Important
Trending

ಮೀನುಗಾರು ಮತ್ತು ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ: ಜಿಲ್ಲಾಧಿಕಾರಿಗಳ ಮನವೊಲಿಕೆ ಪ್ರಯತ್ನ ವಿಫಲ

ಹೊನ್ನಾವರ: ತಾಲ್ಲೂಕಿನ ಕಾಸರಕೋಡ ಟೊಂಕಾ ಮೀನುಗಾರು ಮತ್ತು ಗ್ರಾಮಸ್ಥರು ಕೆಲವು ದಿನದ ಹಿಂದೆ ಮುಂಬರುವ ಚುನಾವಣೆಗೆ ಮತದಾನ ಬಹಿಷ್ಕಾರಿಸುವುದಾಗಿ ಒಕ್ಕೊರಲಿನಿಂದ ನಿರ್ಧರಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಕಾಸರಕೋಡ ಟೋಂಕಾ ಗ್ರಾಮಕ್ಕೆ ಭೇಟಿ ನೀಡಿ ಮತದಾನ ಬಹಿಷ್ಕಾರ ನಿರ್ಧಾರ ಕೈಬಿಡುವಂತೆ ಮೀನುಗಾರರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಯಾವುದ ಪ್ರಯೋಜನವಾಗಿಲ್ಲ.

ಕಾಸರಕೋಡ ಟೊಂಕಾ ಮಲ್ಲುಕುರ್ವಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮಸ್ಥರು ಮತ್ತು ಮೀನುಗಾರರ ಜೊತೆ ಜಿಲ್ಲಾಧಿಕಾರಿಯವರು ಸಭೆ ನಡೆಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿಯವರಿಗೆ ಮೀನುಗಾರರು ಬಂದರು ಕಾಮಗಾರಿ ಕೈ ಬಿಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಈಗಾಗಲೇ ಈ ಸಮಸ್ಯೆ ಬಗೆಹರಿಯಬೇಕಿತ್ತು. ನೀವು ನಿಮ್ಮ ಹೋರಾಟ ಮಾಡಿರುವಿರಿ. ನಾವು ನಿಮ್ಮ ಮೇಲೆ ದಬ್ಬಾಳಿಕೆ ಮಾಡುವುದಾಗಲಿ, ಒತ್ತಡ ಹೇರುವುದಾಗಲಿ ಮಾಡಿಲ್ಲ. ಆದರೆ ನಮಗೆ ಸರ್ಕಾರದ ಆದೇಶ ಪಾಲನೆ ಮಾಡುವುದು ನಮ್ಮ ಕರ್ತವ್ಯವಾಗಿರುತ್ತದೆ. ನಮ್ಮ ವ್ಯಾಪ್ತಿಯಲ್ಲಿ ಆಗಬಹುದಾದ ಸಹಾಯವನ್ನು ಸರ್ಕಾರದ ಮಟ್ಟದಲ್ಲಿ ಗಮನಕ್ಕೆ ತರುವ ಕೆಲಸ ಮಾಡುತ್ತೇನೆ ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಎನ್ನುವುದು ಅತ್ಯಮೂಲ್ಯವಾದದು . ಯಾವುದೇ ಕಾರಣಕ್ಕು ಮತದಾನದಿಂದ ವಂಚಿತರಾಗಬೇಡಿ ಎಂದು ಕರೆನೀಡಿದರು.

ಇದಕ್ಕೆ ಮೀನುಗಾರರಾದ ರಾಜೇಶ್ ತಾಂಡೇಲ್ ,ಜಗ್ಗು ತಾಂಡೇಲ್ ,ರಾಜು ತಾಂಡೇಲ್,ಹಮ್ಜಾ ಸಾಬ್ ಮತ್ತಿತರರು ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿ ಮೀನುಗಾರರ ಮೇಲಿನ ಪ್ರಕರಣಗಳನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು ಮತ್ತು ವಾಣಿಜ್ಯ ಬಂದರು ಯೋಜನೆಯನ್ನು ಕೈ ಬಿಡಬೇಕು. ಮೀನುಗಾರರು ಈಗ ವಾಸವಿರುವ ಮತ್ತು ಹಿಂದೆ ತಮ್ಮ ಪೂರ್ವಜರು ವಾಸವಾಗಿದ್ದ ಸ್ಥಳದ ಜಮೀನಿಯ ಹಕ್ಕುಗಳನ್ನು ಗ್ರಾಮ ನಕ್ಷೆ ಮತ್ತು ದಾಖಲೆಗಳಲ್ಲಿ ಅಡಕಗೊಳಿಸುವ ಕೆಲಸ ಜಿಲ್ಲಾಡಳಿತದಿಂದ ಆಗಬೇಕು ಎಂದು ಆಗ್ರಹಿಸದರು .ಯಾರೊಬ್ಬರು ನಮ್ಮ ಅಳಲು ಕೇಳುತ್ತಿಲ್ಲ,ಮತದಾನ ಬಹಿಷ್ಕರಿಸುವುದು ಅನಿವಾರ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೀನುಗಾರ ಮುಕಂಡರಾದ ರಾಜು ತಾಂಡೇಲ್ ಮಾತನಾಡಿ ಪ್ರತಿಯೋಂದು ಅಧಿಕಾರಿಗಳು ಬಂದಾಗಲು ನಾವು ನಿಮಗೆ ನ್ಯಾಯ ಕೋಡುತ್ತೇವೆ ಹೇಳುತ್ತಾರೆ, 14 ವರ್ಷ ಕಳೆದರು ಇಲ್ಲಿಯ ತನಕ ನ್ಯಾಯ ಸಿಕ್ಕಿಲ್ಲಾ, ಪ್ರಜಾ ಪ್ರಭುತ್ವದ ಕಗ್ಗೋಲೆಯಾಗುತ್ತಿದೆ, ನಮ್ಮ ಈ ಭಾಗದಲ್ಲಿ 5 ರಿಂದ 6 ಸಾವಿರ ಮೀನುಗಾರರು ಇದ್ದಾರೆ ಸಮಸ್ಥ ಮೀನುಗಾರರು ನಮಗೆ ನ್ಯಾಯ ಸಿಗುವವರೆಗೆ ಮತದಾನ ಮಾಡುವುದಿಲ್ಲ ಎಂದು ಹೇಳದರು. ಈ ಸಂದರ್ಭದಲ್ಲಿ ಅಧಿಕಾರಿಗಳಾದ ಸಹಾಯಕ ಆಯುಕ್ತರಾದ ನಯನಾ, ತಹಶಿಲ್ದಾರ ರವಿರಾಜ ದಿಕ್ಷಿತ್, ಮೀನುಗಾರ ಮುಖಂಡರು ಇದ್ದರು.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ

Back to top button