ಮೋಕ್ಷ ಚಲನಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಗೆ ಮಾರ್ಚ್ 27ರ ಮುಹೂರ್ತ ನಿಗದಿಯಾಗಿದ್ದು ‘ ಚಿತ್ರವೂ ಆದಷ್ಟು ಬೇಗ ಬಿಡುಗಡೆಯಾಗಿ ಯಶಸ್ವಿ ಆಗಲಿ ಎನ್ನುವುದು ಜಿಲ್ಲೆಯ ಸಿನಿಪ್ರಿಯರ ಆಶಯವಾಗಿದೆ.
ಅಂಕೋಲಾ : ಸಿನಿಮಾ ಲೋಕದತ್ತ ಜಿಲ್ಲೆಯ ನೂರಾರು ಪ್ರತಿಭೆಗಳು ಮುನ್ನಡಿ ಇಡುತ್ತಿದ್ದು, ಅವರಲ್ಲಿ ಅಂಕೋಲಾ ತಾಲೂಕಿನ ಅಡಿಗೋಣ ಮೂಲದ ಸಮರ್ಥ ನಾಯಕ ಸಹ ಗುರುತಿಸಿಕೊಂಡಿದ್ದಾರೆ. ಸಮರ್ಥ ನಾಯಕ, ನಿರ್ಮಾಪಕ, ನಿರ್ದೇಶಕರಾಗಿರುವ ‘ಮೋಕ್ಷ’ ಚಲನಚಿತ್ರ ಎಪ್ರಿಲ್ ತಿಂಗಳಲ್ಲಿ ತೆರೆಗೆ ಬರಲು ಸಿದ್ಧಗೊಳುತ್ತಿದ್ದು, ಅದಕ್ಕೂ ಮುನ್ನ ಮಾರ್ಚ್ 27ರ ಶನಿವಾರ ಸಿನಿಮಾದ ಟ್ರೇಲರ್ ಬಿಡುಗಡೆಗೊಳ್ಳಲಿದೆ.
ಕನ್ನಡದಲ್ಲಿ ಈ ಹಿಂದೆ ಬಂದಿರುವ ಅನೇಕ ಸಸ್ಪೆನ್ಸ್ – ಥ್ರಿಲರ್ ಚಿತ್ರಗಳಿಗಿಂತ ಕೊಂಚ ವಿಭಿನ್ನ ಕಥಾ ಹಂದರ ಹೊಂದಿದಂತೆ ಕಂಡು ಬರುತ್ತಿರುವ ಮೋಕ್ಷ ಚಿತ್ರ ಮತ್ತು ಕಥೆ ಕ್ಷಣ ಕ್ಷಣಕ್ಕೂ ಕೌತುಕ, ಭಯಾನಕ, ರೋಮಾಂಚಕ ಹಾಗೂ ನಿಗೂಢ ಸನ್ನಿವೇಶಗಳನ್ನು ತೆರೆದಿಡಲಿದ್ದು ಪ್ರೇಕ್ಷಕ ವಲಯವನ್ನು ಹೊಸತ ನದಲ್ಲಿ ತಲುಪಲು ಪ್ರಯತ್ನಿಸುತ್ತದೆ. ಪಾತ್ರ ವರ್ಗದಲ್ಲಿಯೂ ಭಿನ್ನವಾಗಿ ಗುರುತಿಸಿಕೊಂಡ ಕಲಾವಿದರ ಮಧ್ಯೆ ‘ಮಾಸ್ಕ – ಮ್ಯಾನ್” ಪಾತ್ರ ವಿಶೇಷವಾಗಿದ್ದು ಕಥೆಗೆ ತಿರುವು ನೀಡಿದೆ.
ಮೋಹನ ಧನರಾಜ್ ಮತ್ತು ಆರಾಧ್ಯ ಲಕ್ಷ್ಮಣ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ತಾರಕ್ ಪೊನ್ನಪ್ಪ, ಭೂಮಿ, ಪ್ರಶಾಂತ ಮುಂತಾದವರು ತಾರಾಗಣದಲ್ಲಿ ಮಿಂಚುವ ಪ್ರಯತ್ನ ಮಾಡಿದ್ದಾರೆ. ಉತ್ತಮ ಹಿನ್ನಲೆ ಸಂಗೀತ, ಮನಮುಟ್ಟುವ ಗೀತೆಗಳು ಚಿತ್ರಕಥೆಗೆ ಜೀವಂತಿಕೆ ತುಂಬಿದೆ.
ಮೋಕ್ಷ ಚಿತ್ರ ತಂಡದ ಕೆಲ ಪ್ರಮುಖರು ಈ ಹಿಂದೆ ಬಾಸಗೋಡ ನಡುಬೇಣ ಕ್ರೀಡಾಂಗಣದಲ್ಲಿ ಜನತಾ ಕ್ರಿಕೆಟ್ ಕ್ಲಬ್ಬಿನ 40 ನೇ ವರ್ಷದ ವರ್ಣರಂಜಿತ ಸಮಾರಂಭದಲ್ಲಿ ಭಾಗವಹಿಸಿ ಟ್ರೇಲರ್ ಬಿಡುಗಡೆ ಇಂಗಿತ ವ್ಯಕ್ತಪಡಿಸಿದ್ದನ್ನು ಸ್ತರಿಸಬಹುದಾಗಿದೆ. ತದನಂತರ ನಾನಾ ಕಾರಣಗಳಿಂದ ಮುಂದೂಡಲ್ಪಟ್ಟ ಮೋಕ್ಷ ಚಲನಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಗೆ ಮಾರ್ಚ್ 27ರ ಮುಹೂರ್ತ ನಿಗದಿಯಾಗಿದ್ದು ‘ ಚಿತ್ರವೂ ಅದಷ್ಟು ಬೇಗ ಬಿಡುಗಡೆಯಾಗಿ ಯಶಸ್ವಿ ಆಗಲಿ ಎನ್ನುವುದು ಜಿಲ್ಲೆಯ ಸಿನಿಪ್ರಿಯರ ಆಶಯವಾಗಿದೆ.
ಕನ್ನಡ ಚಲನ ಚಿತ್ರರಂಗ ಹೊಸಬರನ್ನು ಕೈ ಬೀಸಿ ಕರೆಯುತ್ತಿದ್ದು, ಜಿಲ್ಲೆಯ ಅನೇಕರು ನಾನಾ ವಿಭಾಗಗಳಲ್ಲಿ ತಮ್ಮ ಪ್ರತಿಭೆಯನ್ನು ತೋರ್ಪಡಿಸುತ್ತಿದ್ದಾರೆ. ಅಂತವರ ಸಾಲಿನಲ್ಲಿ ಅಂಕೋಲಾ ಅಡಿಗೋಣ ಮೂಲದ ಸಮರ್ಥ ನಾಯಕ ಕೂಡಾ ಒಬ್ಬರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಬಾಬಣ್ಣ ಎಂದೇ ಖ್ಯಾತವಾಗಿರುವ ಗೋವಿಂದ ನಾಯಕ ಹಾಗೂ ಸಗಡಗೇರಿ ಮೂಲದ ಬೇಬಿ ನಾಯಕ ದಂಪತಿಗಳ ಮತ್ತು ನಾಗಿರುವ ಸಮರ್ಥ ಬಾಲ್ಯದಿಂದಲೂ ಸಿನಿಮಾದತ್ತ ವಿಶೇಷ ಆಸಕ್ತಿ ಹೊಂದಿದ್ದರು.
ಇಂಜಿನಿಯರಿ0ಗ್ ಮತ್ತು ಎಮ್ ಬಿ ಎ ಪದವಿ ಮುಗಿಸಿರುವ ಈ ಸುರದ್ರೂಪಿ ತರುಣ ತನ್ನದೇ ಆದ ಎಸ್. ಜಿ ಎನ್. ಎಂಟರ್ ಟೇನ್ ಮೆಂಟ್ ಮೂಲಕ ಜಾಹಿರಾತು ಕ್ಷೇತ್ರದಲ್ಲಿ ಪ್ರಸಿದ್ಧಿಯಾಗಿದ್ದಾರೆ.
ಮೂನ್ನೂರಕ್ಕೂ ಹೆಚ್ಚು ಜಾಹೀರಾತು ನಿರ್ಮಾಣದಲ್ಲಿ ತನ್ನ ನೈಪುಣ್ಯತೆ ತೋರಿದ್ದಾರೆ. ಬೆಳ್ಳಿತೆರೆಯ ಪ್ರಥಮ ಪ್ರಯತ್ನ ಎಂಬಂತೆ ‘ಮೋಕ್ಷ’ ಚಿತ್ರ ನಿರ್ಮಾಣ ಮಾಡಿದ್ದು ಇದೇ ಮಾರ್ಚ್ 27 ರಂದು ಟ್ರೇಲರ್ ಬಿಡುಗಡೆಗೊಳಿಸಲಿದ್ದಾರೆ. ಜಿಲ್ಲೆಯ ಕಾರವಾರ. ಅಂಕೋಲಾ ಕುಮಟಾ ಸೇರಿದಂತೆ ರಾಜ್ಯದ ಹಲವೆಡೆ ಚಿತ್ರೀಕರಣ ಮಾಡಲಾಗಿದ್ದು ಇದೊಂದು ಸಸ್ಪೆನ್ಸ ಮೂವಿಯಾಗಿದೆ ಎನ್ನುವ ಮಾರು ನಿರ್ದೇಶಕರರಿಂದ ಕೇಳಿಬಂದಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9886460777INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9886460777