ಅಂಕೋಲಾ : ಪಟ್ಟಣದ ಹುಲಿದೇವರವಾಡದ ಸಾಲು ಮರದ ತಿಮ್ಮಕ್ಕ ಉದ್ಯಾನವನದಲ್ಲಿ ಭಾನುವಾರ ನಡೆದಮ ಸರಳ ಸಮಾರಂಭದಲ್ಲಿ,ಗೋಪಾಲಕೃಷ್ಣ ನಾಯಕ (ಕಾಂತ ಮಾಸ್ತರ) ಅವರ ‘ಹಾಯಿ ದೋಣಿ’ ಕವನ ಸಂಕಲನವನ್ನು ಕರಾವಳಿ ಮುಂಜಾವು ದಿನ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಗಂಗಾಧರ ಹಿರೇಗುತ್ತಿ ಬಿಡುಗಡೆಗೊಳಿಸಿದರು.
ಜಿ.ಸಿ.ಕಾಲೇಜಿನ ರಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್.ವಿ.ವಸ್ತ್ರದ, ಪುಸ್ತಕ ಪರಿಚಯಿಸಿದರು. ಶಿಕ್ಷಕ ರಾಮನಾಥ ನಾಯ್ಕ ‘ಹಾಯಿ ದೋಣಿ’ ಕವಿತೆ ವಾಚಿಸಿದರು. ಡಾ.ಶಿವಾನಂದ ನಾಯಕ ಸ್ವಾಗತಿಸಿದರು, ಲೇಖಕ ಗೋಪಾಲಕೃಷ್ಣ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚಕಡ ಅಧ್ಯಕ್ಷತೆ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಮೋಹನ ಹಬ್ಬು, ಡಾ.ಆರ್.ಜಿ. ಗುಂದಿ, ಬೀರಣ್ಣ ನಾಯಕ ಮೊಗಟಾ, ಆರ್.ಟಿ.ಮಿರಾಶಿ, ವಲಯ ಅರಣ್ಯಾಧಿಕಾರಿ ವಿ.ಪಿ.ನಾಯ್ಕ ಉಪಸ್ಥಿತರಿದ್ದರು. ಸುಭಾಶ ಕಾರೇಬೈಲ್ ನಿರೂಪಿಸಿದರು. ಜಗದೀಶ ಜಿ.ನಾಯಕ ಹೊಸ್ಕೇರಿ ವಂದಿಸಿದರು.
ನಿವೃತ್ತಿಗೂ ಮೊದಲು ತಮ್ಮ ಸೇವಾವಧಿಯಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿದ್ದ ಕಾಂತ ಮಾಸ್ತರರು, ತಮ್ಮದೇ ಆದ ಗೌರವ ಪ್ರಕಾಶನ ಆರಂಭಿಸಿ ಈಗಾಗಲೇ ಕಥೆ-ಕವನ ಸಂಕಲನ ಬಿಡುಗಡೆಗೊಳಿಸಿದ್ದಾರೆ. ನಿವೃತ್ತಿ ನಂತರ ಹಾಯಿ ದೋಣಿ ಬಿಡುಗಡೆಗೊಳಿಸಿದ್ದಲ್ಲದೇ ಸಾಲು ಮರದ ತಿಮ್ಮಕ್ಕ ಉದ್ಯಾನವನದ ತೆರೆದ ವೇದಿಕೆಯಲ್ಲಿ ಪ್ರಥಮ ಖಾಸಗಿ ಕಾರ್ಯಕ್ರಮ ನಡೆಸಿದ ಹೆಗ್ಗಳಿಕೆ ಗಳಿಸಿ ದ್ದಾರೆ. ಕವನ ಸಂಕಲನ ಬಿಡುಗಡೆಗೂ ಮೊದಲು ಉದ್ಯಾನವನದಲ್ಲಿ ಗಿಡ ನೆಡುವ ಮೂಲಕ ಆರಂಭಿಕ ಚಾಲನೆ ನೀಡಲಾಗಿತ್ತು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ