
ಕಾರವಾರ: ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಬೆನ್ನಲ್ಲೆ, ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಇಂದು 14 ಕೇಸ್ ದಾಖಲಾಗಿದೆ. ಕಾರವಾರ 5, ಜೋಯ್ಡಾ 3 ಸಿದ್ದಾಪುರ ಒಂದು ಸೇರಿ ಇಂದು ಜಿಲ್ಲೆಯಾದ್ಯಂತ 14 ಕರೊನಾ ಕೇಸ್ ದಾಖಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13,938ಕ್ಕೆ ಏರಿಕೆಯಾಗಿದೆ.
ಶಿರಸಿಯಲ್ಲಿಂದು ಒಂದು ಕರೊನಾ ಕೇಸ್
ಶಿರಸಿ: ತಾಲೂಕಿನಲ್ಲಿ ಸೋಮವಾರ ಒಂದು ಕರೊನ ಕೇಸ್ ಪತ್ತೆಯಾಗಿದ್ದು, ಇಬ್ಬರು ಗುಣಮುಖರಾಗಿದ್ದಾರೆ.
ಇಂದು ವಿದ್ಯಾನಗರದ ಓರ್ವನಲ್ಲಿ ಕೊರೊನಾ ದೃಢಪಟ್ಟಿದೆ. ಈವರೆಗೆ 1587 ಮಂದಿಯಲ್ಲಿ ಕೊರೊನಾ ದೃಢವಾದಂತಾಗಿದೆ.
ಹೊನ್ನಾವರದಲ್ಲಿ ಒಂದು: ಕುಮಟಾದಲ್ಲಿ ಶೂನ್ಯ
ಹೊನ್ನಾವರ: ತಾಲೂಕಿನಲ್ಲಿ ಇಂದು 1 ಕರೊನಾ ಸೋಂಕಿತ ಪ್ರಕರಣ ಪತ್ತೆಯಾಗಿದೆ. ತಾಲೂಕಿನ ಪಟ್ಟಣ ಪ್ರದೇಶವಾದ ದುರ್ಗಾಕೇರಿಯ 24 ವರ್ಷದ ಯುವತಿಯಲ್ಲಿ ಸೋಂಕು ದೃಢಪಟ್ಟಿದೆ. ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಓರ್ವರು ಇಂದು ಡಿಸ್ಚಾರ್ಜ್ ಆಗಿದ್ದಾರೆ. ವಿವಿಧ ಆಸ್ಪತ್ರೆಯಲ್ಲಿ 2 ಜನರು ಹಾಗೂ ಮನೆಯಲ್ಲಿ 3 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಕುಮಟಾ ತಾಲೂಕಾ ವ್ಯಾಪ್ತಿಯಲ್ಲಿ ಯಾವುದೇ ಕರೊನಾ ಸೋಂಕಿತ ಪ್ರಕರಣ ಪಾತ್ತೆಯಾಗಿಲ್ಲವಾಗಿದೆ.
ವಿಸ್ಮಯ ನ್ಯೂಸ್ ಕಾರವಾರ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಜಿಲ್ಲಾ ಮಟ್ಟದ ಪ್ರಥಮ ವರ್ಷದ ಹಾರ್ಡ್ ಬಾಲ್ ಕ್ರಿಕೆಟ್ ಟೂರ್ನಿ: ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘ ಅಂಕೋಲಾದಿoದ ಆಯೋಜನೆ
- ನೀಲಗೋಡ ಜಾತ್ರೆ ಯಶಸ್ವಿಯಾಗಿ ಸಂಪನ್ನ: ಯಕ್ಷಿ ಚೌಡೇಶ್ವರಿ ದೇವಿಯ ದರ್ಶನ ಪಡೆದ ಅಪಾರ ಭಕ್ತರು
- Job: ಪ್ರತಿಷ್ಠಿತ ಗೃಹೋಪಯೋಗಿ ಮಳಿಗೆಯಲ್ಲಿ ಉದ್ಯೋಗಾವಕಾಶ: ಇಂದೇ ಸಂಪರ್ಕಿಸಿ
- ಇಸ್ರೆಲ್ ನಲ್ಲಿ ಕೆಲಸ ಮಾಡುವ ಸುವರ್ಣಾವಕಾಶ: 1 ಲಕ್ಷದ 70 ಸಾವಿರ ಸಂಬಳ
- ಏಪ್ರಿಲ್ 12 ರಂದು ಬೀನಾ ವೈದ್ಯ ಅಕ್ಷರ ಪರ್ವ ಸ್ಕಾಲರ್ ಶಿಪ್ ಪ್ರವೇಶಾತಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಪಡೆಯುವ ಸುವರ್ಣಾವಕಾಶ