ಮಳೆ ಅವಾಂತರ: ಗುಡ್ಡ ಕುಸಿದು ಮನೆ ಅಂಗಳಕ್ಕೆ ಬಂದುಬಿದ್ದ ಬೃಹತ್ ಬಂಡೆ: ತುಂಬಿ ಹರಿಯುತ್ತಿದೆ ಗುಂಡಬಾಳ ನದಿ – ತಗ್ಗು ಪ್ರದೇಶದವರ ಸ್ಥಳಾಂತರಕ್ಕೆ ನಿರ್ಧಾರ
ಹೊನ್ನಾವರ: ತಾಲೂಕಿನ ಹಡಿನಬಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾವೂರಿನ ಸೈನಿಕರಾದ ಸುರೇಶ ಗೌಡರ ಮನೆಯ ಹತ್ತಿರ ಬೃಹತ್ ಗುಡ್ಡ ಕುಸಿತ ಸಂಭವಿಸಿದ್ದು, ಅದೃಷ್ಟವಶಾತ್ ಯ್ಯಾವುದೆ ಅನಾಹುತ ಸಂಬವಿಸಿಲ್ಲ. ಇಲ್ಲಿನ ಈ ಗುಡ್ಡ ಕಳೆದ ವರ್ಷವು ಸ್ವಲ್ಪ ಪ್ರಮಾಣದಲ್ಲಿ ಕುಸಿದಿತ್ತು. ಅಧಿಕಾರಿಗಳಿಗೆ ಇದನ್ನು ತಿಳಿಸಲಾಗಿದ್ದರೂ ಏನೂ ಪ್ರಯೋಜವಾಗಿಲ್ಲ ಎಂದು ಮನೆಯವರು ಅಳಲು ತೋಡಿಕೊಂಡಿದ್ದಾರೆ. ಗುಡ್ಡ ಕುಸಿತದಿಂದ ಬೃಹದಾಕಾರಾದ ಬಂಡೆ ಉರುಳಿ ಸೈನಿಕರಾದ ಸುರೇಶ ಗೌಡರ ಮನೆಯ ಅಂಗಳಕ್ಕೆ ಬಂದು ಬಿದ್ದಿದೆ. ಇದರಿಂದಾಗಿ ಮನೆಯವರು ಆತಂಕಗೊoಡಿದ್ದಾರೆ.
ಈ ಸಂದರ್ಭದಲ್ಲಿ ವಿಸ್ಮಯ ಟಿ.ವಿಯೊಂದಿಗೆ ಮಾತನಾಡಿದ ಸೈನಿಕ ಸುರೇಶ ಗೌಡ ಅವರು, ಕಳೆದ ವರ್ಷ ಆಗಸ್ಟ್ ನಲ್ಲಿ ಗುಡ್ಡ ಕುಸಿತ ಉಂಟಾಗಿತ್ತು. ಹೊನ್ನಾವರ ತಹಶೀಲ್ದಾರ್ ಬಂದು ಪಂಚನಾಮೆ ಮಾಡಿಕೊಂಡು ಹೋಗಿದ್ದರು. ಎರಡು ಬಂಡೆಗಳು ಉರುಳಿ ಮನೆಯ ಅಂಗಳಕ್ಕೆ ಬಂದು ಬಿದ್ದಿದ್ದು ಕುದಲೆಳೆಯ ಅಂತರದಿಂದ ದೊಡ್ಡ ಅನಾಹುತ ತಪ್ಪಿದೆ. ಇಲ್ಲಿಗೆ ಬರುವಂತ ಅಧಿಕಾರಿಗಳು ಬಂದು ಪೋಟೋ ಹೊಡೆದುಕೊಂಡು ಹೋಗುವುದಕ್ಕೆ ಸಿಮೀತವಾಗಿದ್ದಾರೆ.
ಗುಡ್ಡದ ಮೇಲಿರುವ ಶಾಲೆಯ ಕಂಪೌoಡ್ ಕುಸಿದಿದೆ. ಶಾಲೆ ಕುಸಿದು ಬೀಳುವ ಮೊದಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿ ಮುಂದೆ ಆಗುವ ಅನಾಹುತ ತಪ್ಪಿಸಿ ಎಂದರು,
ಇನ್ನೊoದೆಡೆ, ಹೊನ್ನಾವರ ತಾಲೂಕಿನಲ್ಲಿ ಕೆಲವು ದಿನಗಳಿಂದ ಒಂದೇ ಸಮನೇ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಜನ ಜಿವನ ಅಸ್ಥವ್ಯಸ್ಥಗೊಂಡಿದೆ. ತಾಲೂಕಿನ ಶರಾವತಿ ನದಿ ಬಡಗಣಿ ನದಿ, ಗುಂಡಬಾಳ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದೆ. ಗುಂಡಬಾಳ ನದಿಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ಈಗಾಗಲೆ ನದಿ ತೀರದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಅಲ್ಲದೆ ಸಿದ್ದಾಪುರ ತಾಲೂಕಿನ ಹಲವು ಭಾಗದಲ್ಲಿ ಸುರಿಯುತ್ತಿರುವ ಮಳೆಯ ನೀರು ಗುಂಡಬಾಳ ನದಿಗೆ ಹರಿದು ಬರುವುದಲ್ಲದೆ ತಾಲೂಕಿನ ಗುಡ್ಡದ ಪ್ರದೇಶದ ಮಳೆ ನೀರು ಮತ್ತು ತಾಲೂಕಿನಲ್ಲಿ ಸುರಿಯುತ್ತಿರುವ ಮಳೆ ಇಲ್ಲಿನ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗುತಿದೆ. ಇನ್ನು ಎರಡು ದಿನ ಮಳೆ ಮುಂದುವರೆಯುವ ಸಾಧ್ಯತೆ ಇರುದರಿಂದ ತಗ್ಗು ಪ್ರದೇಶದ ಮನೆಯವರನ್ನು ಬೇರೆಡೆಗೆ ಸ್ಥಳಾಂತರಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ