Info
Trending

ಉತ್ತರಕನ್ನಡದ ಇಂದಿನ ಕರೊನಾ ವಿವರ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 14 ಕರೊನಾ ಕೇಸ್ ದಾಖಲಾಗಿದೆ. ಯಲ್ಲಾಪುರ 1, ಸಿದ್ದಾಪುರ 2, ಅಂಕೋಲಾ 1, ಹೊನ್ನಾವರದಲ್ಲಿ ಒಂದು ಕೇಸ್ ದೃಢಪಟ್ಟಿದೆ.

ಕುಮಟಾ: ತಾಲೂಕಿನಲ್ಲಿ ಇಂದು 8 ಕರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ. ತಾಲೂಕಿನ ಮೂರೂರಿನಲ್ಲಿ 3, ಹೆರವಟ್ಟಾ 4, ಹೊಸ ಹೆರವಟ್ಟಾದಲ್ಲಿ 1 ಪ್ರಕರಣ ದೃಢಪಟ್ಟಿದೆ. ಮೂರೂರಿನ 65 ವರ್ಷದ ವೃದ್ಧೆ, 35 ವರ್ಷದ ಮಹಿಳೆ, 11 ಬಾಲಕ, ಹೆರವಟ್ಟಾದ 36 ವರ್ಷದ ಪುರುಷ, 33 ವರ್ಷದ ಮಹಿಳೆ, 4 ವರ್ಷದ ಮಗು, 62 ವರ್ಷದ ವೃದ್ದನಲ್ಲಿ ಸೋಂಕು ಪತ್ತೆಯಾಗಿದೆ. ಹೊಸ ಹೆರವಟ್ಟಾದ 63 ವರ್ಷದ ವೃದ್ಧೆಯಲ್ಲಿ ಸೊಂಕು ದೃಢಪಟ್ಟಿದೆ. ಇಂದು 8 ಹೊಸ ಪ್ರಕರಣ ದಾಖಲಾದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1993 ಕ್ಕೆ ಏರಿಕೆಯಾಗಿದೆ.

ನೈಟ್​ ಕರ್ಫ್ಯೂ ಇಂದಿನಿಂದ ಅಲ್ಲ: ನಾಳೆಯಿಂದ

ಹೊಸ ರೂಪಾಂತರದ ಕೊರೋನಾ ವೈರಸ್​ ಆತಂಕದ ಹಿನ್ನಲೆ ರಾಜ್ಯದಲ್ಲಿ ಇಂದಿನಿಂದ ನೈಟ್​ ಕರ್ಫ್ಯೂ ಜಾರಿ ಮಾಡಲಾಗಿತ್ತು. ರಾತ್ರಿ 10 ರಿಂದ ಬೆಳಿಗ್ಗೆ 6ರವರೆಗೆ ಕರ್ಫ್ಯೂ ಜಾರಿ ಮಾಡಿ ಸರ್ಕಾರ ಇಂದು ಮಧ್ಯಾಹ್ನ ಆದೇಶಿಸಿತ್ತು. ಆದರೆ, ಈಗ ಸರ್ಕಾರ ಈ ನಿರ್ಧಾರ ಬದಲಾವಣೆ ಮಾಡಿದೆ.

ಇಂದಿನಿಂದ ಬದಲು ನಾಳೆಯಿಂದ ಅಂದರೆ ಡಿ. 24ರಿಂದ ಜನವರಿ 1ರವರೆಗೆ ನೈಟ್​ ಕರ್ಫ್ಯೂ ಜಾರಿ ಮಾಡಲಾಗಿದೆ. ರಾತ್ರಿ 10ರ ಬದಲು ರಾತ್ರಿ 11 ರಿಂದ ಬೆಳಿಗ್ಗೆ 5ರವರೆಗೆ ಈ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಸಿಎಂ ಬಿಎಸ್​ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ಪ್ರಮುಖ ಸುದ್ದಿಗಳು: ಇದನ್ನೂ ಓದಿ

Back to top button