾಗರಾಜ್ ನಾಯಕ್ ಮಾತನಾಡಿ ಮೋದಿ ಸರ್ಕಾರದ ಸಾಧನೆಯನ್ನ ಎಳೆಎಳೆಯಾಗಿ ವಿವರಿಸಿದರು ..

ಜಿ ಪಂ ಸದಸ್ಯ ಗಜು ಪೈ ಮಾತನಾಡಿ ಅಳ್ಕೋಡ್ ಪಂಚಾಯತ್ ವ್ಯಾಪ್ತಿಯಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಆಗುತ್ತಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಮಯದಲ್ಲಿ ಜಿಲ್ಲಾ ಯುವಮೋರ್ಚಾ ಸದಸ್ಯರಾದ ಆದಿತ್ಯ ಶೇಟ್ , ಕಾರ್ತಿಕ್ ಭಟ್ , ಭಾಸ್ಕರ್ ಹರಿಕಂತ್ರ , ಶರತ್ ನಾಯ್ಕ್, ಗಣಪತಿ ನಾಯ್ಕ್ , ಶಕ್ತಿ ಕೇಂದ್ರ ಅಧ್ಯಕ್ಷರು ಹಾಗು ೮ ಬೂತ್ ಅಧ್ಯಕ್ಷರು ,ಸದಸ್ಯರು ,ಕಾರ್ಯಕರ್ತರು ಹಾಜರಿದ್ದರು .

ಈ ಸಂದರ್ಭದಲ್ಲಿ ಸುಂಡಳ್ಳಿ ಉದಯ್ ಜೈನ್ ಅವರು ಕಾಂಗ್ರೆಸ್ಸಿನಿಂದ ಬಿಜೆಪಿಗೆ ಸೇರ್ಪಡೆಯಾದರು.ಲೋಕೇಶ್ ಹೆಗ್ಡೆ ಸ್ವಾಗತಿಸಿ , ನಿರೂಪಿಸಿದರು ..
ಉದಯ್ ಭಟ್ ವಂದಿಸಿದರು.

ವಿಸ್ಮಯ ನ್ಯೂಸ್ ಕುಮಟಾ

ಇದನ್ನೂ ಓದಿ: ಪ್ರಮುಖ‌‌‌‌ ಸುದ್ದಿಗಳು

Back to top button