=== console.log('header!'); // Easy to add and display post grid on your website with or without categoryies filter. Also work with Gutenberg shortcode block. === console.log('header!'); // Easy to add and display post grid on your website with or without categoryies filter. Also work with Gutenberg shortcode block.
Big News
Trending

ಅಂಕೋಲಾ ತಾಲೂಕು ವಕೀಲರ ಸಂಘದ ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆ : ಅಧ್ಯಕ್ಷರಾಗಿ ವಿನಾಯಕ ನಾಯ್ಕ, ಉಪಾಧ್ಯಕ್ಷರಾಗಿ ನಾರಾಯಣ ನಾಯಕ : ಕಾರ್ಯದರ್ಶಿಯಾಗಿ ಆರ್ ಟಿ ಗೌಡ

ಅಂಕೋಲಾ : ಕ್ರಿಯಾಶೀಲ ಸಂಘಟನೆ ಮೂಲಕ ತನ್ನನ್ನು ಗುರುತಿಸಿಕೊಂಡಿರುವ ಅಂಕೋಲಾ
ತಾಲೂಕಿನ ವಕೀಲರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಅವಿರೋಧವಾಗಿ ನಡೆದಿದ್ದು, ಯುವ ನ್ಯಾಯವಾದಿಗಳಾದ ಬಬ್ರುವಾಡದ ವಿನಾಯಕ ಶಂಕರ ನಾಯ್ಕ ಅಧ್ಯಕ್ಷರಾಗಿ, ಆರ್ ಟಿ ಗೌಡ್ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಉಪಾಧ್ಯಕ್ಷರಾಗಿ ಸೂರ್ವೆಯ ನಾರಾಯಣ ಆರ್ ನಾಯಕ , ಖಜಾಂಚಿಯಾಗಿ ಪ್ರಕೃತಿ ನಾಯಕ ,ಸಹ ಕಾರ್ಯದರ್ಶಿಯಾಗಿ ತೇಜಾ ಬಂಟ, ಆಯ್ಕೆಯಾಗಿದ್ದು, ಹಿರಿಯ ವಕೀಲ ಮತ್ತು ನೋಟರಿಯಾಗಿರುವ ನಿತ್ಯಾನಂದ ಕವರಿ ಅವರು ಸಂಘದ ಗೌರವಾಧ್ಯಕ್ಷರಾಗಿದ್ದಾರೆ.

ಎಂ ಪಿ ಭಟ್, ವಿ ಎಸ್ ನಾಯಕ ,ಬಿ ಡಿ ನಾಯ್ಕ, ಬಿ ಟಿ ನಾಯಕ, ದಿಕ್ಷೀತ ನಾಯಕ , ಜಿ. ಎನ್ ನಾಯ್ಕ, ವಿನೋದ ಶಾನಭಾಗ, ಸುರೇಶ ಬಾನಾವಳಿಕರ, ಎಸ್ ಜಿ ನಾಯ್ಕ, ಜಿ. ವಿ ನಾಯ್ಕ, ಪಿ ಎಲ್ ನಾಯ್ಕ ಕಾರ್ಯಕಾರಿ ಸಮಿತಿಯಲ್ಲಿದ್ದು ಇತರೆ ಹಿರಿ ಕಿರಿಯ ವಕೀಲರು ಸಮಿತಿಯ ಸರ್ವ ಸದಸ್ಯರಾಗಿದ್ದಾರೆ. ಹಿರಿಯ ವಕೀಲ ವಿ. ಎಸ್ ನಾಯಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆ ಪ್ರಕ್ರಿಯೆ ನೆರವೇರಿತು. ನಿಕಟಪೂರ್ವ ಅಧ್ಯಕ್ಷರಾದ ಪ್ರತಿಭಾ ನಾಯ್ಕ ಮತ್ತು ಕಾರ್ಯದರ್ಶಿ ಮಮತಾ ಕೆರೆಮನೆ ಕಳೆದ ಸಾಲಿನ ಸಂಘದ ಲೆಕ್ಕ ಪತ್ರ ಓದಿ ಹೇಳಿದರು. ಸಂಘದ ಇತರೆ ಪದಾಧಿಕಾರಿಗಳು ಸದಸ್ಯರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button