ನಮಗೆ ನಮ್ಮ ಮೊಮ್ಮಗಳು ಬೇಕು, ನಮಗೆ ನಮ್ಮ ಮೊಮ್ಮಗಳು ಬೇಕೆಂದು ಒಂದೇ ಸಮನೆ ಗೋಗರೆಯುತ್ತಿರುವ ಅಜ್ಜ ಅಜ್ಜಿ.. ಹೌದು, ಈ ಇಳಿವಯಸ್ಸಿನ ಹಿರಿಯ ಜೀವಗಳಿಗೆ ಮೊಮ್ಮಗಳ ಕನವರಿಕೆ. ಭಿಕ್ಷೆ ಬೇಡಿಯಾದರೂ ಅವಳನ್ನು ಸಾಕುತ್ತೇವೆ ಎಂದು ಹೇಳಿತ್ತಿರುವ ಇವರ ಮಾತು ಕೇಳಿದ್ರೆ, ಎಂಥವರ ಹೃದಯವಾದರು ಕರಗದೆ ಇರದು.
ಕಾರವಾರ: ಮಕ್ಕಳಂದ್ರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ. ಮಕ್ಕಳಿಗಾಗಿ ತಮ್ಮ ಸರ್ವಸ್ವವನ್ನೆ ತ್ಯಾಗ ಮಾಡಿದ ಅದೇಷ್ಟೊ ಕುಟುಂಬಗಳು ನಮ್ಮ ಕಣ್ಮುಂದೆಯೇ ಇವೆ. ಇದು ಕೂಡಾ ಇಂತಹದೇ ಒಂದು ಸುದ್ದಿ. ಅಜ್ಜ ಅಜ್ಜಿ ಮೊಮ್ಮಗಳಿಗಾಗಿ ರೋಧಿಸುತ್ತಿರುವ ಪರಿ ಕಲ್ಲು ಹೃದಯವನ್ನು ಕರಗಿಸದೇ ಇರದು.
ಇದೇ ರೀತಿ ಚಿಕ್ಕ ವಯಸ್ಸಿನಲ್ಲಿಯೇ ತಂದೆ-ತಾಯಿ ಕಳೆದುಕೊಂಡು ಅಜ್ಜ ಅಜ್ಜಿಯ ಆಶ್ರಯದಲ್ಲಿ ಬೆಳೆದಿದ್ದ ಮಗುವೊಂದು ಕಾರಣಾಂತರಗಳಿoದ ಬಾಲಮಂದಿರ ಸೇರಿದ್ದು ಇದೀಗ ದಶಕಗಳ ಕಾಲ ಮಗಳಂತೆ ಸಾಕಿ ಸಲುಹಿದ ವೃದ್ಧ ದಂಪತಿ ಮಗುವನ್ನು ಪುನಃ ಪಡೆಯಲು ಊಟ ನಿದ್ರೆ ಬಿಟ್ಟು ಹಂಬಲಿಸುತ್ತಿರುವ ಹೃದಯವಿದ್ರಾವಕ ಘಟನೆ ಕಾರವಾರದಲ್ಲಿ ಬೆಳಕಿಗೆ ಬಂದಿದೆ.
ಹೌದು, ಕಾರವಾರ ತಾಲ್ಲೂಕಿನ ಶಿರವಾಡದ ಗೌರಮ್ಮ ಹಾಗೂ ಕೃಷ್ಣಪ್ಪ ಇದೀಗ ತಮ್ಮ ಮೊಮ್ಮಗಳಿಗಾಗಿ ಹಂಬಲಿಸತೊಡಗಿದ್ದಾರೆ. ಕಳೆದ ಮೂವತ್ತು ವರ್ಷಗಳ ಹಿಂದೆ ರಾಯಚೂರಿನಿಂದ ವಲಸೆ ಬಂದಿದ್ದ ದಂಪತಿಗಳು ಕಾರವಾರದಲ್ಲಿ ನೆಲೆಕಂಡುಕೊoಡಿದ್ದರು. ಆದರೆ ಇಬ್ಬರು ಸೋಂಕಿಗೆ ತುತ್ತಾದ ಕಾರಣ ಮಗು ಅನಾಥವಾಗಿತ್ತು. ಆಗ ಗೌರಮ್ಮ ಹಾಗೂ ಕೃಷ್ಣಪ್ಪ ಎಂಬುವವರು ಸಾಕಿದ್ದರು.
ಅಜ್ಜ ಅಜ್ಜಿಯ ಆಶ್ರಯದಲ್ಲಿ ಬೆಳದಿದ್ದ ಮಗುವಿಗೆ ಇದೀಗ 11 ವರ್ಷ ವಯಸ್ಸಾಗಿದೆ. ಈ ನಡುವೆ ಕಳೆದ ಕೆಲ ತಿಂಗಳ ಹಿಂದೆ ಕೃಷ್ಣಪ್ಪ ಅವರ ಆರೋಗ್ಯದಲ್ಲಿ ಏರುಪೇರಾಗಿ ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿತ್ತು.
ಆದರೆ ಆಸ್ಪತ್ರೆಯಲ್ಲಿ ದಾಖಲಾದಾಗ ಮಗುವನ್ನು ನೋಡಿಕೊಳ್ಳಲು ಯಾರು ಇಲ್ಲದಾಗ ವೃದ್ದ ದಂಪತಿಗೆ ತಿಳಿಸಿ ಕಾರವಾರದ ಬಾಲಕಿಯರ ಬಾಲಮಂದಿರಕ್ಕೆ ಸೇರಿಸಲಾಗಿತ್ತು. ಇದೀಗ ಆರೋಗ್ಯವಾಗಿ ಬಂದಿರುವ ದಂಪತಿ ತಮ್ಮ ಮಗುವನ್ನು ತಮಗೆ ನೀಡಿ ಎಂದು ಅಂಗಲಾಚುತ್ತಿದ್ದಾರೆ.
ಇನ್ನು ಬಾಲಕಿ ಚಿಕ್ಕವಳಿದ್ದಾಗಲೇ ತಂದೆ ತಾಯಿಯನ್ನು ಕಳೆದುಕೊಂಡಿದ್ದರಿoದ ಅಜ್ಜಅಜ್ಜಿ ಪೋಷಣೆ ಮಾಡಿದ್ದಾರೆ. ಮಗುವಿಗಾಗಿ ಕಾರವಾರ ಬ್ಯಾಂಕುಗಳಲ್ಲಿ ಹಣವನ್ನು ಸಹ ಡಿಪಾಸಿಟ್ ಮಾಡಿಟ್ಟಿದ್ದೇವೆ.
ಹೀಗಾಗಿ ತಮ್ಮ ಮೊಮ್ಮಗಳು ತಮಗೆ ಬೇಕು. ಇಲ್ಲದಿದ್ದಲ್ಲಿ ತಾವು ಪ್ರಾಣ ಕಳೆದುಕೊಳ್ಳುತ್ತೇವೆ. ತಮ್ಮ ಮಗುವನ್ನು ತಮಗೆ ನೀಡಿ ಎಂದರೂ ಬಾಲಮಂದಿರದಲ್ಲಿ ನೀಡುತ್ತಿಲ್ಲ. ಮಗು ಅಜ್ಜಅಜ್ಜಿ ಬೇಕು ಎಂದು ಅಳುತ್ತಿದೆ.
ಹೀಗಾಗಿ ಮಗುವನ್ನ ತಮಗೆ ನೀಡಿದರೇ ತಾವೂ ಊರಿಗೆ ತೆರಳುತ್ತೇವೆ. ಭಿಕ್ಷೆ ಬೇಡಿಯಾದರೂ ಮಗುವನ್ನು ಸಾಕುತ್ತೇವೆ ಎನ್ನುತ್ತಾರೆ ವೃದ್ಧ ದಂಪತಿ. ಇನ್ನು ಈ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ, ಮಗುವಿಗೆ ಯಾರು ಆಶ್ರಯ ಇಲ್ಲದ ಕಾರಣಕ್ಕಾಗಿ ಬಾಲಮಂದಿರಕ್ಕೆ ಸೇರಿಸಲಾಗಿತ್ತು. ಅಜ್ಜಅಜ್ಜಿಗೆ ವಯಸ್ಸಾಗಿರುವ ಕಾರಣಕ್ಕಾಗಿ ಕುಟುಂಬದವರು ಬೇರೆಯಾರು ಇದ್ದಾರೆ ಎಂಬುದು ವಿಚಾರಿಸಲಾಗಿದೆ. ಅಕ್ಕ ಅಂತಾ ಹೇಳಿ ಒಬ್ಬರು ಬಂದಿದ್ದಾರೆ.
ಆದರೆ ಅಕ್ಕನನ್ನು ಮಗು ಗುರುತಿಸುತ್ತಿಲ್ಲ. ಹೀಗಾಗಿ ಮಗುವಿನ ಸುರಕ್ಷತಾ ಹಿತದೃಷ್ಟಿಯಿಂದ ಬಾಲಮಂದಿರದಲ್ಲಿ ಇಟ್ಟುಕೊಂಡಿದ್ದೇವೆ. ಸಾಮಾಜಿಕ ತನಿಖಾ ವರದಿ ಬಂದ ನಂತರ ಅಜ್ಜಅಜ್ಜಿ ಜೊತೆ ಮಗುವನ್ನು ಬಿಡುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪದ್ಮಾವತಿ ಹೇಳಿದ್ದಾರೆ.
ಒಟ್ಟಿನಲ್ಲಿ ತಂದೆತಾಯಿಯನ್ನು ಕಳೆದುಕೊಂಡರು ಸ್ವಂತ ಮಗಳಂತೆ ಸಾಕಿ ಸಲುಹಿದ ಅಜ್ಜ ಅಜ್ಜಿಗೆ ಮೊಮ್ಮಗಳನ್ನು ಬಾಲಮಂದಿರಲ್ಲಿ ಇಡಲು ಇಷ್ಟವಿಲ್ಲ. ಮಗು ತಮ್ಮ ಜೊತೆ ಇರಲಿ. ನಾವು ಏನಾದರೂ ಮಾಡಿ ಮಗುವನ್ನು ದೊಡ್ಡ ಮಾಡ್ತೇವೆ. ತಮ್ಮ ಮಗುವನ್ನು ಬಿಟ್ಟುಬಿಡಿ ಎಂದು ಅಂಗಲಾಚುತ್ತಿರುವ ದೃಶ್ಯ ಮನಕರಗುವಂತಿದೆ.
ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..
ವಿಸ್ಮಯ ನ್ಯೂಸ್, ಕಾರವಾರ.