ತಂದೆಗೆ ಹಾರ್ಟ್ ಅಟ್ಯಾಕ್: ಆದರೂ ಕೂಡಲೇ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿ ಕೋವಿಡ್ ಸೋಂಕಿತರ ಆರೈಕೆಗೆ ಬಂದ ವೈದ್ಯ: ಇವರ ಕರ್ತವ್ಯ ಪ್ರಜ್ಞೆಗೊಂದು ಸಲಾಂ

ವೈದ್ಯರಾದ ಶ್ರೀನಿವಾಸ್ ತಂದೆಗೆ ವಾರದ ಹಿಂದೆ ಹಾರ್ಟ್ ಅಟ್ಯಾಕ್ ಆಗಿತ್ತು. ಆದರೆ, ಶ್ರೀನಿವಾಸ್ ಅವರು ಒಬ್ಬ ತಂದೆಗೆ ಮಗನಾಗಿ ಕರ್ತವ್ಯ ನಿಭಾಯಿಸಿದರು. ಜೊತೆಗೆ ತನ್ನ ವೈದ್ಯ ವೃತ್ತಿಯ ಕರ್ತವ್ಯವನ್ನು ಮರೆಯಲಿಲ್ಲ. ನಿಜವಾಗಲು ಡಾ. ಶ್ರೀನಿವಾಸ್ ಅವರು ವಿಭಿನ್ನವಾಗಿ, ವಿಶೇಷವಾಗಿ ನಿಲ್ಲುತ್ತಾರೆ.

ಕಾರವಾರ: ಕೋವಿಡ್ ಅಬ್ಬರಕ್ಕೆ ಇಡೀ ದೇಶವೇ ಕಂಗಾಲಾಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದ್ದು, ಸಾವಿನ ಸಂಖ್ಯೆ ಸಹ ಏರುಗತಿಯಲ್ಲಿದೆ. ಕೋವಿಡ್ ನಿಯಂತ್ರಣಕ್ಕೆ ಹಲವು ವೈದ್ಯರು, ನರ್ಸ್ ಗಳು ಹಗಲು ರಾತ್ರಿಯನ್ನೆದೆ ಕೆಲಸನಿರ್ವಹಿಸಿ, ಕರ್ತವ್ಯಪ್ರಜ್ಞೆ ಮೆರೆಯುತ್ತಿದ್ದಾರೆ. ಈಗ ನಾವು ಹೇಳುತ್ತಿರುವುದು ಕೂಡೇ ಇಂತಹದೇ ಒಂದು ಸುದ್ದಿ.

ಹೌದು, ತನ್ನ ತಂದೆಗೆ ಹಾರ್ಟ್ ಅಟ್ಯಾಕ್ ಆಗಿ ಹೃದಯ ಚಿಕಿತ್ಸೆಯಾಗಿದ್ದರು, ತನ್ನ ಕರ್ತವ್ಯ ಮರೆಯಲಿಲ್ಲ. ಕೋವಿಡ್ ಸೋಂಕಿತರ ಸೇವೆಯೂ ಅತಿಮುಖ್ಯವಾದುದು ಎಂದು ನೂರಾರು ಸೋಂಕಿತರಿಗೆ ಚಿಕಿತ್ಸೆ ನೀಡಿ ಗುಣಮುಖ ಮಾಡುವಲ್ಲಿ ಮಗ್ನರಾಗುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಇವರ ಹೆಸರು ಡಾ. ಶ್ರೀನಿವಾಸ್. ಉತ್ತರ ಕನ್ನಡ ಜಿಲ್ಲಾ ಕೇಂದ್ರ ಕಾರವಾರದ ಸರ್ಕಾರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಶ್ವಾಸಕೋಶ ತಜ್ಞರು. ಇವರು ಮಾಡಿದ ಕಾರ್ಯ ಎಲ್ಲರೂ ಶ್ಲಾಘಿಸಲೇಬೇಕು..

ಡಾ. ಶ್ರೀನಿವಾಸ್ ಅವರು ಮೂಲತ ಶಿವಮೊಗ್ಗದವರು. ಕಳೆದ ಆರು ತಿಂಗಳಿನಿoದ ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಶ್ವಾಸಕೋಶ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 250ಕ್ಕೂ ಅಧಿಕ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಿ ಗುಣಪಡಿಸಿದ್ದಾರೆ. ಇದೇ ವೇಳೆ, ಶ್ರೀನಿವಾಸ್ ತಂದೆಗೆ ವಾರದ ಹಿಂದೆ ಹಾರ್ಟ್ ಅಟ್ಯಾಕ್ ಆಗಿತ್ತು,

ಕೂಡಲೇ ಕಾರವಾರದಿಂದ ಶಿವಮೊಗ್ಗಕ್ಕೆ ತೆರಳಿ ತಂದೆಯ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿ, ಅಲ್ಲಿನ ಖಾಸಗಿ ಆಸ್ಪತ್ರೆಯೊಂದಲ್ಲಿ ಅಡ್ಮಿಟ್ ಮಾಡಿಸಿದ್ದಾರೆ. ಇದಾದ ಬಳಿಕ ಮನೆಯವರಿಗೆ ತಂದೆಯನ್ನು ಆರೈಕೆ ಮಾಡುವಂತೆ ತಿಳಿಸಿ , ಸಂಜೆಯೇ ಕಾರವಾರಕ್ಕೆ ಬಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಮುಂದುವರೆಸಿದ್ದಾರೆ. ತಂದೆಯನ್ನ ಆರೈಕೆ ಮಾಡಲು ಮನೆಯವರನ್ನ ಬಿಟ್ಟು ಜನರ ಪ್ರಾಣದ ರಕ್ಷಣೆಗೆ ನಿಂತಿರುವ ವೈದ್ಯ ಶ್ರೀನಿವಾಸ್ ಕಾರ್ಯ ನಿಜಕ್ಕೂ ಮಾದರಿಯೇ ಸರಿ. ಒಬ್ಬ ತಂದೆಗೆ ಮಗನಾಗಿ ಕರ್ತವ್ಯ ನಿಭಾಯಿಸಿದರು. ಜೊತೆಗೆ ತನ್ನ ವೈದ್ಯ ವೃತ್ತಿಯ ಕರ್ತವ್ಯವನ್ನು ಮರೆಯಲಿಲ್ಲ. ನಿಜವಾಗಲು ಡಾ. ಶ್ರೀನಿವಾಸ್ ಅವರು ವಿಭಿನ್ನವಾಗಿ, ವಿಶೇಷವಾಗಿ ನಿಲ್ಲುತ್ತಾರೆ.

ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಕೊಡುವಲ್ಲಿ ಶ್ವಾಸಕೋಶ ತಜ್ಞರ ಪಾತ್ರ ಅತ್ಯಂತ ಮುಖ್ಯವಾದುದು. ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಇಬ್ಬರೇ ಇಬ್ಬರು ಶ್ವಾಸಕೋಶ ತಜ್ಞರಿದ್ದಾರೆ.

ಹೀಗಾಗಿ ಇಲ್ಲಿನ ಪರಿಸ್ಥಿತಿಯನ್ನು, ಸಮಸ್ಯೆಯನ್ನು ಅರಿತು ಕೂಡಲೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇವರ ಕರ್ತವ್ಯ ಪ್ರಜ್ಞೆಗೊಂದು ಸಲಾಂ. ಅವರನ್ನು ಅಭಿನಂದಿಸಿ. ಕಮೆಂಟ್ ಮಾಡಿ ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ತಿಳಿಸಿ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

ವಿಸ್ಮಯ ನ್ಯೂಸ್, ಕಾರವಾರ

Exit mobile version