=== console.log('header!'); // Easy to add and display post grid on your website with or without categoryies filter. Also work with Gutenberg shortcode block. === console.log('header!'); // Easy to add and display post grid on your website with or without categoryies filter. Also work with Gutenberg shortcode block.
Focus News
Trending

ಅಂಕೋಲಾ ಅರ್ಬನ್ ಬ್ಯಾಂಕ್ ATM ಕೇಂದ್ರ ಉದ್ಘಾಟನಾ ಕಾರ್ಯಕ್ರಮ : ಸರ್ವರಿಗೂ ಸ್ವಾಗತ ಕೋರಿದ ಬ್ಯಾಂಕಿನ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ : ಶಾಸಕರು, ಸಂಸದರ ಘನ ಉಪಸ್ಥಿತಿ

  • ಗ್ರಾಹಕರಿಗೆ ಮತ್ತಷ್ಟು ಸೌಲಭ್ಯ
  • ಡಿಜಿಟಲ್ ಬ್ಯಾಂಕಿಂಗ್‌ಗೆ ಮತ್ತೊಂದು ಹೆಜ್ಜೆ
  • ಅಂಕೋಲಾ ಅರ್ಬನ್ ಬ್ಯಾಂಕ್‌ನಿಂದ ATM ಸೇವೆ ಜೂನ್ 11ರಿಂದ

ಅಂಕೋಲಾ : ಅಂಕೋಲಾ ಅರ್ಬನ್ ಕೋ ಅಪ್ ಬ್ಯಾಂಕ್ ಲಿ ಅಂಕೋಲಾದ ಪ್ರಧಾನ ಕಛೇರಿ ಆವರಣದಲ್ಲಿ ATM ಸೇವಾ ಕೇಂದ್ರ ಉದ್ಘಾಟನೆಗೆ ಸಿದ್ಧಗೊಂಡಿದೆ .

113 ವರ್ಷಗಳ ಸುದೀರ್ಘ ಇತಿಹಾಸದೊಂದಿಗೆ ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ಹಿರಿತನ ಹೊಂದಿರುವ ದಿ ಅಂಕೋಲಾ ಅರ್ಬನ್ ಕೋ – ಆಪ್ ಬ್ಯಾಂಕ್ ಲಿಮಿಟೆಡ್ ಅಂಕೋಲಾ, ಈಗಾಗಲೇ ಅಂಕೋಲಾ, ಅವರ್ಸಾ,ಬೇಲೆಕೇರಿ, ಕಾರವಾರ, ಯಲ್ಲಾಪುರ, ಶಿರಸಿ , ಕುಮಟಾದಲ್ಲಿ ಶಾಖೆ ಹೊಂದಿದ್ದು ಉತ್ತಮ ಸೇವೆ ನೀಡುತ್ತ ಮುನ್ನಡೆಯುತ್ತಿದೆ.ಬದಲಾಗುತ್ತಿರುವ ಆಧುನಿಕ ಕಾಲಮಾನ ಪದ್ಧತಿಗೆ ಅನುಗುಣವಾಗಿ ಖಾಸಗಿ ಬ್ಯಾಂಕುಗಳ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳ ಪೈಪೋಟಿಯ ನಡುವೆಯೂ ಗ್ರಾಹಕರಿಗೆ ಮತ್ತಷ್ಟು ಉತ್ತಮ ಸೇವೆ ನೀಡಲು ಯುಪಿಐ ಪೇಮೆಂಟ್ ಸೇರಿದಂತೆ ಆಧುನಿಕ ಮತ್ತು ಡಿಜಿಟಲಿಕರಣಕ್ಕೆ ಬ್ಯಾಂಕ್ ತೆರೆದುಕೊಳ್ಳುತ್ತಿದೆ.

ಗ್ರಾಹಕರಿಗೆ ಇನ್ನಷ್ಟು ಹೆಚ್ಚಿನ ಸೇವೆ

ಜೂನ್ 11 ರಂದು ಬ್ಯಾಂಕಿನ ಅಂಕೋಲಾದ ಪ್ರಧಾನ ಕಛೇರಿ ಆವರಣದಲ್ಲಿ ನೂತನ ATM ಕೇಂದ್ರ ಆರಂಭಿಸುವ ಮೂಲಕ ಗ್ರಾಹಕರಿಗೆ ಇನ್ನಷ್ಟು ಹೆಚ್ಚಿನ ಸೇವೆ ನೀಡಲು ಸಿದ್ಧಗೊಳ್ಳುತ್ತಿದೆ. ಗುರುವಾರ ಬೆಳಿಗ್ಗೆ 10 ಗಂಟೆಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಲಿದ್ದು, ಶಾಸಕ ಸತೀಶ ಸೈಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಸರ್ವರಿಗೂ ಸ್ವಾಗತ

ಬ್ಯಾಂಕಿನ ಅಧ್ಯಕ್ಷ ರಾಜೇಂದ್ರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಇತರೆ ಅತಿಥಿ ಗಣ್ಯರುಪಾಲ್ಗೊಳ್ಳಲಿದ್ದಾರೆ. ಎ ಟಿ ಎಂ ಕೇಂದ್ರದ ಉದ್ಘಾಟನಾ ಸಮಾರಂಭಕ್ಕೆ ಬ್ಯಾಂಕಿನ ಅಧ್ಯಕ್ಷರಾದ ರಾಜೇಂದ್ರ ಎಸ್ ಶೆಟ್ಟಿ, ಉಪಾಧ್ಯಕ್ಷರಾದ ಉಮೇಶ ಜಿ ನಾಯ್ಕ, ನಿರ್ದೇಶಕರುಗಳಾದ ಭಾಸ್ಕರ ಕೆ ನಾರ್ವೇಕರ, ಗೋಪಾಲಕೃಷ್ಣ ಸಿ ನಾಯ್ಕ, ಬೈರವ ಡಿ ನಾಯ್ಕ, ಚಂದ್ರಕಾಂತ ಜಿ. ನಾಯ್ಕ, ಉದಯ ವಿ ನಾಯಕ, ಸಂತೋಷ ಎನ್ ಬಂಡಿಕಟ್ಟೆ, ಅನುರಾಧ ಎಸ್ ನಾಯ್ಕ, ಸುಧಾ ಜಿ ಶೆಟ್ಟಿ, ಸಂಜಯ ಸಿ ಮೋದಿ, ನಾಗಾನಂದ ಐ ಬಂಟ, ಗೌರಿ ಟಿ ಸಿದ್ದಿ, ವೃತ್ತಿಪರ ನಿರ್ದೇಶಕರಾದ ಯೋಗೀತಾ ವಿ ಕಾಮತ, ಗುರುನಾಥ ಬಿ ರಾಯ್ಕರ, ಪ್ರಭಾರಿ ಪ್ರಧಾನ ವ್ಯವಸ್ಥಾಪಕರಾದ ಉದಯ ಆರ್ ಶೇಣವಿ, ಹಾಗೂ ಸಿಬ್ಬಂದಿ ವೃಂದದವರು, ಎಟಿಎಂ ಕೇಂದ್ರ ಉದ್ಘಾಟನಾ ಕಾರ್ಯಕ್ರಮಕ್ಕೆ ಬ್ಯಾಂಕಿನ ಗ್ರಾಹಕರು
ಶೇರುದಾರರು ಹಾಗೂ ಸಾರ್ವಜನಿಕರು ಮತ್ತು ಸರ್ವರಿಗೂ ಸ್ವಾಗತ ಕೋರಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button