Join Our

WhatsApp Group
Info
Trending

ಲಾಯನ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ಪುನರಾರಂಭಗೊಂಡ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರಗಳು

ಕುಮಟಾ : ತಾಲೂಕಿನ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಅಂಕೋಲಾ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ಡಿಸೆಂಬರ್ 17ರಂದು ಜರುಗಿದ ಉಚಿತ ಕಣ್ಣು ಪೊರೆ ತಪಾಸಣಾ ಶಿಬಿರದಲ್ಲಿ ಆಯ್ಕೆಗೊಂಡ 18 ಬಡ ವೃದ್ಧರಿಗೆ ಕುಮಟಾದ ಬಗ್ಗೋಣ ರಸ್ತೆಯಲ್ಲಿನ ವಿದ್ಯಾಗಿರಿಯಲ್ಲಿರುವ ಲಾಯನ್ಸ್ ರೇವಣಕರ ಚೆರಿಟೆಬಲ್ ಕಣ್ಣಿನ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ನೇತ್ರತಜ್ಙ ಡಾ. ಮಲ್ಲಿಕಾರ್ಜುನ್ ಸಿ.ಎಸ್.ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಕಣ್ಣು ಪೊರೆ ಶಸ್ತ್ರಚಿಕಿತ್ಸೆ ನಡೆಸಲಾಯಿತು.

ಲಾಯನ್ ಪಿಡಿಜಿ ಗಣಪತಿ ನಾಯಕ ಗೋಕರ್ಣ ಇವರ ಮಾರ್ಗದರ್ಶನದಲ್ಲಿ ಜರುಗಿದ ಈ ಶಿಬಿರದ ಫಲಾನುಭವಿಗಳನ್ನು ಶನಿವಾರ ಆಸ್ಪತ್ರೆಯಿಂದ ಬೀಳ್ಕೊಡುವ ಸಂದರ್ಭದಲ್ಲಿ ಆಸ್ಪತ್ರೆಯ ಚೇರಮನ್ ಡಿ.ಡಿ.ಶೇಟ್,ಕುಮಟಾ ಲಾಯನ್ಸ್ ಕ್ಲಬ್ ಅಧ್ಯಕ್ಷೆ ವಿನಯಾ ಎಸ್.ಹೆಗಡೆ,
ಕಾರ್ಯದರ್ಶಿ ಪ್ರೊ.ಎಸ್.ಎಸ್.ಹೆಗಡೆ , ಆಡಳಿತಾಧಿಕಾರಿ ಜಯದೇವ ಬಳಗಂಡಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಅಂಧತ್ವ ನಿಯಂತ್ರಣ ವಿಭಾಗ ಕಾರವಾರ ಇವರ ಆಶ್ರಯದಲ್ಲಿ ಲಾಯನ್ಸ್ ಕ್ಲಬ್ ಪ್ರಾಯೋಜಿತ ಲಾಯನ್ಸ್ ಹ್ಯುಮೆನಿಟೇರಿಯನ್ ಸರ್ವಿಸ್ ಟ್ರಸ್ಟ್ ಕುಮಟಾದ ಲಾಯನ್ಸ್ ರೇವಣಕರ ಚೆರಿಟೆಬಲ್ ಕಣ್ಣಿನ ಆಸ್ಪತ್ರೆಯು ಕಳೆದ 14 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ಇಂತಹ ಉಚಿತ ಶಸ್ತ್ರಚಿಕಿತ್ಸಾ ಶಿಬಿರಗಳು ಕೋವಿಡ್ 19 ಪ್ರಯುಕ್ತ ಕೆಲ ಅವಧಿಯಿಂದ ಸ್ಥಗಿತವಾಗಿತ್ತು.
ಈಗ ಸರಕಾರೀ ಆದೇಶದಂತೆ ಎಲ್ಲ ಮುಂಜಾಗೃತಾ ಕ್ರಮಗಳ ಪಾಲನೆಯೊಂದಿಗೆ ಉಚಿತ ಶಿಬಿರಗಳು ಪುನರಾರಂಭಗೊಂಡಿರುವುದು ಬಡಜನರಿಗೆ ವರದಾನವಾಗಿದೆ.

ಪ್ರತಿ ತಿಂಗಳಿನ ಮೊದಲ ಗುರುವಾರ ಕುಮಟಾ ಲಾಯನ್ಸ್ ಭವನದಲ್ಲಿ ,ಮೂರನೇಯ ಗುರುವಾರ ಗೋಕರ್ಣ ಹಾಗೂ ಅಂಕೋಲಾಗಳಲ್ಲಿ ಮತ್ತು ಪ್ರತಿ ತಿಂಗಳಿನ ನಾಲ್ಕನೇಯ ಗುರುವಾರದಂದು ಹೊನ್ನಾವರ ಹಾಗೂ ಭಟ್ಕಳ ತಾಲೂಕಾ ಆಸ್ಪತ್ರೆಗಳಲ್ಲಿ ಶಿಬಿರಗಳು ಎಂದಿನಂತೆ ಜರುಗಲಿದ್ದು ಆಯ್ಕೆಗೊಂಡ ಫಲಾನುಭವಿಗಳಿಗೆ ಮರುದಿನ ನಮ್ಮ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಆ ಮರುದಿನ ಈ ಎಲ್ಲ ಫಲಾನುಭವಿಗಳನ್ನು ಕರೆತಂದ ಊರಿಗೆ ಬಿಟ್ಟು ಬರಲಾಗುತ್ತದೆ.

ತಪಾಸಣೆ,ಶಸ್ತ್ರಚಿಕಿತ್ಸೆ, ಊಟೋಪಚಾರ,ವಸತಿ,ಸಾಗಾಟ ವ್ಯವಸ್ಥೆ ಈ ಎಲ್ಲವೂ ಸಂಪೂರ್ಣ ಉಚಿತವಾಗಿರುತ್ತಿದ್ದು ಅವಶ್ಯವುಳ್ಳವರು ಈ ಯೋಜನೆಯ ಸದುಪಯೋಗಪಡೆಯುವಂತೆ ಲಾಯನ್ಸ್ ಹ್ಯುಮನಿಟೇರಿಯನ್ ಸರ್ವೀಸ್ ಟ್ರಸ್ಟ್ ನ ಚೇರಮನ್ ಡಿ.ಡಿ.ಶೇಟ್ ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್ ಕುಮಟಾ

Check Also
Close
Back to top button