Important
Trending

ಕಳ್ಳತನ ಕೃತ್ಯದಲ್ಲಿ ಮತ್ತೆ ಜೈಲು ಸೇರುವಂತಾದ ಕೊಲೆ ಆರೋಪಿ !

ಪ್ರಮುಖ ದೇವಸ್ಥಾನಗಳೇ ಈತನ ಟಾರ್ಗೆಟ್
ಬಾಡಿ ವಾರೆಂಟ್ ಮೂಲಕ ಕರೆ ತಂದ ಪೊಲೀಸರು

ಅಂಕೋಲಾ : ತಾಲೂಕು ಮೂಲದ ಯುವಕನೊರ್ವ ಕಳ್ಳತನ ಎಸಗುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದು, ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ತಾನು ಎಸಗಿದ ಹಲವು ಅಪರಾಧ ಕೃತ್ಯ ಗಳನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದ್ದು, ಈ ಹಿಂದೆ ನಡೆದ ಕಳ್ಳತನ ಪ್ರಕರಣಗಳು ಬೆಳಕಿಗೆ ಬರಲಾರಂಭಿಸಿವೆ.

ಬಾಡಿ ವಾರೆಂಟ್ : ಕಳೆದ ವಾರ ಕುಮಟಾ ತಾಲೂಕಿನ ಮಿರ್ಜಾನದಲ್ಲಿ ಕಳ್ಳತನ ಮಾಡಲು ಹೋಗಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದ, ಮೂಲತಃ ಅಂಕೋಲಾ ತಾಲೂಕಿನ ಬೆಳಂಬಾರ ಮಧ್ಯಕಾರ್ವಿವಾಡದ ವಿವೇಕಾನಂದ ಡಿ. ಖಾರ್ವಿ (24)ಯನ್ನು ಕುಮಟಾ ಪೊಲೀಸರ ವಶಕ್ಕೆ ನೀಡಲಾಗಿತ್ತು. ವಿಚಾರಣೆ ವೇಳೆ ಆತನು ತಾನು ಎಸಗಿದ ಕಳ್ಳತನ ಕೃತ್ಯದ ಕುರಿತು ಬಾಯ್ಬಿಟ್ಟಿದ್ದ ಎಂದು ಹೇಳಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದ ಆತನನ್ನು ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆದಿರುವ ಅಂಕೋಲಾ ಪೊಲೀಸರು ಹೆಚ್ಚಿನ ತನಿಖೆ ದೃಷ್ಟಿಯಿಂದ ವಿಚಾರಣೆ ಮಾಡಿ ಪುನಃ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನ್ಯಾಯಾಲವು ಆತನಿಗೆ 15 ದಿನಗಳ ಕಾಲ ನ್ಯಾಯಾಂಬಂಧನ ವಿಧಿಸಿದೆ.

ದೇವಸ್ಥಾನಗಳೇ ಆತನ ಟಾರ್ಗೆಟ್ :

ಸದ್ಯ ಕುಮಟಾದಲ್ಲಿ ನೆಲಸಿದ್ದ ಎನ್ನಲಾಗಿರುವ ಬಂಧಿತ ಆರೋಪಿ ಯು ಮಿರ್ಜಾನದ ಕೆಂಡ ಮಾಸ್ತಿ ದೇವಸ್ಥಾನ ಕಳ್ಳತನ ಮಾಡುವವಾಗ ಸಿಕ್ಕಿಬಿದ್ದಿದ್ದಲ್ಲದೇ, ಈ ಹಿಂದೆ ಅಂಕೋಲಾ ತಾಲೂಕಿನ ಕೋಗ್ರೆ, ಹೊನ್ನೆಬೈಲ್, ವಂದಿಗೆ, ಹಾರವಾಡ ವ್ಯಾಪ್ತಿಯ ಪ್ರಸಿದ್ಧ ದೇವಸ್ಥಾನಗಳ ಕಳ್ಳತನ ಎಸಗಿರುವ ಕುರಿತು ವಿಚಾರಣೆ ವೇಳೆ ಒಪ್ಪಿಕೊಂಡಿದ್ದ ಎನ್ನಲಾಗಿದೆ. ಕಳ್ಳತನ ಮಾಡಿದ ಕೆಲ ಸ್ವತ್ತು ಗಳನ್ನು ಆತನಿಂದ ವಶಪಡಿಸಿಕೊಂಡ ಪೊಲೀಸರು ಸ್ಥಳ ಮಹಜರು ನಡೆಸಿದರು.

ಕೊಲೆ ಆರೋಪ ? :

ಬಂಧಿತ ಆರೋಪಿಯು ಕಳೆದ 2-3 ವರ್ಷಗಳ ಹಿಂದೆ ತಾಲೂಕಿನ ಸಮುದ್ರ ಕಿನಾರೆ ಅಂಚಿನ ಗ್ರಾಮದ ಯುವಕನೊರ್ವನು ಕೊಲೆ ಪ್ರಕರಣದಲ್ಲಿಯೂ ಆರೋಪಿತನಾಗಿ ಬಂಧನಕ್ಕೆ ಒಳಪಟ್ಟು, ತದನಂತರ ಜಾಮೀನು ಪಡೆದು ಹೊರ ಬಂದಿದ್ದು, ಈಗ ಕಳ್ಳತನ ಪ್ರಕರಣದ ಆರೋಪಿ ಯಾಗಿ ಜೈಲಿಗೆ ಸೇರುವಂತಾಯಿತು ಎನ್ನಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button