48 ಸಾವಿರದ ಮೊಬೈಲ್ ಕೇವಲ 13 ಸಾವಿರಕ್ಕೆ! ಕಡಿಮೆ ಬೆಲೆಯ ವ್ಯಾಮೋಹಕ್ಕೆ ಬಿದ್ದು ಲಕ್ಷಾಂತರ ರೂಪಾಯಿ ಕಳೆದುಕೊಂಡ ಯುವಕ: ಇದನ್ನು ಒಮ್ಮೆ ಓದಿ

48 ಸಾವಿರ ರೂಪಾಯಿಯ ಮೊಬೈಲ್ ಅನ್ನು ಕೇವಲ 13 ಸಾವಿರ ರೂಪಾಯಿಗೆ ಕೊಡುವುದಾಗಿ ಸಂದೇಶ ನೋಡಿದ ಯುವಕ, ಮೊಬೈಲ್ ಖರೀದಿಸಲು ಮುಂದಾಗಿದ್ದಾನೆ. ಇದನ್ನು ನಂಬಿದ ಯುವಕ , ಎಲ್ಲಾ ಮಾಹಿತಿ ಸಲ್ಲಿಸಿ, ಮೊದಲು 1 ರೂಪಾಯಿ ಪಾವತಿಸಿದ್ದಾನೆ.

ಕುಮಟಾ: ಎಲ್ಲಿಯ ವರೆಗೆ ಮೋಸ ಹೋಗುವವರು ಇರುತ್ತಾರೋ, ಅಲ್ಲಿಯ ವರೆಗೆ ಮೋಸ ಮಾಡುವವರು ಇರುತ್ತಾರೆ ಎಂಬ ಮಾತು ಕೆಲವೊಮ್ಮೆ ಅಕ್ಷರಶ: ಸತ್ಯ ಎನಿಸಿಬಿಡುತ್ತದೆ. ಹೌದು, ಆನ್‌ಲೈನ್ ಮೋಸದ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಜನಜಾಗೃತಿ ಮೂಡಿಸುತ್ತಿದ್ದು, ಅನಾಮಿಕರೊಡನೆ ವ್ಯವಹರಿಸುವಾಗ ಎಚ್ಚರವಿರಲಿ. ಇಂಥವರೊಂದಿಗೆ ಹಣಕಾಸಿನ ವ್ಯವಹಾರ ಮಾಡಬೇಡಿ ಎಂದು ಸಾರಿ ಸಾರಿ ಹೇಳುತ್ತಿದೆ. ಆದರೂ, ಕಡಿಮೆ ಬೆಲೆಯಲ್ಲಿ ಖರೀದಿಸುವ ಬರದಲ್ಲಿ ಮೋಸಗಾರರ ಬಲೆಗೆ ಸುಲಭವಾಗಿ ಕೆಲವರು ಬೀಳುತ್ತಿದ್ದಾರೆ.

ಇಲ್ಲೂ ಕೂಡಾ ಇಂತಹದೇ ಪ್ರಕರಣ ನಡೆದಿದೆ. ಅತ್ಯಂತ ದುಬಾರಿ ಬೆಲೆಯ ಮೊಬೈಲನ್ನು ಕಡಿಮೆ ಬೆಲೆಯಲ್ಲಿ ನೀಡುತ್ತೇವೆಂದು ಬಂದ ಸಂದೇಶವನ್ನು ನೋಡಿ, ಯುವಕನೊಬ್ಬ ಯಾಮಾರಿದ್ದಾನೆ. ಒಂದಲ್ಲ, ಎರಡಲ್ಲ ಬರೋಬ್ಬರಿ 1 ಲಕ್ಷ 13 ಸಾವಿರ ಹಣ ಕಳೆದುಕೊಂಡು, ಈಗ ಪೊಲೀಸರಿಗೆ ದೂರು ನೀಡಿದ್ದಾರೆ. 48 ಸಾವಿರ ರೂಪಾಯಿಯ ಮೊಬೈಲ್ ಅನ್ನು ಕೇವಲ 13 ಸಾವಿರ ರೂಪಾಯಿಗೆ ಕೊಡುವುದಾಗಿ ಸಂದೇಶ ನೋಡಿದ ಯುವಕ, ಮೊಬೈಲ್ ಖರೀದಿಸಲು ಮುಂದಾಗಿದ್ದಾನೆ.

ದುಬಾರಿ ಬೆಲೆಯ ಮೊಬೈಲ್ ಕಡಿಮೆ ಬೆಲೆಗೆ ಸಿಗುತ್ತದೆ ಎಂದು ನಂಬಿದ ಯುವಕ, ಮೊಬೈಲ್ ಆರ್ಡರ್ ಮಾಡಲು ವೆಬ್‌ಸೈಟ್‌ಗೆ ತೆರಳಿದ್ದು ಅಲ್ಲಿ ವ್ಯಕ್ತಿಯೊಬ್ಬರ ಇನ್‌ಸ್ಟಾಗ್ರಾಮ್ ಖಾತೆಯ ಲಿಂಕ್ ಓಪನ್ ಆಗಿತ್ತು. ಈ ವೇಳೆ ಯುವಕ ಸಂದೇಶ ಬಂದವರ ಜೊತೆ ಮಾತನಾಡಿದ್ದು, ಅನಾಮಿಕ ವ್ಯಕ್ತಿ ಮೊದಲು 1 ಸಾವಿರ ರೂಪಾಯಿ ಹಣ ಹಾಕುವಂತೆ ತಿಳಿಸಿ ಕ್ಯೂಆರ್ ಕೋಡ್‌ನ್ನು ಕಳುಹಿಸಿಕೊಟ್ಟಿದ್ದಾನೆ. ಬಳಿಕ ಮತ್ತೆ ಉಳಿದ 12 ಸಾವಿರ ಹಣವನ್ನ ಪಾವತಿಸುವಂತೆ ಪಾವತಿಸಿದ್ದಾನೆ. ಆದರೆ, ಹಲವು ದಿನ ಕಳೆದರೂ ಮೊಬೈಲ್ ಬಂದಿಲ್ಲ. ಇದರಿಂದ ಮತ್ತೆ ಆತನನ್ನು ಸಂಪರ್ಕಿಸಿದ್ದಾನೆ.

ಮೊದಲೇ ಪ್ಲಾನ್ ಮಾಡಿದಂತೆ ಆ ವ್ಯಕ್ತಿ ಮತ್ತೆ 5 ಸಾವಿರ ಹಣ ನೀಡುವಂತೆ ಕೇಳಿದ್ದಾನೆ. ಇದಕ್ಕೆ ಒಪ್ಪದ ಯುವಕ ನನಗೆ ಮೊಬೈಲ್ ಬೇಡ. ಹಣವನ್ನು ಮರುಪಾವತಿಸುವಂತೆ ಕೋರಿದ್ದಾನೆ. ಈ ವೇಳೆ ಮೊಬೈಲ್ ನಂಬರ್ ನಿಂದ ಕರೆ ಮಾಡಿದ ಆ ವ್ಯಕ್ತಿ ಮೆಸೇಜ್ ಕಳುಹಿಸುವುದಾಗಿ ಹೇಳಿದ್ದಾನೆ. ಅಷ್ಟೆ ಅಲ್ಲ, ಆ ಮೇಸೆಜ್ ನಲ್ಲಿರುವ ಎಲ್ಲಾ ಮಾಹಿತಿಯನ್ನು ತುಂಬಿ 51 ರೂಪಾಯಿ ಪಾವತಿಸಿದರೆ ನಿಮ್ಮ ಹಣ ರಿಫಂಡ್ ಆಗುತ್ತದೆಂದು ಹೇಳಿದ್ದಾನೆ. ಇದನ್ನು ನಂಬಿದ ಯುವಕ , ಎಲ್ಲಾ ಮಾಹಿತಿ ಸಲ್ಲಿಸಿ, ಮೊದಲು 1 ರೂಪಾಯಿ ಪಾವತಿಸಿದ್ದಾನೆ.

ಇದಾದ ಕೆಲವೇ ಗಂಟೆಗಳಲ್ಲಿ 1 ಲಕ್ಷ ಹಣ ಡೆಬಿಟ್ ಆಗಿದೆ. ತಾನು ಮೋಸ ಹೋಗಿರುವದನ್ನು ಅರಿತ ಯುವಕ ಕಾರವಾರ ಪೊಲೀಸ್ ಠಾಣೆಯಲ್ಲಿ ದೂರುದಾಖಲಿಸಿದ್ದಾನೆ. ಮೋಸಕ್ಕೊಳಗಾದ ವ್ಯಕ್ತಿ ತಾಲೂಕಿನ ಚಿತ್ರಗಿಯ ಚಿನ್ಮಯ ಎಂದು ತಿಳಿದುಬಂದಿದೆ. ಪ್ರಿಯ ಓದುಗರೆ ಇಂಥ ಅನಾಮಿಕ ವ್ಯಕ್ತಿಗಳೊಡನೆ ವ್ಯವಹರಿಸಲೇಬೇಡಿ. ಜಾಗೃತರಾಗಿರಿ..

” ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9886460777INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9886460777

ವಿಸ್ಮಯ ನ್ಯೂಸ್, ಕಾರವಾರ

Exit mobile version