Uttara Kannada
Trending

ನದಿಯ ದಡದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಭಟ್ಕಳ : ತಾಲೂಕಿನ ಕುಕ್ನೀರ ಸಮೀಪದ ವೆಂಕಟಾಪುರ ನದಿಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿರುವ ಘಟನೆ ಬುಧವಾರ ನಡೆದಿದೆ. ಅಂದಾಜು 60 ವರ್ಷದ ಆಸುಪಾಸಿನ ವ್ಯಕ್ತಿಯಾಗಿದ್ದು, ಈತನ ಶವ ಪತ್ತೆಯಾದ ನದಿಯ ದಡದಲ್ಲಿ ಮೃತ ವ್ಯಕ್ತಿಯ ಬಟ್ಟೆ ಮತ್ತು ಚಪ್ಪಲಿ ಸಿಕ್ಕಿದೆ. ದಡದಲ್ಲಿ ಪತ್ತೆಯಾದ ಶರ್ಟ್ ಹಿಂಬದಿಯಲ್ಲಿ ಬೆಂಗಳೂರು ಮೂಲದ ಟೈಲರ್ ಶಾಪ್ ಮೊಬೈಲ್ ನಂಬರ್ ಮತ್ತು ವಿಳಾಸ ಪತ್ತೆಯಾಗಿದೆ.


ಭಟ್ಕಳ ಗ್ರಾಮೀಣ ಠಾಣೆ ಪಿ.ಎಸ್.ಐ ಓಂಕಾರಪ್ಪ ಹಾಗೂ ಸಿಬ್ಬಂದಿ ಮಲ್ಲಿಕಾರ್ಜುನ ಸ್ಥಳಕ್ಕೆ ತೆರಳಿ ವೆಂಕಟಾಪುರ ನದಿಯಲ್ಲಿ ಅಪರಿಚಿತ ಮೃತ ದೇಹವನ್ನು ಎಸ್.ಡಿ.ಪಿ.ಐ ಸದಸ್ಯರು ಸಹಾಯದಿಂದ ನದಿಯಿಂದ ಶವವನ್ನು ಮೇಲಕ್ಕೆತ್ತಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.


ಬೆಂಗಳೂರಿನ ಅಂಚೆಪಾಳ್ಯ ಮೂಲದ ವ್ಯಕ್ತಿಯೋರ್ವ ಕೆಲದಿನಗಳಿಂದ ನಾಪತ್ತೆಯಾಗಿರುವ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಭಟ್ಕಳದಲ್ಲಿ ಸಿಕ್ಕಿರುವ ಮೃತನ ಬಟ್ಟೆಯ ಮೇಲೆ ಬೆಂಗಳೂರಿನ ವಿಳಾಸ ಇರುವುದರಿಂದ ಈ ಮೃತ ದೇಹದ ಫೋಟೋವನ್ನು ಬೆಂಗಳೂರಿನ ಅಂಚೆ ಪಾಳ್ಯದಲ್ಲಿ ನಾಪತ್ತೆಯಾಗಿರುವ ಸಂಬoಧಿಕರಿಗೆ ಕಳುಹಿಸಿ ಕೊಡಲಾಗಿದೆ.

[sliders_pack id=”1487″]


ಈಗ ಅವರು ಭಟ್ಕಳಕ್ಕೆ ಬಂದು ಮೃತ ದೇಹ ನೋಡಿ ಅಲ್ಲಿ ನಾಪತ್ತೆಯಾಗಿರುವ ವ್ಯಕ್ತಿ ಹೌದು ಇಲ್ಲವೋ ಎಂದು ಕಾದು ನೋಡಬೇಕಾಗಿದೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Related Articles

Back to top button