ಅಂಕೋಲಾ : ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಸಿ.ಪಿ.ಐ ಕೃಷ್ಣಾನಂದ ನಾಯಕ, ಪಿ.ಎಸ್,ಐ ಇ.ಸಿ ಸಂಪತ್ ಮತ್ತು ಸಿಬ್ಬಂದಿಗಳು ಸಾರ್ವಜನಿಕರು ಮತ್ತು ಮೋಟಾರ ವಾಹನ ಚಾಲಕರಿಗೆ ಸಂಚಾರ ಸುರಕ್ಷತಾ ಸೂಚನೆಗಳನ್ನು ಅನುಸರಿಸುವಂತೆ ತಿಳುವಳಿಕೆ ನೀಡುತ್ತಿದ್ದಾರೆ. ಈ ಕುರಿತು ಜಾಗೃತಿ ಪತ್ರ ಪ್ರಕಟಿಸಿ ರಿಕ್ಷಾ ನಿಲ್ದಾಣ, ಟೆಂಪೋ ನಿಲ್ದಾಣ ಮತ್ತಿತರೆಡೆ ವಿತರಿಸುತ್ತಾ ಧ್ವನಿವರ್ದಕದ ಮೂಲಕ ಸಂಚಾರ ನಿಯಮ ಪಾಲನೆಯ ಮಹತ್ವವನ್ನು ಒತ್ತಿ ಹೇಳುತ್ತಿದ್ದಾರೆ. ಠಾಣೆಯ ಸಿಬ್ಬಂದಿಗಳು ಪಾದಚಾರಿಗಳು ಸೇರಿದಂತೆ ಇತರೇ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ.
ಕೋವಿಡ್ ಕೇಸ್ :ತಾಲೂಕಿನಲ್ಲಿ ರವಿವಾರ 1 ಹೊಸ ಕೊವಿಡ್ ಕೇಸ್‍ಗಳು ಪತ್ತೆಯಾಗಿದೆ. ಹನುಮಟ್ಟಾದ 79ರ ವೃದ್ಧನಲ್ಲಿ ಸೋಂಕು ಲಕ್ಷಣಗಳು ಧೃಡಪಟ್ಟಿದೆ. ಹೋಂ ಐಸೋಲೇಶನ್‍ನಲ್ಲಿರುವ 18 ಮಂದಿ ಸಹಿತ ಒಟ್ಟೂ 19 ಪ್ರಕರಣಗಳು ಸಕ್ರಿಯವಾಗಿದೆ. 12 ರ್ಯಾಟ್ ಮತ್ತು 3 ಆರ್‍ಟಿಪಿಸಿಆರ್ ಸೇರಿದಂತೆ ಒಟ್ಟೂ 15 ಸ್ಬ್ಯಾಬ್ ಟೆಸ್ಟ್ ನಡೆಸಲಾಗಿದೆ. ರ್ಯಾಟ್ ಪರೀಕ್ಷೆಯ ವೇಳೆ ಮತ್ತೆ 6 ಹೊಸ ಕೊವಿಡ್ ಕೇಸ್‍ಗಳು ಪತ್ತೆಯಾಗಿದೆ ಎನ್ನಲಾಗಿದ್ದು, ನಾಳೆಯ ಹೆಲ್ತಬುಲೆಟಿನ್‍ನಲ್ಲಿ ಧೃಡಗೊಳ್ಳಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.