Big News
Trending

ಅಕ್ರಮವಾಗಿ ಮಾದಕವಸ್ತು ಮಾರಾಟ: ಓರ್ವನ ಬಂಧನ

ಶಿರಸಿ: ನಗರದ ಭೀಮನಗುಡ್ಡ ಅರಣ್ಯ ಪ್ರದೇಶದ ಸಮೀಪ ಅಕ್ರಮವಾಗಿ ಗಾಂಜಾ ಮತ್ತು ಚರಸ್ ಮಾರಾಟ ಮಾಡುತ್ತಿದ್ದ ವ್ಯಕ್ತಯೋರ್ವನನ್ನು ಶಿರಸಿ ನಗರ ಠಾಣೆ ಪೋಲೀಸರು ಬಂಧಿಸಿದ ಘಟನೆ ನಡೆದಿದೆ. ಮಂಗಳೂರು ಶಕ್ತಿನಗರದ ವಿಕ್ರಮ ವಿಕ್ಕಿ ದೇವಿದಾಸ ಶೆಟ್ಟಿ ಎಂಬಾತನೇ ಬಂಧಿತ ವ್ಯಕ್ತಿ.

ಇದನ್ನೂ ಓದಿ: ನಾಪತ್ತೆಯಾದ ಯುವತಿ: ಸುಳಿವು ಸಿಕ್ಕರೆ ಮಾಹಿತಿ ನೀಡಿ

ಈತ ಅಕ್ರಮವಾಗಿ ಗಾಂಜಾ ಮತ್ತು ಚರಸ್ ಸಾಗಾಟ ಮಾಡಿಕೊಂಡು ಬಂದು ಭೀಮನಗುಡ್ಡ ಅರಣ್ಯ ಪ್ರದೇಶದ ಸಮೀಪ ಮಾರಾಟ ಮಾಡುತ್ತಿದ್ದ ವೇಳೆ ಶಿರಸಿ ನಗರ ಠಾಣೆ ಪಿ.ಎಸ್.ಐ ನಾಗಪ್ಪ ಬಿ ಅವರ ನೇತೃತ್ವದಲ್ಲಿ ಪೋಲೀಸ್ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ. ಅಂದಾಜು 12 ಸಾವಿರ ರೂಪಾಯಿ ಮೌಲ್ಯದ 115 ಗ್ರಾಂ ಗಾಂಜಾ ಹಾಗೂ 50 ಸಾವಿರ ಮೌಲ್ಯದ 25 ಗ್ರಾಂ ತೂಕದ ಚರಸ್ ವಶಕ್ಕೆ ಪಡೆಯಲಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

Back to top button