
ಮನೆಗೆ ಬೆಂಕಿ: ಎಲ್ಲಾ ವಸ್ತುಗಳು ಬೆಂಕಿಗೆ ಆಹುತಿ
ಬೆಂಕಿಗೆ ಮೇಲ್ಚಾವಣಿ ಕೂಡಾ ಕುಸಿತ
ಮನೆಯೊಡತಿಯ ಕಣ್ಣೀರು: ಮನೆಯರು ಕಂಗಾಲು
ಭಟ್ಕಳ: ಇಲ್ಲಿನ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ವೆಂಕ್ಟಾಪುರ ಕಂಡೆಕೊಡ್ಲ ದಲ್ಲಿ ಮನೆಯೊಂದಕ್ಕೆ ಬೆಂಕಿ ತಗುಲಿ ಮನೆಯಲ್ಲಿದ್ದ ವಸ್ತುಗಳೆಲ್ಲಾ ಸುಟ್ಟು ಲಕ್ಷಾಂತರ ರೂ.ನಷ್ಟ ಸಂಭವಿಸಿದ ಘಟನ ನಡೆದಿದೆ.. ಬೆಂಕಿಯ ತೀವ್ರತೆಗೆ ಮನೆಯಲ್ಲಿದ್ದ ಪಾತ್ರೆ, ದಿನಸಿ ಸಾಮಾನುಗಳು, ಇಲೆಕ್ಟ್ರಾನಿಕ್ ವಸ್ತುಗಳ ಜೊತೆಯಲ್ಲಿ ಮನೆಯಲ್ಲಿದ್ದ ಬಟ್ಟೆ ಬರೆಗಳು,ಚಿನ್ನದ ಸರ್,ಕಿವಿ ಓಲೆ,ನಗದು 25 ಸಾವಿರ ಹಣ ಸೇರಿದಂತೆ ದಿನಬಳಕೆ ವಸ್ತುಗಳೂ ಸುಟ್ಟು ಕರಕಲಾಗಿದೆ. ಅಲ್ಲದೆ ಮನೆಯ ಮೇಲ್ಛಾವಣಿ ಕೂಡಾ ಸುಟ್ಟು ಕುಸಿದಿದ್ದು ಮನೆಯವರು ತಮ್ಮ ಸೂರು ಕಳೆದುಕೊಂಡಿದ್ದಾರೆ.
ಪದ್ಮಾವತಿ ಬಡಿಯಪ್ಪ ನಾಯ್ಕ ಎನ್ನುವವರಿಗೆ ಸೇರಿದ ಮನೆಯಾಗಿದ್ದು ಬೆಂಕಿಯ ಕೆನ್ನಾಲಿಗೆಗೆ ಮನೆ ಆಹುತಿಯಾಗಿ ಲಕ್ಷಾಂತರ ರೂ.ನಷ್ಟವಾಗಿದೆ. ಒಟ್ಟೂ 2 ಲಕ್ಷದ 75 ಸಾವಿರ ರೂಪಾಯಿ ಹಾನಿ ಯಾಗಿದ್ದು ವಿದ್ಯುತ್ ಶಾರ್ಟ್ ಸಕ್ರ‍್ಯೂಟ್ ಯಿಂದ ಮನೆಗೆ ಬೆಂಕಿ ತಾಗಿರಬಹುದು ಎಂದು ಶಂಕಿಸಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸಿದ್ದು, ಸ್ಥಳಕ್ಕೆ ಜಾಲಿ ಗ್ರಾಮ ಲೆಕ್ಕಾಧಿಕಾರಿ ಗಿರೀಶ ರಣದೇವು, ಗ್ರಾಮ ಸಹಾಯಕರಾದ ಮಾಸ್ತಯ್ಯ ನಾಯ್ಕ,ವಾಸು ಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ವಿದ್ಯಾರ್ಥಿಗಳಿಗೆ ಭಗವದ್ಗೀತೆ ನೀಡಿ ಭವಿಷ್ಯಕ್ಕೆ ಶುಭ ಕೋರಿದ ಪ್ರಮುಖ ಸೌಹಾರ್ದ ಸಹಕಾರಿ
- ಉತ್ತಮ ಭವಿಷ್ಯ ರೂಪಿಸಿಕೊಳ್ಳಲು, ಈಗಿನಿಂದಲೇ ಸಮಯಕ್ಕೆ ಮಹತ್ವ ನೀಡಿ : ಡಾ. ಗಣೇಶ ನಾಗ್ವೇಕರ ಕಲಾ ಮತ್ತು ವಾಣಿಜ್ಯ ವಿದ್ಯಾಲಯದಲ್ಲಿ ನಡೆದ ವಾರ್ಷಿಕ ಸಮ್ಮೇಳನ
- ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಆಧಾರದ ಮೇಲೆ ಕೇಣಿಯಲ್ಲಿ ಸರ್ವಋತು ಆಳ ಸಮುದ್ರ ಗ್ರೀನ್ಫೀಲ್ಡ್ ಬಂದರಿನ ಅಭಿವೃದ್ಧಿ
- ವಿದ್ಯಾರ್ಥಿ ಸಂಸತ್ ಉದ್ಘಾಟನೆ ಹಾಗೂ ಬರಹ ಪಠ್ಯ ವಿತರಣೆ
- ಕಲಿಕಾ ಸಾಮಗ್ರಿ ವಿತರಣೆ ನೆಪದಲ್ಲಿ ನೆರವು ನೀಡುವುದು ಬೇಡವೇ ಬೇಡ : JSW ಕಂಪನಿ ವಿರುದ್ಧ ಮತ್ತೆ ಸ್ಥಳೀಯ ಮೀನುಗಾರರ ಆಕ್ರೋಶ