Important
Trending

ಬೈಕ್ ಸ್ಕಿಡ್ ಆಗಿ ಬಿದ್ದು ನಿವೃತ್ತ ಶಿಕ್ಷಕ ಸಾವು

ಶಿರಸಿ: ಬೈಕ್ ಸ್ಕಿಡ್ ಆಗಿ ಬಿದ್ದು ನಿವೃತ್ತ ಶಿಕ್ಷಕ ಮೃತಪಟ್ಟ ಘಟನೆ ಬನವಾಸಿ ರಸ್ತೆಯ ಕ್ಯಾಂಪ್ಕೊ ಬಳಿ ನಡೆದಿದೆ. ಕುಮಟಾದ ಸುರೇಶ್ ಗಾಂವಕರ್ ಮೃತಪಟ್ಟ ದುರ್ದೈವಿ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಬನವಾಸಿ ಪಿಎಸ್‌ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿರಸಿ ಜಾತ್ರೆ ಮುಗಿಸಿ ವಾಪಸ್ ತೆರಳುತ್ತಿದ್ದ ವೇಳೆ ತಾಲೂಕಿನ ಬನವಾಸಿ ರಸ್ತೆಯ ಕ್ಯಾಂಪ್ಕೊ ಬಳಿ ಬೈಕ್ ನಿಯಂತ್ರಣ ತಪ್ಪಿ ಬಿದ್ದಿದೆ. ಈ ವೇಳೆ ತಲೆಗೆ ಬಲವಾದ ಪೆಟ್ಟು ಬಿದ್ದಿದೆ ಎನ್ನಲಾಗಿದ್ದು, ಸುರೇಶ್ ಗಾಂವಕರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Back to top button