Trending

ಟಿಪ್-ಟಾಪ್ ಬಟ್ಟೆ ಧರಿಸಿ, ದುಬಾರಿ ಕೆ.ಟಿ.ಎಂ ಬೈಕ್ ನಲ್ಲಿ ಬಂದು ನಿಲ್ಲಿಸಿಟ್ಟ ಬೈಕ್ ನ ಹೆಲ್ಮೆಟ್ ಕದ್ದ ಯುವಕ: ಸಿಸಿಟಿವಿಯಲ್ಲಿ ಸೆರೆಯಾಗಿದೆ ದೃಶ್ಯ

ಭಟ್ಕಳ: ತಾಲೂಕಿನ ಅಂಚೆ ಕಚೇರಿ ಕಂಪೌoಡ್ ಒಳಗಡೆ ನಿಲ್ಲಿಸಿಟ್ಟ ಬೈಕ್ ನಲ್ಲಿದ್ದ ಹೆಲ್ಮೆಟ್ ಅನ್ನು ಅಪರಿಚಿತ ಯುವಕನೋರ್ವ ಕೆ.ಟಿ.ಎಂ ಬೈಕ್ ನಲ್ಲಿ ಬಂದು ಕದ್ದೊಯ್ಯದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಜೂನ್ 24 ರಂದು ಸ್ಪೀಡ್ ಪೋಸ್ಟ್ ಮಾಡಲು ವ್ಯಕ್ತಿಯೋರ್ವರು ತಮ್ಮ ಬೈಕ್ ಅನ್ನು ಅಂಚೆ ಕಚೇರಿಯ ಕಂಪೌoಡ್ ಒಳಗೆ ನಿಲ್ಲಿಸಿ ಹೆಲ್ಮೆಟ್ ಕೂಡ ಅದಲ್ಲೇ ಇಟ್ಟು ಸ್ಪೀಡ್ ಪೋಸ್ಟ್ ಮಾಡಲು ಹೋಗಿದ್ದರು. ಆದರೆ, ಬಂದು ನೋಡಿದಾಗ ಬೈಕ್ ಇತ್ತು ಹೆಲ್ಮೆಟ್ ಇರಲಿಲ್ಲ.

ಬರುವುದರೊಳಗಾಗಿ ಬೈಕ್ ನಲ್ಲಿದ್ದ ಹೆಲ್ಮೆಟ್ ಯಾರೋ ಕಳ್ಳತನ ಮಾಡಿ ಪರಾರಿಯಾಗಿದ್ದರು. ನಂತರ ವ್ಯಕ್ತಿ ಅಂಚೆ ಕಚೇರಿಯಲ್ಲಿರುವ ಸಿ ಸಿ.ಟಿ.ವಿ ಮತ್ತು ಅಲ್ಲೆ ಸಮೀಪವಿರುವ ಖಾಸಗಿ ಆಸ್ಪತ್ರೆಯ ಸಿ.ಸಿ ಟಿ.ವಿ ಪರಿಶೀಲಿಸಿದಾಗ ಯುವಕನೋರ್ವ ಟಿಪ್-ಟಾಪ್ ಬಟ್ಟೆ ಧರಿಸಿ, ದುಬಾರಿ ಕೆ.ಟಿ.ಎಂ ಬೈಕ್ ನಲ್ಲಿ ಬಂದು ಅಂಚೆ ಕಚೇರಿ ಕಂಪೌoಡ್ ಒಳಗಡೆ ನಿಲ್ಲಿಸಿಟ್ಟ ಬೈಕ್ ನಲ್ಲಿ ಹೆಲ್ಮೆಟ್ ಅನ್ನು ಕದ್ದು ಧರಿಸಿ , ಪರಾರಿಯಾಗಿದ್ದಾನೆ. ಈತ ಕಳ್ಳತನ ಮಾಡಿ ಪರಾರಿಯಾಗುವ ದೃಶ್ಯ ಸಿ.ಸಿ.ಟಿ.ವಿಯಲ್ಲಿ ಸೆರೆಯಾಗಿದೆ..

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button