ಹೊನ್ನಾವರ: ತಾಲೂಕಿನಲ್ಲಿ ಇಂದು 2 ಕರೊನಾ ಪಾಸಿಟಿವ್ ಕಂಡುಬಂದಿದೆ. ಪಟ್ಟಣದ ಇಬ್ಬರು ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ. ಹೊನ್ನಾವರ ಪಟ್ಟಣದ 64 ವರ್ಷದ ಮಹಿಳೆ ಮತ್ತು 24 ವರ್ಷದ ಯುವತಿ ಸೇರಿದಂತೆ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಕುಮಟಾದಲ್ಲಿ ಎರಡು ಕೇಸ್:
ಕುಮಟಾ: ತಾಲೂಕಿನಲ್ಲಿ ಇಂದು ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಎರಡೂ ಕೇಸ್ ವಿವೇಕ್ ನಗರದಲ್ಲಿಯೇ ಕಾಣಿಸಿಕೊಂಡಿದೆ. ವಿವೇಕ್ ನಗರದ 58 ವರ್ಷದ ಮಹಿಳೆ ಮತ್ತು 56 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಅಂಕೋಲಾದಲ್ಲಿಂದು ಒಂದು ಕೋವಿಡ್ ಕೇಸ್ : ಹೋಂ ಐಸೋಲೇಶನ್ 13
ಅಂಕೋಲಾ : ತಾಲೂಕಿನಲ್ಲಿ ಮಂಗಳವಾರ ಒಂದು ಹೊಸ ಕೋವಿಡ್ ಕೇಸ್‍ಗಳು ದಾಖಲಾಗಿದೆ. ಕಸಬ ಕೇಣಿ ವ್ಯಾಪ್ತಿಯ 69ರ ವೃದ್ದನಲ್ಲಿ ಸೋಂಕು ಲಕ್ಷಣಗಳು ಕಾಣಿಸಿಕೊಂಡಿದ್ದು, ಇವರ ಗಂಟಲು ದ್ರವವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಲಾಗಿತ್ತು ಎನ್ನಲಾಗಿದೆ. 14 ರ್ಯಾಟ್ ಮತ್ತು 203 ಆರ್‍ಟಿಪಿಸಿಆರ್ ಸೇರಿ ಒಟ್ಟೂ 217 ಸ್ವ್ಯಾಬ್ ಟೆಸ್ಟ್‍ಗೆ ಒಳಪಡಿಸಲಾಗಿದೆ. ಗುಣಮುಖರಾದ 6 ಜನರನ್ನು ಬಿಡುಗಡೆಗೊಳಿಸಲಾಗಿದೆ. ಹೋಂ ಐಸೋಲೇಶನನಲ್ಲಿರುವ 13 ಮಂದಿ ಸಹಿತ ಒಟ್ಟೂ 17 ಪ್ರಕರಣಗಳು ಸಕ್ರಿಯವಾಗಿದೆ.
ಇದೇ ವೇಳೆ ಇಂದು ಜಿಲ್ಲೆಯಲ್ಲಿ ಇಂದು 21 ಕರೊನಾ ಕೇಸ್ ದಾಖಲಾಗಿದೆ.
ವಿಸ್ಮಯ ನ್ಯೂಸ್ ಯೋಗೇಶ್ ಮಡಿವಾಳ ಕುಮಟಾ, ಶ್ರೀಧರ್ ನಾಯ್ಕ ಹೊನ್ನಾವರ, ವಿಲಾಸ ನಾಯಕ ಅಂಕೋಲಾ
- ಹೆದ್ದಾರಿ ತಿರುವಿನಲ್ಲಿ ಪಲ್ಟಿಯಾದ ನ್ಯಾನೋ ಕಾರು : ಸ್ಥಳದಲ್ಲೇ ಚಾಲಕ ಸಾವು
- ಯಶಸ್ವಿಯಾಗಿ ನಡೆದ ಯುನಿಫೆಸ್ಟ್ : 35 ಕಾಲೇಜುಗಳ 500 ವಿದ್ಯಾರ್ಥಿಗಳು ಭಾಗಿ
- ರಸ್ತೆ ಮಧ್ಯೆ ನಿಂತುಕೊಂಡು ಖಾರದ-ಪುಡಿ ಎರಚಿ ದರೋಡೆ ಮಾಡಿದ್ದ ಕಳ್ಳರು ಕೆಲವೇ ಗಂಟೆಗಳಲ್ಲಿ ಅರೆಸ್ಟ್!
- ಕುಮಟಾ ತಾಲ್ಲೂಕಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆ
- ಅಂಕೋಲಾ ಪುರಸಭೆಯ ವಾರ್ಡ್ ನಂ 14ಕ್ಕೆ ನವೆಂಬರ್ 23 ರಂದು ಉಪಚುನಾವಣೆ