
ಯಲ್ಲಾಪುರ: ತಾಲೂಕಿನಲ್ಲಿ ಮಂಗಳವಾರ 10 ಜನರಿಗೆ ಕೊರೊನಾ ಧೃಢಪಟ್ಟಿದ್ದು, 23 ಮಂದಿ ಗುಣಮುಖರಾಗಿದ್ದಾರೆ. ಇಂದು ಹಂಡ್ರಮನೆಯಲ್ಲಿ 5, ಚಂದಗುಳಿಯಲ್ಲಿ 2 ಹಾಗೂ ಕಾಳಮ್ಮನಗರ, ರವೀಂದ್ರನಗರ, ಉಪಳೇಶ್ವರಗಳಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. ಈವರೆಗೆ ಗುಣಮುಖರಾದವರ ಸಂಖ್ಯೆ 765 ಕ್ಕೇರಿದೆ.
ಶಿರಸಿಯಲ್ಲಿಂದು 5 ಮಂದಿಗೆ ಪಾಸಿಟಿವ್:
ಶಿರಸಿ: ತಾಲೂಕಿನಲ್ಲಿಂದು ಐವರಿಗೆ ಕೊರೊನಾ ದೃಢಪಟ್ಟಿದ್ದು, 8 ಮಂದಿ ಗುಣಮುಖರಾಗಿದ್ದಾರೆ.
ಮಾರುತಿಗಲ್ಲಿಯಲ್ಲಿ 1, ದೊಡ್ನಳ್ಳಿಯಲ್ಲಿ 2, ಚಿಪಗಿಯಲ್ಲಿ 1, ಎಪಿಎಮ್ಸಿ ಮಾರ್ಕೇಟ್ ಹತ್ತಿರದಲ್ಲಿ 1 ಕೇಸ್ ದೃಢವಾಗಿದೆ.
ಅಂಕೋಲಾದಲ್ಲಿಂದು 4 ಕೊವಿಡ್ ಕೇಸ್
ಅಂಕೋಲಾ : ಮಂಗಳವಾರ ತಾಲೂಕಿನಲ್ಲಿ 4 ಹೊಸ ಕೊವಿಡ್ ಕೇಸ್ಗಳು ಪತ್ತೆಯಾಗಿದೆ. ತಾಲೂಕಿನ ಗಡಿ ಪ್ರದೇಶವಾದ ಬ್ರಹ್ಮೂರು-ಕಬಗಾಲ ವ್ಯಾಪ್ತಿಯ 56 ರ ಮಹಿಳೆ, 3ರ ಪುಟಾಣಿ ಬಾಲೆ, 7 ರ ಬಾಲಕ ಹಾಗೂ ಬೆಳಸೆ ವ್ಯಾಪ್ತಿಯ 42ರ ಮಹಿಳೆಯಲ್ಲಿ ಸೋಂಕು ಲಕ್ಷಣಗಳು ಧೃಡಪಟ್ಟಿವೆ.
ಗುಣಮುಖರಾದ 7 ಜನರನ್ನು ಬಿಡುಗಡೆಗೊಳಿಸಲಾಗಿದ್ದು, ಹೋಂ ಐಸೋಲೇಶನ್ಲ್ಲಿರುವ 28 ಮಂದಿ ಸಹಿತ ಒಟ್ಟೂ 45 ಸಕ್ರಿಯ ಪ್ರಕರಣಗಳಿವೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- Job: ಪ್ರತಿಷ್ಠಿತ ಗೃಹೋಪಯೋಗಿ ಮಳಿಗೆಯಲ್ಲಿ ಉದ್ಯೋಗಾವಕಾಶ: ಇಂದೇ ಸಂಪರ್ಕಿಸಿ
- ಇಸ್ರೆಲ್ ನಲ್ಲಿ ಕೆಲಸ ಮಾಡುವ ಸುವರ್ಣಾವಕಾಶ: 1 ಲಕ್ಷದ 70 ಸಾವಿರ ಸಂಬಳ
- ಏಪ್ರಿಲ್ 12 ರಂದು ಬೀನಾ ವೈದ್ಯ ಅಕ್ಷರ ಪರ್ವ ಸ್ಕಾಲರ್ ಶಿಪ್ ಪ್ರವೇಶಾತಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಪಡೆಯುವ ಸುವರ್ಣಾವಕಾಶ
- ಭಟ್ಕಳದ ಬೈಲೂರಿನಲ್ಲಿ ವಾತ್ಸಲ್ಯ ಮನೆ ಹಸ್ತಾಂತರ: ಸಂಸ್ಥೆಯ ಸಮಾಜಮುಖಿ ಕೆಲಸಕ್ಕೆ ಮೆಚ್ಚುಗೆ
- ಬೇಸಿಗೆ ರಜೆ ನಿಮಿತ್ತ 20 ದಿನಗಳ ಸಂಗೀತ ಸಂಸ್ಕಾರ ಶಿಬಿರ